ಪಶ್ಚಿಮ ಘಟ್ಟದ ಮೇಲಿನ ದೌರ್ಜನ್ಯಕ್ಕೆ ಬತ್ತಿ ಹೋದಳೇ ನೇತ್ರಾವತಿ|ಜೀವನದಿ ಬರಡಾಗಲು ಕಾರಣವಾಯ್ತೇ ಎತ್ತಿನ ಹೊಳೆ?
ಸಮಗ್ರ ನ್ಯೂಸ್: ಸುಮಾರು 8 ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ನದಿಯೊಂದು ಬೋರ್ಗರೆಯುತ್ತಿತ್ತು. ನಾಲ್ಕು ತಿಂಗಳ ಹಿಂದೆ ಹಾಗೋ ಹೀಗೋ ಹರಿಯುತ್ತಿತ್ತು. ಈಗ ಆ ನದಿ ಎಲ್ಲೆಂದು ಜನ ಹುಡುಕುತ್ತಿದ್ದಾರೆ!ಇದು ಉಪ್ಪಿನಂಗಡಿಯಲ್ಲಿ ಹರಿಯುವ ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿ ನಿರ್ಜೀವವಾಗಿರುವ ಬಗೆ!! ಹೌದು… ಕೋಲಾರ, ತುಮಕೂರು ಕಡೆಗೆ ಇದನ್ನು ತಿರುಗಿಸಿ ಜೀವ ಜಲ ಒದಗಿಸುತ್ತೇವೆಂದು ರಾಜಕಾರಣಿಗಳು ನಂಬಿಸಿರುವ ಅದೇ ನೇತ್ರಾವತಿ ನದಿಯಿದು! ಇನ್ನೆರಡು ತಿಂಗಳು ಕಳೆದರೆ ಮತ್ತ ಇಲ್ಲಿ ನದಿ ಭೋರ್ಗರೆಯುತ್ತದೆ. ಜನ ಇಂದಿನ ಪರಿಸ್ಥಿತಿಯನ್ನು ಮರೆತುಬಿಡುತ್ತಾರೆ. ಆ […]