ಸಮಗ್ರ ನ್ಯೂಸ್: 2023ರ ಏಪ್ರಿಲ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್ಟಿ ಆದಾಯ 1,87,035 ಕೋಟಿ ರೂಪಾಯಿ ತಲುಪಿದೆ. ಇದರಲ್ಲಿ ಸಿಜಿಎಸ್ಟಿ 38,440 ಕೋಟಿ ರೂ., ಎಸ್ಜಿಎಸ್ಟಿ 47,412 ಕೋಟಿ ರೂ., ಐಜಿಎಸ್ಟಿ 89,158 ಕೋಟಿ ರೂ., (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 34,972 ಕೋಟಿ ರೂ.ಸೇರಿದಂತೆ) ಮತ್ತು ಸೆಸ್ 12,025 ಕೋಟಿ ರೂಪಾಯಿ ಆಗಿದೆ.
ಸಿಜಿಎಸ್ಟಿಗೆ 45,864 ಕೋಟಿ ರೂ., ಐಜಿಎಸ್ಟಿಯಿಂದ ಎಸ್ಜಿಎಸ್ಟಿಗೆ 37,959 ಕೋಟಿ ರೂ. ನಿಯಮಿತ ಇತ್ಯರ್ಥದ ನಂತರ 2023ರ ಏಪ್ರಿಲ್ ತಿಂಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್ಟಿಗೆ 84,304 ಕೋಟಿ ಮತ್ತು ಎಸ್ಜಿಎಸ್ಟಿಗೆ 85,371 ಕೋಟಿ ರೂಪಾಯಿ ಆಗಿದೆ.
2023ರ ಏಪ್ರಿಲ್ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿನ ಜಿಎಸ್ಟಿ ಆದಾಯಕ್ಕಿಂತ 12% ಹೆಚ್ಚಾಗಿದೆ. ಈ ತಿಂಗಳಲ್ಲಿ, ದೇಶೀಯ ವಹಿವಾಟುಗಳಿಂದ ಬರುವ ಆದಾಯವು (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷದ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ 16% ಹೆಚ್ಚಾಗಿದೆ.
ಮೊದಲ ಬಾರಿಗೆ ಒಟ್ಟು ಜಿಎಸ್ಟಿ ಸಂಗ್ರಹವು 1.75 ಲಕ್ಷ ಕೋಟಿ ರೂ.ಗಳನ್ನ ದಾಟಿದೆ. ಮಾರ್ಚ್ 2023ರಲ್ಲಿ ಒಟ್ಟು ಇ-ವೇ ಬಿಲ್ಗಳ ಸಂಖ್ಯೆ 9.0 ಕೋಟಿ, ಇದು 2023 ರ ಫೆಬ್ರವರಿ ತಿಂಗಳಲ್ಲಿ ಉತ್ಪತ್ತಿಯಾದ 8.1 ಕೋಟಿ ಇ-ವೇ ಬಿಲ್ಗಳಿಗಿಂತ 11% ಹೆಚ್ಚಾಗಿದೆ.