April 2023

ಬಟ್ಟೆ ಎಕ್ಸಚೇಂಜ್ ಮಾಡದಕ್ಕೆ ಅಂಗಡಿ ಮಾಲೀಕನ ವಿರುದ್ಧ ದೂರು ದಾಖಲು

Samagra news: ರಂಜಾನ್ ಹಬ್ಬಕ್ಕೆ ಮುಸ್ಲೀಂ ಸಮುದಾಯ ಹಬ್ಬಕ್ಕಾಗಿ ಹೊಸ ಬಟ್ಟೆ ಖರೀದಿಯು ಜೋರಾಗಿದೆ. ಇದರ ನಡುವೆ ಇಲ್ಲೊಂದು ಕುಟುಂಬ ಬಟ್ಟೆ ಅಂಗಡಿಯ ಮಾಲೀಕ ಮತ್ತು ಇಬ್ಬರ ಕೆಲಸಗಾರರ ವಿರುದ್ಧ ದೂರು ದಾಖಲಿಸಿದೆ. ಆರ್ ಎಂ ಎಲ್ ನಗರದ ನಿವಾಸಿ ಅಬ್ದುಲ್ ಖಾದರ್ ಎಂಬುವರ ಸೊಸೆ ಹಬ್ಬದ ಪ್ರಯುಕ್ತ ಗಾಂಧಿ ಬಜಾರ್ ನ ಬಟ್ಟೆ ಅಂಗಡಿಗೆ ತೆರಳಿ 2500 ರೂ. ಮೌಲ್ಯದ ಬಟ್ಟೆ ಖರೀದಿಸಿದ್ದಾರೆ. ಆದರೆ ಈ ಬಟ್ಟೆಯ ಸೈಜ್ ಹೆಚ್ಚು ಕಡಿಮೆಯಿದ್ದ ಕಾರಣ ಮರುದಿನ ಅಬ್ದುಲ್ […]

ಬಟ್ಟೆ ಎಕ್ಸಚೇಂಜ್ ಮಾಡದಕ್ಕೆ ಅಂಗಡಿ ಮಾಲೀಕನ ವಿರುದ್ಧ ದೂರು ದಾಖಲು Read More »

ಕಾರ್ಕಳ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ

Samagra news: ಕಾರ್ಕಳ ವಿಧಾನಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಭಿನ್ನಮತ ಸ್ಪೋಟವಾಗಿದ್ದು ಮುದ್ರಾಡಿ ಮಂಜುನಾಥ ಪೂಜಾರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಟಿಕೆಟ್ ಕೈತಪ್ಪಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿರುವ ಅವರು, ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಬದಲಾವಣೆಯ ನಿರೀಕ್ಷೆ ಮಾಡಿದ್ದೆವು. ಆದರೆ ಅವರು ಆಡಿದ್ದೇ ಬೇರೆ ಮಾಡಿದ್ದೇ ಬೇರೆ. ಪಕ್ಷ ಕಟ್ಟಿದವರ ಅವಗಣನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾರ್ಕಳ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ Read More »

ಕೊಟ್ಟಿಗೆಹಾರ: ಮಲೆಮನೆಯಲ್ಲಿ ೪ ಲೀಟರ್ ಕಳ್ಳಭಟ್ಟಿ ವಶ

Samagra news: ಮಲೆಮನೆ ಗ್ರಾಮದ ಕಳ್ಳಭಟ್ಟಿ ಅಡ್ಡೆಯ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದು ೪ ಲೀಟರ್ ಕಳ್ಳಭಟ್ಟಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಮಲೆಮಲೆ ಗ್ರಾಮದ ರೂಪ ಎಂಬುವವರಿಗೆ ಸೇರಿದ ಮನೆ ಹಾಗೂ ಕಾಫಿ ತೋಟದ ಮೇಲೆ ದಾಳಿ ನಡೆಸಿದ್ದ ಪೊಲೀಸರು ೩೦೦ ಲೀ ಬೆಲ್ಲದ ಕೊಳೆ, ೪ ಲೀ ಕಳ್ಳಭಟ್ಟಿ ಸರಾಯಿ ವಶಪಡಿಸಿಕೊಂಡು ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಅಪೂರ್ವ, ಸಿಬ್ಬಂದಿಗಳಾದ ಮಲ್ಲಪ್ಪ ಹೆಗ್ಗಣವರ್, ರಮೇಶ್, ಶಿವಣ್ಣ, ವಾಹನ ಚಾಲಕ ಸತೀಶ್

ಕೊಟ್ಟಿಗೆಹಾರ: ಮಲೆಮನೆಯಲ್ಲಿ ೪ ಲೀಟರ್ ಕಳ್ಳಭಟ್ಟಿ ವಶ Read More »

ಕಾರ್ಕಳ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ

Samagra news: ಕಾರ್ಕಳ ವಿಧಾನಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಭಿನ್ನಮತ ಸ್ಪೋಟವಾಗಿದ್ದು ಮುದ್ರಾಡಿ ಮಂಜುನಾಥ ಪೂಜಾರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಟಿಕೆಟ್ ಕೈತಪ್ಪಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿರುವ ಅವರು, ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಬದಲಾವಣೆಯ ನಿರೀಕ್ಷೆ ಮಾಡಿದ್ದೆವು. ಆದರೆ ಅವರು ಆಡಿದ್ದೇ ಬೇರೆ ಮಾಡಿದ್ದೇ ಬೇರೆ. ಪಕ್ಷ ಕಟ್ಟಿದವರ ಅವಗಣನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾರ್ಕಳ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ Read More »

ಮೂಡಿಗೆರೆ: ಸಮಾಜದೊಂದಿಗೆ ಉತ್ತಮ ಭಾಂದವ್ಯಕ್ಕೆ ಸಾಮಾಜಿಕ ಕಾರ್ಯಗಳು ವೇದಿಕೆಯಾಗಲಿ|ವಿಷು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣುಹಂಪಲು ವಿತರಣೆ|ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ವಿತರಣೆ

Samagra news:ಸಮಾಜದೊಂದಿಗೆ ಉತ್ತಮ ಭಾಂದವ್ಯವನ್ನು ಇಟ್ಟುಕೊಳ್ಳಲು ಸಾಮಾಜಿಕ ಕಾರ್ಯಗಳು ವೇದಿಕೆಯಾಗಿವೆ ಎಂದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ ಹೇಳಿದರು. ಬಣಕಲ್ ಹಿರೇಬೈಲ್‌ನ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ವಿಷು ಹಬ್ಬದ ಪ್ರಯುಕ್ತ ಮೂಡಿಗೆರೆ ಎಂಜಿಎಂ ತಾಲ್ಲೂಕು ಆಸ್ಪತ್ರೆಯಲ್ಲಿ ನಡೆದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೂ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆರೋಗ್ಯಪೂರ್ಣ ಸ್ವಸ್ಥ ಹಾಗೂ ಸದೃಡ ಸಮುದಾಯವನ್ನಾಗಿ ರೂಪಿಸುವುದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಉದ್ದೇಶವಾಗಿದೆ. ಸಮುದಾಯದ ಸರ್ವಾಂಗೀಣ

ಮೂಡಿಗೆರೆ: ಸಮಾಜದೊಂದಿಗೆ ಉತ್ತಮ ಭಾಂದವ್ಯಕ್ಕೆ ಸಾಮಾಜಿಕ ಕಾರ್ಯಗಳು ವೇದಿಕೆಯಾಗಲಿ|ವಿಷು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣುಹಂಪಲು ವಿತರಣೆ|ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ವಿತರಣೆ Read More »

ಅನ್ಯ ಜಾತಿಯ ಯುವಕರ ಪ್ರೀತಿ|ಇಬ್ಬರು ಹೆಣ್ಣುಮಕ್ಕಳನ್ನು ಕೊಲೆ ಮಾಡಿದ ತಂದೆ-ತಾಯಿ

ಪಾಟ್ನಾ: ಅನ್ಯ ಜಾತಿಯ ಯುವಕರನ್ನು ಪ್ರೀತಿ ಮಾಡಿದಕ್ಕೆ ಇಬ್ಬರು ಹೆಣ್ಣು ಮಕ್ಕಳನ್ನು ಪಾಲಕರು ಕೊಂದಿರುವ ಭಯಾನಕ ಘಟನೆ ಬಿಹಾರದ ಹಾಜಿಪುರದಲ್ಲಿ ನಡೆದಿದೆ. ತಾಯಿ ರಿಂಕು ದೇವಿ ಮತ್ತು ತಂದೆ ನರೇಶ್ ಕೊಲೆಗಾರರು.ಘಟನೆಯಲ್ಲಿ ರಿಂಕು ದೇವಿಯನ್ನು ಪೊಲೀಸರು ಬಂಧಿಸಿದ್ದು, ತಂದೆ ನರೇಶ್ ತಲೆಮರೆಸಿಕೊಂಡಿದ್ದಾನೆ. ಬಾಲಕಿಯರು ಗ್ರಾಮದ ಅನ್ಯ ಜಾತಿಯ ಯುವಕರೊಂದಿಗೆ ಆಪ್ತರಾಗಿದ್ದು ಪ್ರೀತಿಸುತ್ತಿದ್ದರು ಮತ್ತು ಅವರ ಪೋಷಕರ ವಿರೋಧವನ್ನು ಲೆಕ್ಕಿಸದೆ ಇಬ್ಬರೂ ಯುವಕರ ಜೊತೆ ಹೋಗುತ್ತಿದ್ದರು ಎಂದು ತಾಯಿ ಹೇಳಿದ್ದಾರೆ. ರೋಶನಿ ಕುಮಾರಿ ಮತ್ತು ತನು ಕುಮಾರಿ ಅವರು

ಅನ್ಯ ಜಾತಿಯ ಯುವಕರ ಪ್ರೀತಿ|ಇಬ್ಬರು ಹೆಣ್ಣುಮಕ್ಕಳನ್ನು ಕೊಲೆ ಮಾಡಿದ ತಂದೆ-ತಾಯಿ Read More »

ಸುಳ್ಯ: ಬಿಜೆಪಿ ಆಭ್ಯರ್ಥಿ ಕುಮಾರಿ ಭಾಗೀರಥಿ ಮುರುಳ್ಯರಿಂದ ಮತ ಪ್ರಚಾರ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಕನಕಮಜಲು ಗ್ರಾಮದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಭಾಜಪಾ ಸುಳ್ಯ ವತಿಯಿಂದ ಮತ ಪ್ರಚಾರ ಮಾ.16ರಂದು ನಡೆಸಲಾಯಿತು. ಸಭೆ ಗೆ ಆಗಮಿಸಿದ ಭಾಗೀರಥಿ ಮುರುಳ್ಯರನ್ನು ಮಾಜಿ.ತಾ.ಪಂ ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ ಗ್ರಾಮಸ್ಥರ ಪರವಾಗಿ ಶಾಲು ಹೊದಿಸಿ ಸ್ಚಾಗತಿಸಿದರು. ಕ್ಷೇತ್ರ ಚುನಾವಣಾ ಮಾದ್ಯಮ ವಕ್ತಾರ ವೆಂಕಟ್ ದಂಬೆಕೋಡಿ ಮಾತನಾಡಿಕಾರ್ಯಕರ್ತರ ರಣೊತ್ಸಹ ನಮಗೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಮತ್ತಷ್ಟು ಹುರುಪನ್ನು ಕೊಟ್ಟಿದೆ,ಈ ಉತ್ಸಾಹ ಮುಂದೆ ನಮ್ಮ ಅಭ್ಯರ್ಥಿಯು ಗೆಲ್ಲುವವರೆಗೆ ಮುಂದುವರಿಯಲಿ ಎಂದು ಹುರಿತುಂಬಿಸಿದರು.

ಸುಳ್ಯ: ಬಿಜೆಪಿ ಆಭ್ಯರ್ಥಿ ಕುಮಾರಿ ಭಾಗೀರಥಿ ಮುರುಳ್ಯರಿಂದ ಮತ ಪ್ರಚಾರ Read More »

ದುಬೈನ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ| ಭಾರತೀಯರು ಸೇರಿ 16 ಮಂದಿ ಸಜೀವ ದಹನ

ಸಮಗ್ರ ನ್ಯೂಸ್: ಯುಎಇ ರಾಜಧಾನಿ ದುಬೈನ ವಸತಿ ಕಟ್ಟಡ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಾಲ್ವರು ಭಾರತೀಯರು ಸೇರಿ 16 ಜನರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನಗರದ ಹಳೆಯ ಭಾಗದಲ್ಲಿರುವ ಅಲ್-ರಾಸ್ ನೆರೆಹೊರೆಯಲ್ಲಿರುವ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಶನಿವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಏಳು ಎಮಿರೇಟ್‌ಗಳಲ್ಲಿ ಒಂದಾದ ದುಬೈ, ಸುಮಾರು 3.3 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಅವರಲ್ಲಿ ಸುಮಾರು 90 ಪ್ರತಿಶತ ವಿದೇಶಿಯರು ಇದ್ದಾರೆ.

ದುಬೈನ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ| ಭಾರತೀಯರು ಸೇರಿ 16 ಮಂದಿ ಸಜೀವ ದಹನ Read More »

ಸುಳ್ಯ: 23ನೇ ವರ್ಷದ ವೇದ- ಯೋಗ- ಕಲಾಶಿಬಿರ ಉದ್ಘಾಟನೆ

ಸಮಗ್ರ ನ್ಯೂಸ್: ಸುಳ್ಯದ ಹಳಗೇಟಿನ ವಿದ್ಯಾನಗರದಲ್ಲಿರುವ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ 23 ನೇ ವರ್ಷದ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರ ಮಾ.16ರಂದು ಉದ್ಘಾಟನೆ ಗೊಂಡಿತು. ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ನೇತೃತ್ವದಲ್ಲಿ ನಡೆಯುವ ಶಿಬಿರದವನ್ನು ಶಿಬಿರದ ಹಿರಿಯ ವಿದ್ಯಾರ್ಥಿ, ಬೆಂಗಳೂರಿನ ಕೋಮ್ಸ್‌ಕೋಪ್ ಆರ್&ಡಿ ಕಂಪೆನಿಯ ಇಂಜಿನಿಯರ್ ಶ್ರೀನಿಧಿ ಉಪಾಧ್ಯಾಯ ಅಡಿಕೆಹಿತ್ತು, ಭರತನಾಟ್ಯ ಹಾಗೂ ಸಂಗೀತ ಶಿಕ್ಷಕಿ ವಿದುಷಿ ಪ್ರಾಂಜಲಿ ಉಪಾಧ್ಯಾಯ ದಂಪತಿಗಳು ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ವೇದ ಶಿಬಿರದ ಅಧ್ಯಾಪಕ,

ಸುಳ್ಯ: 23ನೇ ವರ್ಷದ ವೇದ- ಯೋಗ- ಕಲಾಶಿಬಿರ ಉದ್ಘಾಟನೆ Read More »

ಪೊಲೀಸರನ್ನೇ ಕಾರಿನ ಬಾನೆಟ್​ ಮೇಲೆ 20 ಕಿ.ಮೀ ಎಳೆದೊಯ್ದ ಚಾಲಕ| ಇಲ್ಲಿದೆ ವಿಡಿಯೋ

ಮುಂಬೈ: ಟ್ರಾಫಿಕ್ ಸಿಗ್ನಲ್‌ ಜಂಪ್‌ ಮಾಡಲು ಯತ್ನಿಸಿದ ಕಾರು ಚಾಲಕನನ್ನು ಪ್ರಶ್ನಿಸಿದ ಪೊಲೀಸರನ್ನೇ ಕಾರಿನ ಬಾನೆಟ್​ ಮೇಲೆ 20 ಕಿ.ಮೀ ಎಳೆದೊಯ್ದಿರುವ ಘಟನೆಯೊಂದು ಮುಂಬೈ ನಗರದಲ್ಲಿ ನಡೆದಿದೆ. ಟ್ರಾಫಿಕ್ ಕಾನ್‌ಸ್ಟೆಬಲ್ ಸಿದ್ಧೇಶ್ವರ ಮಾಳಿ (37) ಎಂದು ಗುರುತಿಸಲಾಗಿದೆ .ಕಾನ್ಸ್‌ಟೇಬಲ್ ಸಿದ್ಧೇಶ್ವರ ಮಾಳಿ ಅವರು ಬ್ಲೂ ಡೈಮಂಡ್ ಜಂಕ್ಷನ್‌ನಲ್ಲಿ ಸಿಗ್ನಲ್ ಜಂಪ್ ಮಾಡಿ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಕಾರು ಚಾಲಕನನ್ನು ನಿಲ್ಲಿಸಲು ಪ್ರಯತ್ನಿಸಿದರು.ಈ ವೇಳೆ ಟ್ರಾಫಿಕ್​ ಪೊಲೀಸರನ್ನೇ ಕಾರಿನ ಬಾನೆಟ್​ ಮೇಲೆ 20 ಕಿ.ಮೀ ಕಾರು ಚಾಲಕ ಎಳೆದೊಯ್ದಿದ್ದಾನೆ.

ಪೊಲೀಸರನ್ನೇ ಕಾರಿನ ಬಾನೆಟ್​ ಮೇಲೆ 20 ಕಿ.ಮೀ ಎಳೆದೊಯ್ದ ಚಾಲಕ| ಇಲ್ಲಿದೆ ವಿಡಿಯೋ Read More »