Ad Widget .

ಮಂಗಳೂರು: ವರ್ಕ್ ಫ್ರಂ ಹೋಮ್ ಹೆಸರಲ್ಲಿ 1.45 ಲಕ್ಷ ರೂ. ವಂಚನೆ

ಸಮಗ್ರ ನ್ಯೂಸ್: ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಲಿಂಕ್ ಕಳುಹಿಸಿ 1.45 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್0 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೆ. 20ರಂದು ಫೇಸ್ಬುಕ್ನಲ್ಲಿ “ವರ್ಕ್ ಫ್ರಂ ಹೋಮ್ ವಿದ್ ಅಮೆಜಾನ್’ ಎಂಬ ಜಾಹೀರಾತು ಕಂಡ ವ್ಯಕ್ತಿಯೊಬ್ಬರು ಅದನ್ನು ಕ್ಲಿಕ್ ಮಾಡಿದಾಗ ವಾಟ್ಸ್ಆ್ಯಪ್ ಪೇಜ್ ತೆರೆದುಕೊಂಡಿತ್ತು. ಅದರಲ್ಲಿ ಲಿಂಕ್ವೊಂದನ್ನು ಕಳುಹಿಸಲಾಗಿತ್ತು. ಫೆ.21ರಂದು ಲಿಂಕನ್ನು ಕ್ಲಿಕ್ ಮಾಡಿ ಅದರಲ್ಲಿ ತಿಳಿಸಿದಂತೆ ನೋಂದಣಿ ಮೊತ್ತವಾಗಿ 200 ರೂ. ಪಾವತಿಸಿದ್ದರು.

Ad Widget . Ad Widget .
 ಟೆಲಿಗ್ರಾಂನಲ್ಲಿ ದೂರುದಾರ ವ್ಯಕ್ತಿಯನ್ನು ಸಂಪರ್ಕಿಸಿದ ಅಪರಿಚಿತ ವ್ಯಕ್ತಿ ಹಲವು ಟಾಸ್ಕ್ಗಳನ್ನು ಪೂರೈಸಿ ಕಮಿಷನ್ ಪಡೆದುಕೊಳ್ಳುವಂತೆ ತಿಳಿಸಿ 500 ರೂ. ವರ್ಗಾಯಿಸಿಕೊಂಡಿದ್ದಾರೆ.

 ಫೆ.23ರಂದು ಟಾಸ್ಕ್ ನೆಪದಲ್ಲಿ ಆದಾಯ ತೆರಿಗೆ, ಕಮಿಷನ್ ಮೊದಲಾದ ಹಲವು ಕಾರಣಗಳನ್ನು ತಿಳಿಸಿ ಹಂತ ಹಂತವಾಗಿ ಒಟ್ಟು 1,45,225 ರೂ.ಗಳನ್ನು ವರ್ಗಾಯಿಸಿವಂತೆ ತಿಳಿಸಿ ವಂಚಿಸಿದ್ದು, ಈ ಬಗ್ಗೆ ದೂರು ದಾಖಲಾಗಿದೆ.

Leave a Comment

Your email address will not be published. Required fields are marked *