ಸುಳ್ಯ: ಮತ್ತೆ ಸಕ್ರಿಯ ರಾಜಕಾರಣಕ್ಕೆ “ಎಸ್” ಎಂದ ಅಂಗಾರ| ರಾಜಕೀಯ ನಿವೃತ್ತಿ ತಕ್ಷಣದ ನೋವಷ್ಟೇ ಎಂದು ವರಸೆ ಬದಲಿಸಿದ ಸಚಿವ!!
ಸಮಗ್ರ ನ್ಯೂಸ್: 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾದ ಬೆನ್ನಲ್ಲೇ ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ದ ಸುಳ್ಯ ಶಾಸಕ ಎಸ್.ಅಂಗಾರ ನಿವೃತ್ತಿಯ ಮಾತುಗಳನ್ನಾಡಿದ್ದರು. ಆದರೆ ಇಂದು ವರಸೆ ಬದಲಿಸಿದ ಸಚಿವ ಎಸ್.ಅಂಗಾರ, ಮೊನ್ನೆ ದಿನ ನಾನು ರಾಜಕೀಯ ನಿವೃತ್ತಿಯ ಹೇಳಿಕೆ ನೀಡಿದ್ದೆ. ಅದು ತತ್‌ಕ್ಷಣದ ನೋವಾಗಿತ್ತು. ಇದೀಗ ನನ್ನ ಹೇಳಿಕೆಯನ್ನು ನಾನು ಹಿಂಪಡೆಯುತ್ತಿದ್ದು, ರಾಜಕೀಯದಲ್ಲಿ ಈ ಹಿಂದಿನಂತೆ ಸಕ್ರಿಯನಾಗಿರುತ್ತೇನೆ. ಜತೆಗೆ ನಮ್ಮ ಅಭ್ಯರ್ಥಿ ಭಾಗೀರಥಿಯವರ ಗೆಲುವಿನ ಜವಾಬ್ದಾರಿ ನಾನೇ ತೆಗೆದುಕೊಳ್ಳವುದಾಗಿ ಎಂದು ಸಚಿವ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯದಲ್ಲಿ […]