Ad Widget .

ಚುನಾವಣಾ ಅಖಾಡಕ್ಕೆ `ಹ್ಯಾಟ್ರಿಕ್ ಹೀರೋ’ಎಂಟ್ರಿ…!

ಸಮಗ್ರ ನ್ಯೂಸ್: ಚುನಾವಣಾ ಅಖಾಡಕ್ಕೆ ಹ್ಯಾಟ್ರಿಕ್ ಹೀರೋ,‘ಶಿವರಾಜ್ ಕುಮಾರ್ ಎಂಟ್ರಿ ಕೊಟ್ಟಿದ್ದು, ಕಾಂಗ್ರೆಸ್ ನ ಮಧು ಬಂಗಾರಪ್ಪ ಪರ ಮಾ.೩೦ರಂದು ನಟ ಶಿವರಾಜ್ ಕುಮಾರ್ ಪ್ರಚಾರ ಮಾಡಲಿದ್ದಾರೆ.

Ad Widget . Ad Widget .

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಇಂದು ಮಧ್ಯಾಹ್ನ ೧೨ ಕ್ಕೆ ನಟ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ರೋಡ್ ಶೋ ನಡೆಸಲಿದ್ದಾರೆ. ಗೀತಾ ಶಿವರಾಜ್ ಕುಮಾರ್ ಈಗಾಗಲೇ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಪತಿ ಶಿವರಾಜ್ ಕುಮಾರ್ ಪತ್ನಿಗೆ ಸಾಥ್ ನೀಡುತ್ತಿದ್ದಾರೆ. ಮಧು ಬಂಗಾರಪ್ಪ ಸೇರಿದಂತೆ ಹಲವು ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದು, ೨ ಕಿಮೀ ರೋಡ್ ಶೋ ನಡೆಸಿ ನಂತರ ಮಧ್ಯಾಹ್ನ ೪ ಗಂಟೆಗೆ ಆನವಟ್ಟಿಯ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ.

Ad Widget . Ad Widget .

ನಟ ಶಿವರಾಜ್ ಕುಮಾರ್ ಕೂಡ ೩ ದಿನ ಕಾಂಗ್ರೆಸ್ ಪರ ಪ್ರಚಾರಕ್ಕೆ ಬರಲಿದ್ದಾರೆ ಎಂದು ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಇತ್ತೀಚೆಗೆ ಹೇಳಿದ್ದರು. ಶಿವರಾಜ್ ಕುಮಾರ್ ಕೂಡ ೩ ದಿನ ಕಾಂಗ್ರೆಸ್ ಪರ ಪ್ರಚಾರಕ್ಕೆ ಬರಲಿದ್ದಾರೆ, ಅವರು ಕೂಡ ಕಾಂಗ್ರೆಸ್ ಪರ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು. ನಟ ಶಿವರಾಜ್ ಕುಮಾರ್ ಅವರ ಪತ್ನಿ, ಗೀತಾ ಶಿವರಾಜ್ ಕುಮಾರ್ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

Leave a Comment

Your email address will not be published. Required fields are marked *