April 2023

ಕಟೀಲು: ಭಕ್ತರು ಅರ್ಪಿಸಿದ ಮಲ್ಲಿಗೆಯಲ್ಲಿ ನಡೆಯಿತು ಶ್ರೀದೇವಿಯ ಶಯನೋತ್ಸವ

ಸಮಗ್ರ ನ್ಯೂಸ್: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜಾತ್ರೆ ಪ್ರಯುಕ್ತ ದೇವರ ಬಲಿ ಉತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಗುರುವಾರ ರಾತ್ರಿ ಶ್ರೀ ದೇವಿಯ ಶಯನೋತ್ಸವ ನಡೆದಿದ್ದು, ಭಕ್ತರಿಂದ ದೇವರಿಗೆ ಸುಮಾರು 10 ಸಾವಿರ ಅಟ್ಟಿ ಮಲ್ಲಿಗೆ ಹೂವು ಸಮರ್ಪಣೆಯಾಯಿತು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಧ್ಯಾಹ್ನದಿಂದಲೇ ಸಾವಿರಾರು ಮಂದಿ ಮಲ್ಲಿಗೆ ಸಮರ್ಪಣೆ ಮಾಡಿದರು. ಎ. 21ರಂದು ಪ್ರಾತಃ ಕವಾಟೋದ್ಘಾಟನೆ, ವಸಂತ ಮಂಟಪದಲ್ಲಿ ಶಯನ – ಪುಷ್ಪ ವಿತರಣೆ, ಪ್ರಸಾದ ವಿತರಣೆ, ಅಭಿಷೇಕ ಸೇವೆಗಳು […]

ಕಟೀಲು: ಭಕ್ತರು ಅರ್ಪಿಸಿದ ಮಲ್ಲಿಗೆಯಲ್ಲಿ ನಡೆಯಿತು ಶ್ರೀದೇವಿಯ ಶಯನೋತ್ಸವ Read More »

ಬಂಟ್ವಾಳ: ಮಹಡಿ ಮೇಲಿಂದ ಬಿದ್ದು ಯುವಕ ಸಾವು

ಸಮಗ್ರ ನ್ಯೂಸ್: ಯುವಕನೋರ್ವ ಮಹಡಿ ಮೇಲಿನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ಮಾಡಮೆ ಎಂಬಲ್ಲಿ ನಡೆದಿದೆ. ಸಿದ್ದಕಟ್ಟೆ ದೇವಸ್ಯ ನಿವಾಸಿ ದುರ್ಗಾ ಪ್ರಸಾದ್ ಮೃತರು ಎಂದು ಗುರುತಿಸಲಾಗಿದೆ. ದುರ್ಗಾ ಪ್ರಸಾದ್ ಸಿದ್ಧಕಟ್ಟೆ ಸಮೀಪದ ಮಾಡಮೆ ಎಂಬಲ್ಲಿ ಮನೆಯೊಂದರಲ್ಲಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಮೇಲಿನಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ‌ದೂರು ದಾಖಲಾಗಿದೆ.

ಬಂಟ್ವಾಳ: ಮಹಡಿ ಮೇಲಿಂದ ಬಿದ್ದು ಯುವಕ ಸಾವು Read More »

ಮಂಗಳೂರು: ICICI ಬ್ಯಾಂಕ್ ಹೆಸರಲ್ಲಿ ವಂಚನೆ| ಖಾತೆಯಿಂದ ₹ 83 ಸಾವಿರ ಎಗರಿಸಿದ ಖದೀಮರು

ಸಮಗ್ರ ನ್ಯೂಸ್: ಐಸಿಐಸಿಐ ಬ್ಯಾಂಕ್‌ನಿಂದ ಕರೆ ಮಾಡುವುದಾಗಿ ನಂಬಿಸಿ ಫಿರ್ಯಾದಿಯ ಬ್ಯಾಂಕ್ ಖಾತೆಯಿಂದ 83,999 ರೂ. ಅನಧಿಕೃತವಾಗಿ ವರ್ಗಾವಣೆ ಮಾಡಿಕೊಂಡು ವಂಚಿಸಿದ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫಿರ್ಯಾದಿದಾರರು ಐಸಿಐಸಿಐ ಕ್ರೆಡಿಟ್ ಕಾರ್ಡನ್ನು ಹೊಂದಿದ್ದು, ಅದರ ಸ್ಟೇಟ್‌ಮೆಂಟ್ ಪಡೆಯಲು ಗೂಗಲ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿದಾಗ ಅದರಲ್ಲಿ ದೊರೆತ ನಂಬರ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಕರೆ ಮಾಡಿದ ಅಪರಿಚಿತ ವ್ಯಕ್ತಿಯು ಕ್ರೆಡಿಟ್ ಕಾರ್ಡ್‌ನ ಸ್ಟೇಟ್‌ಮೆಂಟ್ ಪಡೆಯಲು ಪ್ಲೇ

ಮಂಗಳೂರು: ICICI ಬ್ಯಾಂಕ್ ಹೆಸರಲ್ಲಿ ವಂಚನೆ| ಖಾತೆಯಿಂದ ₹ 83 ಸಾವಿರ ಎಗರಿಸಿದ ಖದೀಮರು Read More »

Weather report| ಉತ್ತರ ಮತ್ತು ದ. ಒಳನಾಡಿನ ಹಲವೆಡೆ ಹಗುರ ಮಳೆ ಸಂಭವ| ಕರಾವಳಿಯಲ್ಲಿ ಉಷ್ಣಾಂಶ ಏರಿಕೆ ಮುನ್ಸೂಚನೆ

ಸಮಗ್ರ ನ್ಯೂಸ್: ಬೆಂಗಳೂರು, ಮಂಗಳೂರು ಸೇರಿದಂತೆ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಅಲ್ಲಲ್ಲಿ ಗುಡುಗು ಸಹಿತ ಸಾಧಾರಣ ಅಥವಾ ಹಗುರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ‌ಇಲಾಖೆ ನೀಡಿದೆ. ಇಂದು ಶುಕ್ರವಾರ ರಾಜ್ಯದ ಕೆಲವು ಕಡೆಗಳಲ್ಲಿ ಒಣಹವೆ, ಪ್ರಖರ ಬಿಸಿಲು ಮುಂದುವರೆಯಲಿದೆ. ಗುರುವಾರ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕೆಲವು ಕಡೆ ಚುನಾವಣಾ ಸಮಾವೇಶಗಳಲ್ಲಿ ಅನಿರೀಕ್ಷಿತ ಮಳೆಯು ಬಿಸಿಲಲ್ಲಿ ಬೆಂದ ಕಾರ್ಯಕರ್ತರನ್ನು ತಂಪಾಗಿಸಿದೆ. ಬೆಳಗಾವಿಯಲ್ಲಿ ಗಾಳಿಸಹಿತ ಮತ್ತು ಗದಗದಲ್ಲಿ ಗುಡುಗು

Weather report| ಉತ್ತರ ಮತ್ತು ದ. ಒಳನಾಡಿನ ಹಲವೆಡೆ ಹಗುರ ಮಳೆ ಸಂಭವ| ಕರಾವಳಿಯಲ್ಲಿ ಉಷ್ಣಾಂಶ ಏರಿಕೆ ಮುನ್ಸೂಚನೆ Read More »

ವಿಧಾನಸಭಾ ಚುನಾವಣೆ| 3632 ಅಭ್ಯರ್ಥಿಗಳಿಂದ ಉಮೇದುವಾರಿಕೆ| ಇಂದು ನಾಮಪತ್ರ ಪರಿಶೀಲನೆ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, 3632 ಮಂದಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇಂದು(ಎ.21) ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಬಿಜೆಪಿಯಿಂದ 224 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 75 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. 68 ಮಂದಿ ಲಿಂಗಾಯಿತರಿಗೆ ಬಿಜೆಪಿ ಟಿಕೆಟ್ ನೀಡಲಾಗಿದ್ದು, 134 ಪದವೀಧರರು, 37 ಸ್ನಾತಕೋತ್ತರ ಪದವೀಧರರು ಸೇರಿದ್ದಾರೆ. ಕಾಂಗ್ರೆಸ್ 223 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 53 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. 53 ಒಕ್ಕಲಿಗರಿಗೆ, 51 ಮಂದಿ ಲಿಂಗಾಯಿತರಿಗೆ, 14 ಮುಸ್ಲಿಮರಿಗೆ

ವಿಧಾನಸಭಾ ಚುನಾವಣೆ| 3632 ಅಭ್ಯರ್ಥಿಗಳಿಂದ ಉಮೇದುವಾರಿಕೆ| ಇಂದು ನಾಮಪತ್ರ ಪರಿಶೀಲನೆ Read More »

ಸೌದಿ: ಭೀಕರ ಅಪಘಾತಕ್ಕೆ ವಿಟ್ಲದ ಯುವಕ ಬಲಿ

ಸಮಗ್ರ ನ್ಯೂಸ್: ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ಅಪಘಾತದಲ್ಲಿ ವಿಟ್ಲದ ಯುವಕ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಮೃತಪಟ್ಟ ಯುವಕನನ್ನು ವಿಟ್ಲದ ಉಕ್ಕುಡ ನಿವಾಸಿ ಮುಹಮ್ಮದ್ ಮುಸ್ಲಿಯಾರ್ ಎಂಬವರ ಪುತ್ರ ಹಬೀಬ್ ಉಕ್ಕುಡ ಎಂದು ಗುರುತಿಸಲಾಗಿದೆ. ಹಬೀಬ್ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಪಲ್ಟಿಯಾಗಿದ್ದು, ಹಬೀಬ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಬೀಬ್ ಉದ್ಯೋಗ ನಿಮಿತ್ತ ಮೂರು ತಿಂಗಳ ಹಿಂದೆಯಷ್ಟೇ ಸೌದಿ ಅರೇಬಿಯಾಗೆ ತೆರಳಿದ್ದರು.

ಸೌದಿ: ಭೀಕರ ಅಪಘಾತಕ್ಕೆ ವಿಟ್ಲದ ಯುವಕ ಬಲಿ Read More »

ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ| ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆ ಬಿಸಿಯ ನಡುವೆ ವಿದ್ಯಾರ್ಥಿಗಳ ಭವ್ಯ ಭವಿಷ್ಯದ ಮಹತ್ತರ ಘಟ್ಟ ಪಿಯುಸಿ ಫಲಿತಾಂಶ ಇವತ್ತು ಪ್ರಕಟ ಆಗುತ್ತಿದೆ. 11 ಗಂಟೆಗೆ ವೆಬ್​ಸೈಟ್​ನ ಪರದೆ ಮೇಲೆ ಭವಿಷ್ಯ ಕಾಣಲಿದೆ. ಪರೀಕ್ಷೆ ಬರೆದ 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಫಲಿತಾಂಶ ಬೆಳಗ್ಗೆ 11 ಗಂಟೆಗೆ ವೆಬ್​ಸೈಟ್​ನಲ್ಲಿ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಲಿದೆ. ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದೆ. ಬೆಳಗ್ಗೆ 10 ಗಂಟೆಗೆ ಕರ್ನಾಟಕ‌ ಶಾಲಾ ಪರೀಕ್ಷೆ

ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ| ಇಲ್ಲಿದೆ ಫುಲ್ ಡೀಟೈಲ್ಸ್ Read More »

ಉಡುಪಿ: ಮಾನಹಾನಿಕರ ವರದಿ‌ ಪ್ರಕರಣ| ಬಿಟಿವಿ ಸುದ್ದಿವಾಹಿನಿ ಎಂಡಿ ಹಾಗೂ ಇಬ್ಬರು ಸಿಬ್ಬಂದಿಗೆ ಜೈಲು

ಸಮಗ್ರ ನ್ಯೂಸ್: ಕಾಂಗ್ರೆಸ್ ಮುಖಂಡ ಕಿಶನ್ ಹೆಗ್ಡೆ ಕೊಳ್ಗೆಬೈಲ್‌ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟಿಸಿದ ಪ್ರಕರಣದಲ್ಲಿ ಬಿಟಿವಿ ಎಂಡಿ ಜಿ.ಎಂ.ಕುಮಾರ್, ವರದಿಗಾರ ಭರತ್ ರಾಜ್, ನಿರೂಪಕ ಶೇಷ ಕೃಷ್ಣಗೆ ಉಡುಪಿ ಜಿಲ್ಲಾ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಶನಿವಾರ 2 ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹ 10,000 ದಂಡ ವಿಧಿಸಿದೆ. ‘2017ರಲ್ಲಿ ಬಿಟಿವಿಯಲ್ಲಿ ಪ್ರಕಟವಾದ ಮಾನಹಾನಿಯಾಗುವಂತಹ ಸುಳ್ಳು ಸುದ್ದಿಯ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದೆ. 6 ವರ್ಷಗಳ ವಿಚಾರಣೆ

ಉಡುಪಿ: ಮಾನಹಾನಿಕರ ವರದಿ‌ ಪ್ರಕರಣ| ಬಿಟಿವಿ ಸುದ್ದಿವಾಹಿನಿ ಎಂಡಿ ಹಾಗೂ ಇಬ್ಬರು ಸಿಬ್ಬಂದಿಗೆ ಜೈಲು Read More »

ನೃತ್ಯ ‌ನಿರ್ದೇಶಕ‌ ರಾಜೇಶ್ ಮಾಸ್ಟರ್‌ ನಿಗೂಢ ಸಾವು

ಸಮಗ್ರ ನ್ಯೂಸ್: ನೃತ್ಯ ನಿರ್ದೇಶಕ ರಾಜೇಶ್ ಮಾಸ್ಟರ್ ನಿಗೂಢವಾಗಿ ಸಾವನ್ನಪ್ಪಿರುವ ಆಘಾತದ ಸುದ್ದಿ ಹೊರಬಿದ್ದಿದೆ. ಅವರ ಸಾವಿನ ಕಾರಣದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣಗಳಿಲ್ಲದಿದ್ದರೂ, ನಿಗೂಢ ಕಾರಣಕ್ಕಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹಲವಾರು ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ರಾಜೇಶ್ ಮಾಸ್ಟರ್ ಸಾವಿನ ಸುದ್ದಿ ಬಗ್ಗೆ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಮಲಯಾಳಂ ಚಿತ್ರರಂಗದ ನಟಿ ದೇವಿ ಚಂದನಾ ಅವರು ಫೇಸ್‌ಬುಕ್‌ ನಲ್ಲಿ ರಾಜೇಶ್ ಮಾಸ್ಟರ್ ಅವರೊಂದಿಗಿನ ಕೆಲವು ಫೋಟೋಗಳನ್ನು ಹಂಚಿಕೊಂಡು ತಮ್ಮ ಆಘಾತವನ್ನು

ನೃತ್ಯ ‌ನಿರ್ದೇಶಕ‌ ರಾಜೇಶ್ ಮಾಸ್ಟರ್‌ ನಿಗೂಢ ಸಾವು Read More »

ಕರಾವಳಿ ಸೇರಿ ಎಲಡೆ ಎ.22ರಂದು ರಂಝಾನ್ ಆಚರಣೆ

ಸಮಗ್ರ ನ್ಯೂಸ್: ಕಳೆದ ಒಂದು ತಿಂಗಳಿನಿಂದ ಆಚರಿಸಲಾಗುತ್ತಿದ್ದ ರಂಜಾನ್ ಉಪವಾಸವನ್ನು ಮುಸ್ಲಿಂ ಸಮುದಾಯದವರು ಇಂದು ಅಂತ್ಯಗೊಳಿಸಲಿದ್ದಾರೆ. ಅಲ್ಲದೇ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ನಾಳೆ (ಎ.22) ರಂಜಾನ್ ಹಬ್ಬವನ್ನು ಆಚರಿಸಲಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮಾಹಿತಿ ನೀಡಿದ್ದು, ಇಂದು ಚಂದ್ರನ ದರ್ಶನವಾದ ಕಾರಣ, ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಮುಸ್ಲಿಂ ಸಮುದಾಯದವರು ರಂಜಾನ್ ಉಪವಾಸವನ್ನು ಅಂತ್ಯಗೊಳಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಈ ದಿನದಂದು ಪ್ರತೀ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಗುತ್ತದೆ. ಹೊಸ ಉಡುಪುಗಳನ್ನು ತೊಟ್ಟುಕೊಂಡು

ಕರಾವಳಿ ಸೇರಿ ಎಲಡೆ ಎ.22ರಂದು ರಂಝಾನ್ ಆಚರಣೆ Read More »