Ad Widget .

ಉಜಿರೆ: ಕಾಂಗ್ರೆಸ್ ಮುಖಂಡ ಸಂಚರಿಸುತ್ತಿದ್ದ ಕಾರಿಗೆ ಕಲ್ಲೇಟು

ಸಮಗ್ರ ನ್ಯೂಸ್: ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಸಂಚರಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ ಘಟನೆ ನಡೆದಿದೆ.

Ad Widget . Ad Widget .

ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಬಾರ್‌& ರೆಸ್ಟೋರೆಂಟ್ ಮಾಲೀಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರವೀಣ್ ಫರ್ನಾಂಡೀಸ್ ಸಂಚರಿಸುತ್ತಿದ್ದ ಪಜಿರೋ ಕಾರಿಗೆ ಉಜಿರೆ ಅನುಗ್ರಹ ಶಾಲೆಯ ಬಳಿ ಕಲ್ಲು ತೂರಾಟ ನಡೆಸಿದ್ದಾರೆ.

Ad Widget . Ad Widget .

ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಆಪ್ತರಾಗಿ ಗುರುತಿಸಿಕೊಂಡಿದ್ದ ಪ್ರವೀಣ್ ಚುನಾವಣಾ ಪ್ರಚಾರಕ್ಕೆ ಜೊತೆಯಲ್ಲಿ ಹೋಗುತ್ತಿದ್ದರು. ಇದೇ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇತ್ತೀಚೆಗೆ ಪ್ರವೀಣ್ ಬಗ್ಗೆ ಅವಹೇಳನ ಮಾಡಿ ಪೋಸ್ಟ್ ಮಾಡಿದ್ದರು.

ಪ್ರವೀಣ್ ಫರ್ನಾಂಡೀಸ್ ಮೇಲೆ ಹಲವು ಭಾರಿ ದಾಳಿ ಮಾಡಲಾಗಿತ್ತು. ಬಳಿಕ ಸರಕಾರದಿಂದ ಪಿಸ್ತೂಲ್ ಪಡೆದುಕೊಂಡಿದ್ದರು. ಇದರಿಂದ ಕೆಲ ವರ್ಷ ದುಷ್ಕರ್ಮಿಗಳು ಅಟ್ಟಹಾಸ ನಿಲ್ಲಿಸಿದ್ದರು. ಚುನಾವಣಾ ಸಂದರ್ಭದಲ್ಲಿ ಪಿಸ್ತೂಲ್ ಸ್ಥಳೀಯ ಠಾಣೆಗೆ ಒಪ್ಪಿಸಲಾಗಿದ್ದು. ಇದರಿಂದ ದುಷ್ಕರ್ಮಿಗಳಿಗೆ ಪ್ರವೀಣ್ ಮೇಲೆ ದಾಳಿ ಮಾಡಲು ಸುಲಭವಾಗಿದೆ ಎನ್ನಲಾಗಿದೆ. ಕಾರಿನ ಮೇಲೆ ದಾಳಿ ಮಾಡಿದ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ಪ್ರವೀಣ್ ಫರ್ನಾಂಡೀಸ್ ದೂರು ನೀಡಿದ್ದಾರೆ.

Leave a Comment

Your email address will not be published. Required fields are marked *