Ad Widget .

ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ತೇಜೋವಧೆ| ಇದರಿಂದ ಪಕ್ಷ ಸಂಘಟನೆ ಮಾಡಲು, ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲು ಇನ್ನಷ್ಟು ಸ್ಫೂರ್ತಿ: ಹಾರಿಸ್ ಬೈಕಂಪಾಡಿ

ಸಮಗ್ರ ನ್ಯೂಸ್: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲೇ ಸುದೀರ್ಘವಾಗಿ ಗುರುತಿಸಿಕೊಂಡಿದ್ದ ನಾನು ಮೊಯಿದಿನ್ ಬಾವರವರಿಗೆ ಟಿಕೆಟ್ ಪಡೆಯಲು ಕಟ್ಟಾ ಬೆಂಬಲಿಗನಾಗಿ ಕೊನೆಯ ತನಕ ಪ್ರಾಮಾಣಿಕವಾಗಿ ಪ್ರಯತ್ನಿಸಿ ಅವರ ಜೊತೆಗಿದ್ದೆ. ಹೈಕಮಾಂಡ್ ಇನಾಯತ್ ಅಲಿಯವರಿಗೆ ಟಿಕೆಟ್ ನೀಡಿದಾಗ ಪಕ್ಷ ನಿಷ್ಠೆಯಲ್ಲಿರುವ ನನಗೆ ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲೇಬೇಕಾಯಿತು.

Ad Widget . Ad Widget .

ರಾಜಕೀಯ ಜೀವನದಲ್ಲಿ ಪಕ್ಷಕ್ಕೆ ಕಪ್ಪುಚುಕ್ಕೆಯಾಗುವ ಯಾವುದನ್ನೂ ಮಾಡದೆ ಒಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ನನಗೆ ಮೊಯ್ದಿನ್ ಬಾವರನ್ನು ಬೆಂಬಲಿಸಲು ಮಾನಸಿಕವಾಗಿ ಸಿದ್ಧನಿಲ್ಲದ ಕಾರಣ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧನಾಗಿ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಇನಾಯತ್ ಅಲಿಯವರನ್ನು ಬೆಂಬಲಿಸಿದ ಏಕೈಕ ಕಾರಣವನ್ನೇ ನೆಪವಾಗಿಟ್ಟುಕೊಂಡು ನಾನು ಮಾಡಿದ ದೊಡ್ಡ ಮಹಾಪರಾಧ. ಎಂದು ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ತೇಜೋವಧೆಗೆ ಹೊರಟಿರುವ ಕೆಲವು ಶಕ್ತಿಗಳು ಕೈಲಾಗದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರವೆಂಬಂತೆ ಗೀಚುವವರು ಕೀಳು ಮಟ್ಟದ ಮನೋಸ್ಥಿತಿಯನ್ನು ಬಿಟ್ಟು ಆರೋಗ್ಯಕರವಾಗಿ ರಾಜಕೀಯ ಮಾಡಲು ಪ್ರಯತ್ನಿಸಲೆಂದೆ ನನ್ನ ಹಾರೈಕೆ.

Ad Widget . Ad Widget .

ಕಾಂಗ್ರೆಸ್ ನ ಮಾಜಿ ಶಾಸಕರಾದ ಹಾಗೂ ಜಿಡಿಎಸ್ ನಉತ್ತರ ಕ್ಷೇತ್ರದ ಅಭ್ಯರ್ಥಿ ಬಿ.ಎ. ಮೊಹಿದಿನ್ ಬಾವ ಅವರ ಆಪ್ತ ವಲಯದಲ್ಲಿ ಗುರುತಿಸಕೊಂಡಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿಯೂ ಆದ ಹಾರಿಸ್ ಬೈಕಂಪಾಡಿಯವರು ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭರ್ಥಿಯಾರ ಇನಾಯತ್ ಆಲಿ ಪರವಾಗಿ
ಮತಯಾಚನೆ ಮಾಡುವ ಮೂಲಕ ಮೊಹಿದಿನ್ ಬಾವ ಪಾಲಯದಲ್ಲಿ ಅಚ್ಚರಿಮಾಡಿಸಿದ್ದರು, ಮೊಹಿದಿನ್ ಬಾವ ಅವರು ಕಾಂಗ್ರೆಸ್ ನಲ್ಲಿ ಇದ್ದ ವೇಳೆ ಅವರ ಆಪ್ತರರಲ್ಲಿ ಓರ್ವರಾಗಿ ಗುರುತಿಸುಕೊಂಡಿದ್ದರು, ನಂತರ ನಡೆದ ಬೆಳವಣಿಗೆಯಿಂದಾಗಿ ಮೊಹಿದಿನ್ ಬಾವ ಅವರು ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಅಲ್ಲದೆಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿ ಚುನಾವಣಾ ಕಣಕ್ಕಿಳಿದಿದ್ದಾರೆ. ಮೊಹಿದಿನ್ ಭಾವ ಅವರ ತಕ್ಷಣದ ನಿರ್ಧಾರದಿಂದ ಮನನೊಂದಿದ್ದ ಹಾರಿಸ್ ಬೈಕಂಪಾಡಿಯವರು ಅತ್ತ ಮೊಹಿದಿನ್ ಬಾವ ಜೊತೆ ಕಾಣಿಸಿಕೊಳ್ಳದೆ, ಇತ್ತ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳದೆ ಚುನಾವಣಾ ಪ್ರಚಾರ ಮತ್ತು ರಾಜಕೀಯದಿಂದಲೇ ದೂರ ಉಳಿದಿದ್ದರು,ನಂತರ ಮಾಜಿ ಸಚಿವರು ಶಾಸಕರು ಆದಂತಹ ಯು.ಟಿ.ಖಾದರ್ ಸಹಿತ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರುಗಳು ಹಾರಿಸ್ ಬೈಕಂಪಾಡಿಯವರನ್ನು ಸಂಪರ್ಕಿಸಿ ಮನವೊಲಿಸಿದ್ದರು, ಸದ್ಯದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಇನಾಯತ್ ಆಲಿ ಪರ ಕ್ಷೇತ್ರದಲ್ಲಿ ಮತಯಾಚನೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು.

Leave a Comment

Your email address will not be published. Required fields are marked *