April 2023

ಹವಾಮಾನ ವರದಿ| ಕರಾವಳಿಯಲ್ಲಿ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಎ.15 ರಿಂದ 18ರ ವರೆಗೆ ಮಳೆಯ ನಿರೀಕ್ಷೆ ಇದೆ. ನಾಲ್ಕು ದಿನಗಳ ಕಾಲ ಕರಾವಳಿ ಭಾಗದಲ್ಲಿ ಎಲ್ಲೋ ಅಲರ್ಟ್‌ ಘೊಷಿಸಲಾಗಿದೆ. ಶುಕ್ರವಾರ ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ದಿನವಿಡೀ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಕರಾವಳಿ ಕರ್ನಾಟಕದ ಭಾಗಗಳಾದ, ಹೊನ್ನಾವರ 34.1, ಕಾರವಾರ 35.7, ಶಿರಾಲಿ 35.9 ಮಂಗಳೂರು ವಿಮಾನ ನಿಲ್ದಾಣದಲ್ಲಿ […]

ಹವಾಮಾನ ವರದಿ| ಕರಾವಳಿಯಲ್ಲಿ ಮಳೆ ಮುನ್ಸೂಚನೆ Read More »

ಮೂಡಿಗೆರೆ: ದೇವರ ಮನೆ ಸಮೀಪ ಒಂದ ಕಿ.ಮೀ ರಸ್ತೆಯಲ್ಲಿ ಓಡಿದ ಕರಡಿ

Samagra news: ಮೂಡಿಗೆರೆ ತಾಲೂಕಿನ ಐತಿಹಾಸಿಕ ತಾಣ ದೇವರ ಮನೆ ಹೋಗುವ ರಸ್ತೆಯಲ್ಲಿ ಮಾ.14ರ ರಾತ್ರಿ ಕರಡಿಯೊಂದು ಸ್ಥಳೀಯರೊಬ್ಬರ ಕಾರಿಗೆ ಅಡ್ಡಲಾಗಿ ಬಂದು ಸುಮಾರು ಒಂದು ಕಿಲೋಮೀಟರ್ ನಷ್ಟು ರಸ್ತೆಯಲ್ಲಿ ಓಡಿದ ಘಟನೆ ನಡೆದಿದೆ. ದೇವರು ಮನೆ ಹಾಗೂ ಕೋಗಿಲೆ ಗ್ರಾಮದ ಮಧ್ಯೆ ಈ ಘಟನೆ ಸಂಭವಿಸಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಹಿಂದೆ ಕಾಡಾನೆ ಹಲವಾರು ಬಾರಿ ಇದೇ ರಸ್ತೆಯಲ್ಲಿ ಹೋಗುವ ವಾಹನಗಳ ಮೇಲೆ ದಾಳಿ ನಡೆಸಿದ್ದು ಇಲ್ಲಿ ಸ್ಮರಿಸಬಹುದು.

ಮೂಡಿಗೆರೆ: ದೇವರ ಮನೆ ಸಮೀಪ ಒಂದ ಕಿ.ಮೀ ರಸ್ತೆಯಲ್ಲಿ ಓಡಿದ ಕರಡಿ Read More »

ಒಂದೂವರೆ ವರ್ಷ ಮಂತ್ರಿಯಾಗಿದ್ದರು ಯಾವುದೇ ಅಭಿವೃದ್ಧಿಯಾಗಿಲ್ಲ|ಸವದಿ ಪಕ್ಷ ಬಿಟ್ಟು ಹೋಗಿದ್ದು ಪೀಡೆ ತೊಲಗಿದಂತಾಗಿದೆ: ರಮೇಶ್‌ ಜಾರಕಿಹೊಳಿ

Samagra news: ಲಕ್ಷ್ಮಣ ಸವದಿ (Laxman Savadi) ಪಕ್ಷ ಬಿಟ್ಟು ಹೋಗಿದ್ದು ಪೀಡೆ ತೊಲಗಿದಂತಾಗಿದೆ ಎಂದು ಸವದಿ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಿಡಿಕಾರಿದರು. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತಾನಾಡಿದ ಅವರು, ಸೋತವರನ್ನು ಪಕ್ಷ ಡಿಸಿಎಂ ಮಾಡಿತ್ತು. ಆದರೆ ಅವನು ಪಕ್ಷ ನಿಷ್ಠೆ ತೋರಿಸಿಲ್ಲ. ಬದಲಾಗಿ ಇಂದು ನಮ್ಮನ್ನು ಬಿಟ್ಟು ಹೋಗಿದ್ದಾನೆ, ನಮಗೆ ಒಳ್ಳೆದಾಗಿದೆ. ರಮೇಶ್‌ ಜಾರಕಿಹೊಳಿ ಮತ್ತೆ ಕಾಂಗ್ರೆಸ್‌ ಹೋಗುತ್ತಾನೆ ಎಂಬ ಯೋಚನೆ ಸವದಿ ತಲೆಯಲ್ಲಿ ಇತ್ತು. ಆದರೆ

ಒಂದೂವರೆ ವರ್ಷ ಮಂತ್ರಿಯಾಗಿದ್ದರು ಯಾವುದೇ ಅಭಿವೃದ್ಧಿಯಾಗಿಲ್ಲ|ಸವದಿ ಪಕ್ಷ ಬಿಟ್ಟು ಹೋಗಿದ್ದು ಪೀಡೆ ತೊಲಗಿದಂತಾಗಿದೆ: ರಮೇಶ್‌ ಜಾರಕಿಹೊಳಿ Read More »

ಸುಳ್ಯ: ಬಿ ಫಾರಂ ಹಂಚಿಕೆ ಪೆಂಡಿಂಗ್| ಮತ್ತೊಂದು ಸರ್ವೆ ರೆಡಿ ಮಾಡಲು ಡಿಕೆಶಿ ಸೂಚನೆ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬಿ ಫಾರಂ ಹಂಚಿಕೆ ಮಾಡುತ್ತಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಬಿ ಫಾರಂ ಅನ್ನು ಪಕ್ಷದ ಅಭ್ಯರ್ಥಿ ಕೃಷ್ಣಪ್ಪ ಜಿ ಇವರಿಗೆ ನೀಡದೇ‌ ಪೆಂಡಿಂಗ್ ಇರಿಸಲಾಗಿದೆ. ಕ್ಷೇತ್ರದಲ್ಲಿ ಮತ್ತೊಂದು ಸರ್ವೆ ನಡೆಸಿ ವರದಿ ಬಳಿಕ ಬಿ ಫಾರಂ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತೀರ್ಮಾನಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಸಭೆಯ ಬಳಿಕ ಟಿಕೆಟ್ ಆಕಾಂಕ್ಷಿ ನಂದಕುಮಾರ್ ಹಾಗೂ ಅಧಿಕೃತ ಅಭ್ಯರ್ಥಿ ‌ಜಿ. ಕೃಷ್ಣಪ್ಪ ಜೊತೆ ಅವರು ಮಾತುಕತೆ ನಡೆಸಿದರು.

ಸುಳ್ಯ: ಬಿ ಫಾರಂ ಹಂಚಿಕೆ ಪೆಂಡಿಂಗ್| ಮತ್ತೊಂದು ಸರ್ವೆ ರೆಡಿ ಮಾಡಲು ಡಿಕೆಶಿ ಸೂಚನೆ Read More »

ಯಾವ ರಾಜ್ಯದ ಮುಖ್ಯಮಂತ್ರಿ ಅತೀ ಸಿರಿವಂತರು ಗೊತ್ತ?

ಸಮಗ್ರ ನ್ಯೂಸ್: ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಯಾರಾರು ಎಷ್ಟೆಷ್ಟು ಸಿರಿವಂತರು ಎಂಬ ವರದಿಯನ್ನು ಅಸೊಶಿಯೇಷನ್ ಫಾರ್ ಡೆಮಾಕ್ರಟಿಕ್ ರಿಪಾರ್ಮ್ಸ್‌ ಸಂಸ್ಥೆ ದೇಶದ ಬಿಡುಗಡೆ ಮಾಡಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರು ಒಟ್ಟು ₹512 ಕೋಟಿ ಆಸ್ತಿಯೊಂದಿಗೆ ದೇಶದಲ್ಲಿಯೇ ನಂಬರ್ 1 ಶ್ರೀಮಂತ ಸಿಎಂ ಎನಿಸಿಕೊಂಡಿದ್ದಾರೆ. ₹15 ಲಕ್ಷ ಆಸ್ತಿಯೊಂದಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ‍ಪಟ್ಟಿಯಲ್ಲಿ ಕೊನೆಯ ಸ್ಥಾನ (30ನೇ ಸ್ಥಾನ) ಪಡೆದಿದ್ದಾರೆ. ಮಮತಾ ಬ್ಯಾನರ್ಜಿ ಅವರನ್ನು ಹೊರತುಪಡಿಸಿದರೆ 30 ಮುಖ್ಯಮಂತ್ರಿಗಳಲ್ಲಿ 29

ಯಾವ ರಾಜ್ಯದ ಮುಖ್ಯಮಂತ್ರಿ ಅತೀ ಸಿರಿವಂತರು ಗೊತ್ತ? Read More »

ಕರ್ನಾಟಕ ವಿಧಾನಸಭಾ ಚುನಾವಣೆ| ಜನ್ ಕಿ ಬಾತ್ ಸಮೀಕ್ಷೆಯಲ್ಲಿ ಬಿಜೆಪಿಯೇ ಮೇಲುಗೈ| ಅಧಿಕಾರ ಹಿಡಿಯುವಲ್ಲಿ ಮೂರೂ ಪಕ್ಷಗಳೂ ವಿಫಲ ಸಾಧ್ಯತೆ

ಸಮಗ್ರ ನ್ಯೂಸ್: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಅತಂತ್ರ ವಿಧಾನಸಭೆ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಜನ್‌ ಕಿ ಬಾತ್‌ ಸಮೀಕ್ಷೆಯಲ್ಲಿ ತಿಳಿದುಬಂದಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 98 ರಿಂದ 109 ಸ್ಥಾನ ಗೆಲ್ಲಬಹುದು ಎಂದಿದ್ದರೆ, ಕಾಂಗ್ರೆಸ್‌ 89 ರಿಂದ 97 ಸ್ಥಾನಗಳನ್ನು ಗೆಲ್ಲಬಹುದು. ಜೆಡಿಎಸ್‌ 25-29 ಸ್ಥಾನಗಳನ್ನು ಗೆಲ್ಲಲಿದ್ದರೆ, ಇತರೆ 0 ಯಿಂದ 1 ಸ್ಥಾನ ಗೆಲ್ಲಬಹುದು ಎಂದು ತಿಳಿಸಲಾಗಿದೆ. 2018ರ ಚುನಾವಣೆಯಲ್ಲಿ ಜನ್‌ ಕಿ ಬಾತ್‌ ಬಿಜೆಪಿ 102

ಕರ್ನಾಟಕ ವಿಧಾನಸಭಾ ಚುನಾವಣೆ| ಜನ್ ಕಿ ಬಾತ್ ಸಮೀಕ್ಷೆಯಲ್ಲಿ ಬಿಜೆಪಿಯೇ ಮೇಲುಗೈ| ಅಧಿಕಾರ ಹಿಡಿಯುವಲ್ಲಿ ಮೂರೂ ಪಕ್ಷಗಳೂ ವಿಫಲ ಸಾಧ್ಯತೆ Read More »

ಮಂಗಳೂರು: ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನಾ ಸಮಾರಂಭ| 9 ದಿನ ನಡೆಯಲಿದೆ ವಿವಿಧ ಕಲಾತ್ಮಕ ಕಾರ್ಯಕ್ರಮ

ಸಮಗ್ರ ನ್ಯೂಸ್: ಸ್ವರ ಮಾಧುರ್ಯ ಬಳಗ ಪುತ್ತೂರು ಇದರ ವತಿಯಿಂದ ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ಬಿಗ್ ಸಿಟಿ ಇದರ ಸಹಯೋಗದಲ್ಲಿ ಮಂಗಳೂರು ಆಫೀಸರ್ ಕ್ಲಬ್ ಹ್ಯಾಟ್ ಹಿಲ್ ನಲ್ಲಿ ಕಲಿಯೋಣ ಬನ್ನಿ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಮಾ.14ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ

ಮಂಗಳೂರು: ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನಾ ಸಮಾರಂಭ| 9 ದಿನ ನಡೆಯಲಿದೆ ವಿವಿಧ ಕಲಾತ್ಮಕ ಕಾರ್ಯಕ್ರಮ Read More »

ಜೆಡಿಎಸ್ ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ| ಕೈ ಕೊಟ್ಟು ತೆನೆ ಹೊತ್ತ ದಿವ್ಯಪ್ರಭಾಗೆ ಪುತ್ತೂರು ಟಿಕೆಟ್

ಸಮಗ್ರ ನ್ಯೂಸ್: ಜೆಡಿಎಸ್ ಪಕ್ಷದ 49 ಕ್ಷೇತ್ರಗಳ ಎರಡನೇ ಪಟ್ಟಿಯನ್ನು ಮಾ.14 ರಂದು ಬಿಡುಗಡೆ ಮಾಡಿದೆ. ಬೆಂಗಳೂರಿನ‌ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಜೆಡಿಎಸ್ ಪಕ್ಷದ 49 ಕ್ಷೇತ್ರಗಳಿಗೆ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು. ಇಂದು ಮುಂಜಾನೆಯಷ್ಟೇ ಜೆಡಿಎಸ್ ಗೆ ಸೇರ್ಪಡೆಗೊಂಡ ಪುತ್ತೂರು ಕಾಂಗ್ರೆಸ್ ಮುಖಂಡೆ ಹಾಗೂ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕಗೆ ಪುತ್ತೂರು ಟಿಕೆಟ್ ನೀಡಿದ್ದು, ಉಳಿದಂತೆ ವಿವಿಧ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ

ಜೆಡಿಎಸ್ ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ| ಕೈ ಕೊಟ್ಟು ತೆನೆ ಹೊತ್ತ ದಿವ್ಯಪ್ರಭಾಗೆ ಪುತ್ತೂರು ಟಿಕೆಟ್ Read More »

ಜೆಡಿಎಸ್ ನಿಂದ ಹಾಸನದಲ್ಲಿ ಸ್ವರೂಪ್ ಗೆ ಸಿಂಹಾಸನ

ಸಮಗ್ರ ನ್ಯೂಸ್: ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಕ್ಷೇತ್ರದ ಟಿಕೆಟ್ ಅನ್ನು ಕೊನೆಗೂ ಜೆಡಿಎಸ್ ಪಕ್ಷದ ನಿಷ್ಠಾವಂತ ಪ್ರಬಲ ಆಕಾಂಕ್ಷಿಯಾಗಿದ್ದ ಸ್ವರೂಪ್ ಗೆ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರಿನ ಜೆಡಿಎಸ್ ಪಕ್ಷದ ಅಧಿಕೃತ ಕಚೇರಿ ಜೆಪಿ ಭವನದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಹಾಸನ ಕ್ಷೇತ್ರದ ಅಭ್ಯರ್ಥಿಯಾಗಿ ಸ್ವರೂಪ್ ಗೆ ಟಿಕೆಟ್ ನೀಡುತ್ತಿರುವುದಾಗಿ ಘೋಷಣೆ ಮಾಡಿದರು. ಇದಕ್ಕೂ ಮುನ್ನ ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಾಗೂ ಹೆಚ್ ಡಿಕೆ ಕೆಲ ಕಾಲ ಹಾಸನ

ಜೆಡಿಎಸ್ ನಿಂದ ಹಾಸನದಲ್ಲಿ ಸ್ವರೂಪ್ ಗೆ ಸಿಂಹಾಸನ Read More »

ಸಂಪಾಜೆ ಅಪಘಾತ; ಆರಕ್ಕೆ ಏರಿದ ಸಾವಿನ ಸಂಖ್ಯೆ

ಸಮಗ್ರ ನ್ಯೂಸ್: ಕಾರು ಮತ್ತು ಬಸ್ ನಡುವೆ ಸಂಪಾಜೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಪೈಕಿ ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳು ಹಾಗೂ ಓರ್ವ ಗಂಡಸು ಉಸಿರು ಚೆಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಕಾರಿನಲ್ಲಿ ಚಾಲಕ ಸೇರಿದಂತೆ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ನಾಲ್ವರು ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದಾಗಲೇ ಅವರೆಲ್ಲರೂ ಮೃತಪಟ್ಟಿದ್ದಾರೆ ಎಂದು

ಸಂಪಾಜೆ ಅಪಘಾತ; ಆರಕ್ಕೆ ಏರಿದ ಸಾವಿನ ಸಂಖ್ಯೆ Read More »