ಸುಳ್ಯ: ‘ದಲಿತೋದ್ಧಾರ’ ವೆಂದು ಮೈಲೇಜ್ ತೆಗೆದುಕೊಳ್ಳಲು ಹೋಗಿ ಟ್ರೋಲ್ ಗೆ ಒಳಗಾದ ನಳಿನ್ ಕುಮಾರ್ ಕಟೀಲ್| ಮೀಸಲು ಕ್ಷೇತ್ರದಲ್ಲಿ “ಬಿಟ್ಟಿ ಬಿಲ್ಡಪ್” ಎಂದು ಕಾಲೆಳೆದ ನೆಟ್ಟಿಗರು
ಸಮಗ್ರ ನ್ಯೂಸ್: ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಮಹಿಳೆ ಭಾಗೀರಥಿ ಮುರುಳ್ಯ ಅವರಿಗೆ ಟಿಕೆಟ್ ನೀಡಿರುವುದನ್ನು ಉಲ್ಲೇಖಿಸಿ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಡಿರುವ ಟ್ವೀಟ್ ವ್ಯಾಪಕ ಟ್ರೋಲ್‌ಗೆ ಗುರಿಯಾಗಿದೆ. ‘ದಲಿತೋದ್ಧಾರ ಎಂಬುದು ಬಿಜೆಪಿಗೆ ಭಾಷಣದ ಸರಕಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ, ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಆದಿದ್ರಾವಿಡ ಸಮುದಾಯದ ಓರ್ವ ಮಹಿಳೆ, ಮಹಿಳಾ ಮೋರ್ಚಾದ ಸಾಮಾನ್ಯ ಕಾರ್ಯಕರ್ತೆ ‘ಭಾಗೀರಥಿ ಮುರುಲ್ಯ’ರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಈ ಎಲ್ಲವೂ ಬಿಜೆಪಿಯಲ್ಲಿ ಮಾತ್ರ ಸಾಧ್ಯ!’ ಎಂದು […]