April 2023

ಕೋಟಿ ರೂಪಾಯಿ ಬೆಲೆಬಾಳುವ ಮರ್ಸಿಡಿಸ್ ಕಾರು ಖರೀದಿಸಿದ ನಟ ರಮೇಶ್ ಅರವಿಂದ್

ಸಮಗ್ರ ನ್ಯೂಸ್: ಸ್ಟಾರ್​​ ನಟ, ನಟಿಯರ ಜತೆ ದುಬಾರಿ ಬೆಲೆ ಬಾಳುವ ಕಾರುಗಳಿವೆ. ಇದೇ ಸಾಲಿಗೆ ಸ್ಯಾಂಡಲ್​ವುಡ್​​ ನಟ ರಮೇಶ್ ಅರವಿಂದ್ ಕೂಡಾ ಸೇರ್ಪಡೆಯಾಗುತ್ತಿದ್ದಾರೆ. ರಮೇಶ್ ಹೊಚ್ಚ ಹೊಸ ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಕಾರು ಖರೀದಿಸಿದ್ದಾರೆ. ರಮೇಶ್ ಅರವಿಂದ್ ಬಳಿ ಈಗಾಗಲೇ ಕೆಲ ಐಷಾರಾಮಿ ಕಾರುಗಳಿವೆ. ಈ ಬಾರಿ ರಮೇಶ್ ಅವರು ಐಷಾರಾಮಿ ಮರ್ಸಿಡಿಸ್ ಬೆಂಜ್ ಇ ಕ್ಲಾಸ್ ಕಾರು ಖರೀದಿಸಿದ್ದಾರೆ. ಇದರ ಆನ್‌ರೋಡ್ ಬೆಲೆ ಸರಿ ಸುಮಾರು 1 ಕೋಟಿ ರೂಪಾಯಿ. ಕಪ್ಪು ಬಣ್ಣದ […]

ಕೋಟಿ ರೂಪಾಯಿ ಬೆಲೆಬಾಳುವ ಮರ್ಸಿಡಿಸ್ ಕಾರು ಖರೀದಿಸಿದ ನಟ ರಮೇಶ್ ಅರವಿಂದ್ Read More »

ವಿಜಯಪುರ: ರಥದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು

ಸಮಗ್ರ ನ್ಯೂಸ್: ರಥೋತ್ಸವದ ವೇಳೆ ಆಯತಪ್ಪಿ ಮೇಲಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿಯಲ್ಲಿ ನಡೆದಿದೆ. ಗೋಲಗೇರಿಯ ಗೊಲ್ಲಾಳೇಶ್ವರ ರಥೋತ್ಸವದಲ್ಲಿ ಅವಘಡ ಸಂಭವಿಸಿದೆ. ಗೋಲಗೇರಿ ನಿವಾಸಿ ಮುದುಕಣ್ಣ ಕಾಚಾಪುರ(50) ಮೃತ ದುರ್ದೈವಿ. ಈತ ಮೇಲಿನಿಂದ ಕೆಳಕ್ಕೆ ಬಿದ್ದ ಸಂದರ್ಭದಲ್ಲಿ ರಥದ ಬಳಿ ನಿಂತಿದ್ದ ಮತ್ತೋರ್ವನಿಗೆ ಗಾಯವಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆಗೆ ಒಳಪಡಿಸಲಾಗಿದೆ. ಮೃತ ಮುದುಕಣ್ಣ ಕಾಚಾಪುರ ಸುಮಾರು 70 ಅಡಿ ಎತ್ತರದ ರಥದ ಮೇಲೇರಿ ಕಳಶ ಕಟ್ಟುತ್ತಿದ್ದ.

ವಿಜಯಪುರ: ರಥದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು Read More »

ಸುಳ್ಯ: ರಾಜಕಾರಣಿಗಳಿಗೆ ಗೇಟಿನೊಳಗೆ ನೋ ಎಂಟ್ರಿ| ಬೋರ್ಡ್ ಹಾಕಿ ಕಿವಿ ಹಿಂಡಿದ ಗ್ರಾಮಸ್ಥ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಅಸೆಂಬ್ಲಿ‌ ಚುನಾವಣೆ ಗರಿಗೆದರಿದೆ. ರಾಜಕಾರಣಿಗಳು ಜನರನ್ನು ಯಾಮಾರಿಸಲು ಪ್ರಯತ್ನಪಟ್ಟರೆ, ಜನರು ಅವರಿಗೆ ಬುದ್ದಿ ಕಲಿಸಲು ಅಣಿಯಾಗ್ತಿದಾರೆ. ವಿವಿಧ ರಾಜಕೀಯ ಪಕ್ಷದ ನಾಯಕರು ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿದ್ದರೆ ಮತ್ತೊಂದೆಡೆ ಜಾಣ ಮತದಾರ ಇದುವರೆಗೆ ತಿರುಗಿ ನೋಡದ ರಾಜಕಾರಣಿಗಳಿಗೆ ಪಾಠ ಕಲಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಮತದಾನ ನಮ್ಮ ಹಕ್ಕು ಸೂಕ್ತವಾಗಿ ಸ್ಪಂದಿಸದ ಜನಪ್ರತಿನಿಧಿಗಳಿಗೆ ಓಟು ಕೊಡುವುದಿಲ್ಲ ಅನ್ನುವ ಕೂಗು ಸುಳ್ಯ ತಾಲೂಕಿನ ಹಲವು ಕಡೆ ಕೇಳಿ ಬಂದಿದೆ. ಇದೀಗ ಅಜ್ಜಾವರದ ಮುಂಡೋಳಿಮೂಲೆಯಲ್ಲೂ ಇಂಥಹುದ್ದೇ ಒಂದು

ಸುಳ್ಯ: ರಾಜಕಾರಣಿಗಳಿಗೆ ಗೇಟಿನೊಳಗೆ ನೋ ಎಂಟ್ರಿ| ಬೋರ್ಡ್ ಹಾಕಿ ಕಿವಿ ಹಿಂಡಿದ ಗ್ರಾಮಸ್ಥ Read More »

ಮಹಿಳೆ ಜೊತೆಗಿನ ಅಶ್ಲೀಲ ಫೋಟೋ ವೈರಲ್| ದೂರು ದಾಖಲಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು

ಸಮಗ್ರ ನ್ಯೂಸ್: ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ನೆಕ್ಕಿಲಾಡಿ ಮೂಲದ ಮಹಿಳೆಯೊಬ್ಬರ ಜತೆ ಆತ್ಮೀಯವಾಗಿರುವ ಕೆಲ ಫೊಟೊಗಳು ಫೇಸ್‌ ಬುಕ್‌, ವಾಟ್ಸಾಪ್‌ ಸಹಿತ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು ಈ ಕುರಿತು ಶಾಸಕ ಮಠಂದೂರು ಸೈಬರ್‌ ಕ್ರೈಮ್‌ ಪೊಲೀಸರಿಗೆ ದೂರು ನೀಡಿದ್ದಾರೆ.‌ ಬೆಂಗಳೂರಿನ ಗಾಂಧಿನಗರದಲ್ಲಿರುವ ಅಲಸೂರು ಗೇಟ್‌ ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಯಲ್ಲಿ ಮಠಂದೂರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಚುನಾವಣಾ ಸಂದರ್ಭ, ಅದರಲ್ಲೂ ಟಿಕೆಟ್‌ ಘೋಷಣೆಗೆ ಪಕ್ಷ ಸಿದ್ದತೆ ನಡೆಸುತ್ತಿರುವ ವೇಳೆ ಮಾನ

ಮಹಿಳೆ ಜೊತೆಗಿನ ಅಶ್ಲೀಲ ಫೋಟೋ ವೈರಲ್| ದೂರು ದಾಖಲಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು Read More »

ಪೋಟೋ ವೈರಲ್ ಬೆನ್ನಲ್ಲೇ ಶಾಸಕರ ಅಶ್ಲೀಲ ವಿಡಿಯೋ ಬಾಂಬ್?! “ಪಿಚ್ಚರ್ ಅಬೀ ಬಾಕಿ ಹೇ” ಎಂದು ಬರೆದುಕೊಂಡ ನೆಟ್ಟಿಗರು

ಸಮಗ್ರ ನ್ಯೂಸ್: ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಮಹಿಳೆಯೊಬ್ಬರ ಜೊತೆಗಿದ್ದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು ಇದೀಗ ವೀಡಿಯೊ ವೈರಲ್ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಒಬ್ಬೊಬ್ಬರ ಒಂದೊಂದು ಮುಖವಾಡಗಳು ಹೊರಬೀಳುತ್ತಿದ್ದು ಇದೀಗ ಪುತ್ತೂರು ಶಾಸಕರ ರಾಸಲೀಲೆಯಲ್ಲಿ ತೊಡಗಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಹರಿದಾಡುತ್ತಿವೆ. ಇದೀಗ ಹೊರಬಿದ್ದಿದ್ದು ಟ್ರೈಲರ್ ಇನ್ನು ಪಿಚ್ಚರ್ ಬಾಕಿ ಇದ್ದು ಅದರ ವೀಡಿಯೋ ಕೂಡ ಇಂದು- ನಾಳೆಯಲ್ಲಿ ಹೊರಬೀಳಲಿದೆಯೆಂದು ಸಾಮಾಜಿಕ ಜಾಲ

ಪೋಟೋ ವೈರಲ್ ಬೆನ್ನಲ್ಲೇ ಶಾಸಕರ ಅಶ್ಲೀಲ ವಿಡಿಯೋ ಬಾಂಬ್?! “ಪಿಚ್ಚರ್ ಅಬೀ ಬಾಕಿ ಹೇ” ಎಂದು ಬರೆದುಕೊಂಡ ನೆಟ್ಟಿಗರು Read More »

ಏ.27ರಂದು ಪ್ರವೀಣ್ ನೆಟ್ಟಾರು ಮನೆ ಗೃಹಪ್ರವೇಶ

ಸಮಗ್ರ ನ್ಯೂಸ್: ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹೊಸ ಮನೆ ಗೃಹ ಪ್ರವೇಶಕ್ಕೆ ಮುಹೂರ್ತ ನಿಗದಿಯಾಗಿದೆ. ರಾಜ್ಯ ಬಿಜೆಪಿ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ನೇತೃತ್ವದಲ್ಲಿ 60 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣವಾಗುತ್ತಿದ್ದು, ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. 2,700 ಚದರ ಅಡಿಯಲ್ಲಿ ಮುಗ್ರೋಡಿ ಕನ್ಸ್ಟ್ರಕ್ಷನ್ ಮನೆ ನಿರ್ಮಾಣ ಮಾಡುತ್ತಿದೆ. 2022ರ ನ. 2ರಂದು ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ (Bellare) ಯ ನೆಟ್ಟಾರುವಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್

ಏ.27ರಂದು ಪ್ರವೀಣ್ ನೆಟ್ಟಾರು ಮನೆ ಗೃಹಪ್ರವೇಶ Read More »

ಮಂಗಳೂರು: ದೆಹಲಿ ಮೂಲದ ಯುವತಿ ನಾಪತ್ತೆ…!!

Samagra news: ಹೊಸದಿಲ್ಲಿಯ ಯುವತಿಯೊಬ್ಬಳು ಮಂಗಳೂರಿನಲ್ಲಿ ನಾಪತ್ತೆಯಾಗಿರುವ ಕುರಿತಂತೆ ದೂರು ದಾಖಲಾಗಿದೆ. ನಾಪತ್ತೆಯಾದ ಯುವತಿ ದೀಕ್ಷಿತಾ ಅಲಿಯಾಸ್‌ ರಿಯಾ (20). ಈಕೆ ಅಶೋಕನಗರ ಗೋಕುಲ ಕಲ್ಯಾಣ ಮಂಟಪ ಬಳಿ ತನ್ನ ಬಂಧುಗಳ ಮನೆಯಲ್ಲಿ ಕಳೆದ 5 ವರ್ಷಗಳಿಂದ ನೆಲೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ವ್ಯಸ್ತವಾಗಿರುತ್ತಿದ್ದ ಹಿನ್ನೆಲೆಯಲ್ಲಿ ಮನೆಯವರು ಬುದ್ಧಿಮಾತು ಹೇಳಿದ್ದರು ಎನ್ನಲಾಗಿದ್ದು. ಎಪ್ರಿಲ್ 4ರಂದು ಸಂಜೆ 5 ಗಂಟೆಗೆ ಮನೆಯಿಂದ ತೆರಳಿದವರು ಮರಳಿಲ್ಲ. ಚಹರೆ: ಎತ್ತರ 5.1 ಅಡಿ ಎತ್ತರ, ದುಂಡು ಮುಖ ಗೋಧಿ ಮೈಬಣ್ಣ. ಮನೆಯಿಂದ ಹೋಗುವಾಗ

ಮಂಗಳೂರು: ದೆಹಲಿ ಮೂಲದ ಯುವತಿ ನಾಪತ್ತೆ…!! Read More »

ಕಾಂಗ್ರೆಸ್ ನ ಎರಡನೇ ಪಟ್ಟಿ ರಿಲೀಸ್| 42 ಕ್ಷೇತ್ರಗಳಲ್ಲಿ ಯಾರಿಗೆಲ್ಲಾ ಟಿಕೆಟ್ ಗೊತ್ತಾ?

ಸಮಗ್ರ ನ್ಯೂಸ್: ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಗಾಗಿ ಚುನಾವಣಾ ಸಮಿತಿಯ ಸಭೆ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿಯ ಹೆಸರು ಫೈನಲ್ ಮಾಡುವ ನಿಟ್ಟಿನಲ್ಲಿ ಸತತ ಎರಡು ದಿನಗಳ ಕಾಲ ದೆಹಲಿಯ ಎಐಸಿಸಿ ಕಚೇರಿಯಲ್ಲಿ ( AICC Office ) ಕಾಂಗ್ರೆಸ್ ಚುನಾವಣಾ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ

ಕಾಂಗ್ರೆಸ್ ನ ಎರಡನೇ ಪಟ್ಟಿ ರಿಲೀಸ್| 42 ಕ್ಷೇತ್ರಗಳಲ್ಲಿ ಯಾರಿಗೆಲ್ಲಾ ಟಿಕೆಟ್ ಗೊತ್ತಾ? Read More »

ಮಂಗಳೂರು: ಕರಾವಳಿಯ ಬಿಜೆಪಿ ಶಾಸಕನೊಂದಿಗಿನ ಖಾಸಗಿ ಫೋಟೋ ವೈರಲ್| ಮಹಿಳೆಯಿಂದ ದೂರು ದಾಖಲು

ಸಮಗ್ರ ನ್ಯೂಸ್: ಮಹಿಳೆಯೊಬ್ಬರು ಕರಾವಳಿಯ ಬಿಜೆಪಿ ಶಾಸಕರೊಬ್ಬರ ಜೊತೆಗೆ ಆತ್ಮೀಯವಾಗಿರುವ ಸೆಲ್ಫಿ ಪೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಸಂತ್ರಸ್ತ ಮಹಿಳೆಯು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈಕೆ ನೆಕ್ಕಿಲಾಡಿ ಸಮೀಪದವರು ಎಂದು ಗುರುತಿಸಲಾಗಿದ್ದು, ಈಕೆ ಎ.೫ ರಂದು ಸಂಜೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ. ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಪೋಟೊ ಅಸಲಿ/ ಎಡಿಟೆಡ್ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸ್ ತನಿಖೆ ನಡೆಯಲಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ

ಮಂಗಳೂರು: ಕರಾವಳಿಯ ಬಿಜೆಪಿ ಶಾಸಕನೊಂದಿಗಿನ ಖಾಸಗಿ ಫೋಟೋ ವೈರಲ್| ಮಹಿಳೆಯಿಂದ ದೂರು ದಾಖಲು Read More »

ಹವಾಮಾನದಲ್ಲಿ ದಿಢೀರ್ ಬದಲಾವಣೆ| 5 ಜಿಲ್ಲೆಗಳಲ್ಲಿ ಪ್ರಾಕೃತಿಕ ವಿಕೋಪ ಸಾಧ್ಯತೆ| ಡಿಸಿಗಳಿಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ

ಸಮಗ್ರ ನ್ಯೂಸ್: ಹವಾಮಾನದಲ್ಲಿ ದಿಢೀರ್ ಬದಲಾವಣೆ‌ ನಡೆದಿದ್ದು, ಬೆಂಗಳೂರು ಹವಾಮಾನ ಕೇಂದ್ರ 5 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ. ಆಯಾ ಜಿಲ್ಲಾಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ದಿಢೀರ್ ಹವಾಮಾನದಲ್ಲಿ ಬದಲಾವಣೆಯಾಗಿದ್ದು, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಕೊಡಗು ಭಾಗದಲ್ಲಿ ಮಳೆರಾಯ ಅಬ್ಬರಿಸಲಿದ್ದಾನೆ. ಬಿರುಗಾಳಿ, ಗುಡುಗು-ಮಿಂಚು ಸಹಿತ ಮಳೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಭಾಗದಲ್ಲಿ ಗಂಟೆಗೆ 30-40 ಕಿ.ಮೀ.ವೇಗದಲ್ಲಿ ಗಾಳಿ ಬೀಸುತ್ತಿದೆ. ಮಾರುತಗಳು ರಾಜ್ಯದ ಗಡಿ ದಾಟಿ

ಹವಾಮಾನದಲ್ಲಿ ದಿಢೀರ್ ಬದಲಾವಣೆ| 5 ಜಿಲ್ಲೆಗಳಲ್ಲಿ ಪ್ರಾಕೃತಿಕ ವಿಕೋಪ ಸಾಧ್ಯತೆ| ಡಿಸಿಗಳಿಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ Read More »