April 2023

ಬಿಜೆಪಿ ಸರ್ಕಾರದ 40% ಕಮಿಷನ್ ನಿಂದ ಅಭಿವೃದ್ಧಿ ಮೇಲೆ‌ ಬರೆ| ಸುಳ್ಯದಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಕಿಡಿ

ಸಮಗ್ರ ನ್ಯೂಸ್: ‘ ಬಿಜೆಪಿ ಸರ್ಕಾರವು ಪ್ರತಿಯೊಂದು ಕ್ಷೇತ್ರದಲ್ಲೂ ಕಮಿಷನ್ ಹೊಡೆಯುತ್ತಿದ್ದು, ಅಭಿವೃದ್ಧಿ ಕುಂಠಿತವಾಗಿದೆ, ಕಾಮಗಾರಿ, ಯೋಜನೆಗಳು ಹಳ್ಳ ಹಿಡಿದಿದ್ದು, ಇದರ ವಿರುದ್ಧ ಜನಸಾಮಾನ್ಯರು ಹೋರಾಡಬೇಕಿದೆ’ ಎಂದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಸುಳ್ಯದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ಹಲವು ಸ್ತರಗಳಲ್ಲಿ ಲೂಟಿ ಹೊಡೆಯಲಾಗುತ್ತಿದೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದರೂ ನಾ ತಿನ್ನಲ್ಲ, ತಿನ್ನಲು ಬಿಡಲ್ಲ ಎಂದು ಘೋಷಿಸಿಕೊಳ್ಳುತ್ತಿರುವ ಪ್ರಧಾನಿಗಳ ಹೇಳಿಕೆ ಹಾಸ್ಯಾಸ್ಪದ. ಯುವಕರು, ಶಿಕ್ಷಿತರು ಉದ್ಯೋಗ ವಂಚಿತರಾಗಿದ್ದು, ಭಾರತದಲ್ಲಿ […]

ಬಿಜೆಪಿ ಸರ್ಕಾರದ 40% ಕಮಿಷನ್ ನಿಂದ ಅಭಿವೃದ್ಧಿ ಮೇಲೆ‌ ಬರೆ| ಸುಳ್ಯದಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಕಿಡಿ Read More »

ಸುರತ್ಕಲ್: “ಉತ್ತರ ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ” -ಇನಾಯತ್ ಅಲಿ

ಸಮಗ್ರ ನ್ಯೂಸ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು ಇಂದು ಮುತ್ತೂರು ಗ್ರಾಮ ವ್ಯಾಪ್ತಿಯ ಮನೆ ಮನೆಗೆ ತೆರಳಿ ಕಾಂಗ್ರೆಸ್ ನ ನಾಲ್ಕು ಗ್ಯಾರಂಟಿಗಳ ಕುರಿತು ಮಾಹಿತಿ ನೀಡಿ, ಕ್ಷೇತ್ರದ ಪ್ರಗತಿಗಾಗಿ ಕಾಂಗ್ರೆಸ್ ಗೆ ಬೆಂಬಲ ನೀಡುವಂತೆ ಜನರಲ್ಲಿ ಮತಯಾಚಿಸಿದರು. ಚುನಾವಣಾ ಪ್ರಚಾರದ ಭಾಗವಾಗಿ ಇಂದು ಮುತ್ತೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ನೌಶಾದ್ ಮುತ್ತೂರು ಅವರ ನಿವಾಸದಲ್ಲಿ ಸಭೆ ನಡೆಸಿ ಮಾತನಾಡಿ, “ಮಂಗಳೂರು ಉತ್ತರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತ ನೀಡುವಂತೆ

ಸುರತ್ಕಲ್: “ಉತ್ತರ ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ” -ಇನಾಯತ್ ಅಲಿ Read More »

“ಈ ಬಾರಿ ಜೆಡಿಎಸ್ ಪಕ್ಷಕ್ಕೆ ಜನತೆ ಮಣೆ ಹಾಕಲಿದ್ದಾರೆ” -ಮೊಯಿದೀನ್ ಬಾವಾ

ಸಮಗ್ರ ನ್ಯೂಸ್: “ರಾಜ್ಯದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬಲವಾಗಿ ಬೀಸುತ್ತಿದ್ದು ಜನತೆ ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಲಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ನಾನು ಶಾಸಕನಾಗಿದ್ದಾಗ ಮಾಡಿದ್ದ ಜನಪರ ಯೋಜನೆಗಳು ಮತ್ತು ಅಭಿವೃದ್ಧಿಯನ್ನು ನೋಡಿ ಜನರು ಮತ ಕೊಟ್ಟು ಗೆಲ್ಲಿಸಲಿದ್ದಾರೆ. ಪ್ರಚಾರ ಸಂದರ್ಭದಲ್ಲಿ ನನ್ನ ಪರ ಇರುವ ಜನರ ಬೆಂಬಲ ನೋಡಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ನಡುಕ ಶುರುವಾಗಿದೆ” ಎಂದು ಉತ್ತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮೊಯಿದೀನ್ ಬಾವಾ ಹೇಳಿದ್ದಾರೆ. ಅವರು ಸೋಮವಾರ ಪಂಜಿಮೊಗರು,

“ಈ ಬಾರಿ ಜೆಡಿಎಸ್ ಪಕ್ಷಕ್ಕೆ ಜನತೆ ಮಣೆ ಹಾಕಲಿದ್ದಾರೆ” -ಮೊಯಿದೀನ್ ಬಾವಾ Read More »

ಮೇ ೩ ರಂದು ಮುಲ್ಕಿಗೆ ಮೋದಿ…..!!

ಸಮಗ್ರ ನ್ಯೂಸ್ : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆ ಕೇಂದ್ರ ನಾಯಕರ ದಂಡೆ ಇದೀಗ ಕರ್ನಾಟಕದತ್ತ ಆಗಮಿಸುತ್ತಿದ್ದು, ಇದೀಗ ಕರಾವಳಿಗೆ ಪ್ರಚಾರಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಮೇ.೩ರಂದು ಆಗಮಿಸಲಿದ್ದಾರೆ. ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಮೇ ೬ ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದು, ಸಮಾವೇಶ ಏರ್ಪಡಿಸುವ ಸ್ಥಳ ಇನ್ನೂ

ಮೇ ೩ ರಂದು ಮುಲ್ಕಿಗೆ ಮೋದಿ…..!! Read More »

ಪುತ್ತೂರು: ಫೇಸ್‌ಬುಕ್‌ನಲ್ಲಿ ಅಪ್ರಾಪ್ತೆಯ ಪರಿಚಯ| ಜಾತ್ರೆಯಂದು ಅತ್ಯಾಚಾರ

ಸಮಗ್ರ ನ್ಯೂಸ್: ಫೇಸ್‌ಬುಕ್‌ನಲ್ಲಿ ಅಪ್ರಾಪ್ತೆಯನ್ನು ಪರಿಚಯವಾಗಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ ಭೇಟಿಯಾಗಿ ಅತ್ಯಾಚಾರ ನಡೆಸಿದ ಬಗ್ಗೆ ಅಪ್ರಾಪ್ತೆಯೋರ್ವಳು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಕೆಯ್ಯೂರು ಗ್ರಾಮದ ಮಾಡವು ನಿವಾಸಿ ನವೀನ್ ಪ್ರಕರಣದ ಆರೋಪಿ. ನವೀನ್ ಫೇಸ್‌ಬುಕ್‌ನಲ್ಲಿ ಪರಿಚಯವಾದ ಕಾಸರಗೋಡು ಮೂಲದ ಅಪ್ರಾಪ್ತೆಯನ್ನು ಎ.೧೬ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ ಭೇಟಿಯಾಗಿದ್ದ. ಬಳಿಕ ಆಕೆಯನ್ನು ಪುಸಲಾಯಿಸಿ ರಾತ್ರಿ ಸ್ಕೂಟರ್‌ನಲ್ಲಿ ಕೆಯ್ಯೂರಿನ ಮಾಡಾವು ಅಂಗನವಾಡಿ ಬಳಿ ಕರೆದೊಯ್ದು ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿ ದೂರು

ಪುತ್ತೂರು: ಫೇಸ್‌ಬುಕ್‌ನಲ್ಲಿ ಅಪ್ರಾಪ್ತೆಯ ಪರಿಚಯ| ಜಾತ್ರೆಯಂದು ಅತ್ಯಾಚಾರ Read More »

ಮುಸ್ಲಿಂ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ತಡೆ

ಸಮಗ್ರ ನ್ಯೂಸ್: ಮುಸ್ಲಿಂ ಮೀಸಲಾತಿ 2ಬಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಸುಮಾರು ನಾಲ್ಕು ದಶಕಗಳಿಂದ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ರಾಜ್ಯ ಸರ್ಕಾರ ಮುಸ್ಲಿಮರ ಮೀಸಲಾತಿ ಕಿತ್ತುಕೊಂಡು ಒಕ್ಕಲಿಗ ಮತ್ತು ಲಿಂಗಾಯತರಿಗೆ ತಲಾ ಶೇ. 2ರಷ್ಟು ಮೀಸಲಾತಿ ಹಂಚಿಕೆ ಮಾಡಿತ್ತು. ಈ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಅವರ ನೇತೃತ್ವದ

ಮುಸ್ಲಿಂ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ತಡೆ Read More »

ಪುಟ್ಟ ಬಾಲಕಿಯ ಪಿಯಾನೋ ನುಡಿಸುವಿಕೆಗೆ ಮನಸೋತ ಮೋದಿ

ಸಮಗ್ರ ನ್ಯೂಸ್: ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ, ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತಾ ಎಂಬ ಕನ್ನಡ ಹಾಡಿಗೆ ಪಿಯಾನೋ ನುಡಿಸಿದ ಪುಟ್ಟ ಬಾಲಕಿಯ ಪ್ರತಿಭೆಗೆ ಪ್ರಧಾನಿ ನರೇಂದ್ರ ಮೋದಿ ಮನಸೋತಿದ್ದಾರೆ. ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಈ ವಿಡಿಯೋ ಪ್ರತಿಯೊಬ್ಬರ ಮುಖದ ಮೇಲೆ ಮುಗುಳುನಗೆ ತರಿಸಬಹುದು. ಅನನ್ಯ ಪ್ರತಿಭೆ ಹಾಗೂ ಸೃಜನಶೀಲತೆ. ಶಾಲ್ಮಲಿಗೆ ಶುಭಹಾರೈಕೆಗಳು ಎಂದು ಬರೆದಿದ್ದಾರೆ. ಆಕೆಯ ತಾಯಿ ಹಾಡಿನ ಸಾಲುಗಳನ್ನು ಹೇಳುತ್ತಿದ್ದಂತೆ ಬಾಲಕಿ ಕೂಡ ಪಿಯಾನೋದಲ್ಲಿ ಅದೇ ಹಾಡನ್ನು ನುಡಿಸುವ ಮೂಲಕ ಲಕ್ಷಾಂತರ ಮಂದಿಯ ಶ್ಲಾಘನೆಗೆ

ಪುಟ್ಟ ಬಾಲಕಿಯ ಪಿಯಾನೋ ನುಡಿಸುವಿಕೆಗೆ ಮನಸೋತ ಮೋದಿ Read More »

ಸುಳ್ಯಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಸಮಗ್ರ ನ್ಯೂಸ್: ಕಾಂಗ್ರೆಸ್ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದೀಗ ಸುಳ್ಯಕ್ಕೆ ಆಗಮಿಸಿದ್ದಾರೆ. ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದಾರೆ. ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಸುಳ್ಯದ ಹೆಲಿಪ್ಯಾಡ್ ಗೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಸಮಾವೇಶ ನಡೆಯಲಿರುವ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಸಭಾಂಗಣದ ಬಳಿ ಆಗಮಿಸಿ ಸಭೆಯಲ್ಲಿ ಭಾಗವಹಿಸಿ, ಪಾಲ್ಗೊಂಡಿದ್ದಾರೆ‌. ಸುಳ್ಯಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ನಾಯಕರು

ಸುಳ್ಯಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ Read More »

ಸುಳ್ಯದಿಂದ ಸಂಪಾಜೆ ವರೆಗಿನ ಕೃಷಿಕರಿಗೆ ಮಹತ್ವದ ಸೂಚನೆ

ಸಮಗ್ರ ನ್ಯೂಸ್: ಸುಳ್ಯ ನಗರದಿಂದ ಸಂಪಾಜೆ ವರೆಗೆ ಪಯಸ್ವಿನಿ ನದಿಗೆ ಕೃಷಿ ಪಂಪ್ ಗಳನ್ನು ಅಳವಡಿಸಿದ ಕೃಷಿಕರಿಗೆ ಸುಳ್ಯ ತಹಶೀಲ್ದಾರ್ ಮಹತ್ವದ ಸೂಚನೆ ನೀಡಿದ್ದಾರೆ. ಸುಳ್ಯ ನಗರಕ್ಕೆ ನೀರಿನ ಸಮಸ್ಯೆ ಎದುರಾಗಿರುವುದರಿಂದ, ಸುಳ್ಯ ನಗರದಿಂದ ಸಂಪಾಜೆ ವರೆಗೆ ಪಯಸ್ವಿನಿ ನದಿಗೆ ಕೃಷಿ ಪಂಪ್ ಗಳನ್ನು ಅಳವಡಿಸಿದ ಕೃಷಿಕರು ತಮ್ಮ ಕೃಷಿ ಉಪಯೋಗಕ್ಕಾಗಿ ಎರಡು ದಿನಗಳಿಗೊಮ್ಮೆ ಮಾತ್ರ ಬಳಸಿಕೊಳ್ಳುವಂತೆ ಸುಳ್ಯ ತಹಶೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುಳ್ಯ ನಗರಕ್ಕೆ ಕುಡಿಯುವ ನಿರೀನ ಮೂಲಧಾರವಾಗಿರುವ ಪಯಸ್ವಿನಿ ನದಿಯ ನೀರಿನ ಹರಿವು

ಸುಳ್ಯದಿಂದ ಸಂಪಾಜೆ ವರೆಗಿನ ಕೃಷಿಕರಿಗೆ ಮಹತ್ವದ ಸೂಚನೆ Read More »

ಸುಳ್ಯ: ಬಿಗಡಾಯಿಸಿದ ನೀರಿನ ಸಮಸ್ಯೆ| ತುರ್ತು ಸಭೆ ಕರೆಯಲು ಡಿಸಿ, ತಹಶೀಲ್ದಾರ್ ಗೆ ಮನವಿ

ಸಮಗ್ರ ನ್ಯೂಸ್: ಸುಳ್ಯ ನಗರದ ಕುಡಿಯುವ ನೀರು ಸರಬರಾಜಿಗೆ ಮೂಲಧಾರವಾಗಿರುವ ಪಯಸ್ವಿನಿ ನದಿಯ ಹರಿವು ಸಂಪೂರ್ಣ ನಿಂತು ಹೋಗಿದ್ದು, ಮಳೆ ಬಾರದೆ ಬಿಸಿಲಿನ ಝಳ ಮುಂದುವರಿದಲ್ಲಿ ಕೇವಲ ಮೂರ್ನಾಲ್ಕು ದಿನಗಳಷ್ಟು ಸಮಯಕ್ಕೆ ಮಾತ್ರ ನಗರಕ್ಕೆ ನೀರು ಸರಬರಾಜು ಸಾಧ್ಯವಿರುವುದು ಕಂಡುಬರುತ್ತಿದೆ. ಈ ಹಿನ್ನಲೆಯಲ್ಲಿ ನಗರಕ್ಕೆ ನೀರು ಸರಬರಾಜು ಕುರಿತಂತೆ ಅನೇಕ ತುರ್ತು ಕ್ರಮಗಳನ್ನು ಕೈಗೊಳ್ಳುವುದು ತೀರಾ ಅಗತ್ಯವಿರುತ್ತದೆ. ಆದರೆ ಚುನಾವಣೆ ನೀತಿ ಸಂಹಿತೆಯ ಹಿನ್ನಲೆಯಲ್ಲಿ ಪ್ರತಿನಿಧಿಗಳ ಸಭೆ ನಡೆಸಿ, ಪಂಚಾಯತ್ ಪರಿಹಾರೋಪಾಯಗಳ ಕುರಿತು ಚರ್ಚಿಸಿ ನಿರ್ಧಾರಕೈಗೊಳ್ಳಲು ಅಸಾಧ್ಯವಾಗಿರುತ್ತದೆ.

ಸುಳ್ಯ: ಬಿಗಡಾಯಿಸಿದ ನೀರಿನ ಸಮಸ್ಯೆ| ತುರ್ತು ಸಭೆ ಕರೆಯಲು ಡಿಸಿ, ತಹಶೀಲ್ದಾರ್ ಗೆ ಮನವಿ Read More »