Ad Widget .

ಕರಾವಳಿಯ ಬ್ಯೂಟಿ ಅನುಷ್ಕಾ ಶೆಟ್ಟಿ ಮತ್ತೆ ಸಿನಿಮಾ ರಂಗಕ್ಕೆ

ಸಮಗ್ರ ನ್ಯೂಸ್: ಕರಾವಳಿಯ ಬ್ಯೂಟಿ ಎಂದೇ ಹೆಸರು ಪಡೆದಿರುವ  ಅನುಷ್ಕಾ ಶೆಟ್ಟಿ ಅವರು ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಸಿನಿಮಾ ಮೂಲಕ 3 ವರ್ಷಗಳ ನಂತರ ಸಿನಿಲೋಕಕ್ಕೆ ಕಮ್ಬ್ಯಾಕ್ ಆಗಿದ್ದಾರೆ.

ಇದೀಗ  ಬಾಹುಬಲಿ 2, ನಿಶಬ್ಧಂ ಚಿತ್ರದ ನಂತರ ಸ್ವೀಟಿ, ಅನ್ವಿತಾ ರಾವಲಿ ಶೆಟ್ಟಿಯಾಗಿ ಬರುತ್ತಿದ್ದಾರೆ. ಹೋಟೆಲ್ವೊಂದರ ಶೆಫ್ ಆಗಿ ಅನುಷ್ಕಾ ನಟಿಸಿದ್ದಾರೆ. ಅನ್ವಿತಾ ರಾವಲಿ ಶೆಟ್ಟಿಗೆ ಮದುವೆ ಅಂದ್ರೆ ಇಷ್ಟ ಇರುವುದಿಲ್ಲ, ಆ ವಿಷಯದಲ್ಲಿ ಫ್ಯಾಮಿಲಿ ಸಪೋರ್ಟ್ ಕೂಡ ಇರುತ್ತದೆ. ಮತ್ತೊಂದೆಡೆ ಪೋಷಕರಿಗೆ ಇಷ್ಟವಿಲ್ಲದಿದ್ದರೂ ಸ್ಟ್ಯಾಂಡಪ್ ಕಾಮೆಡಿಯನ್ ಆಗಬೇಕು ಎನ್ನುವ ಕನಸು ಕಾಣುವ ಯುವಕ ನವೀನ್ ಪೋಲಿ ಶೆಟ್ಟಿ. ಇವರಿಬ್ಬರ ನಡುವೆ ಆಕಸ್ಮಿಕವಾಗಿ ಪರಿಚಯ ಆಗಿ ಅದು ಸ್ನೇಹಕ್ಕೆ ತಿರುಗುತ್ತದೆ. ಮುಂದೆ ಆ ಸ್ನೇಹ ಎಲ್ಲಿಗೆ ಹೋಗಿ ತಲುಪುತ್ತದೆ ಅನ್ನೋದನ್ನು ತೆರೆಮೇಲೆಯೇ ನೋಡಬೇಕು. ಇಬ್ಬರ ನಡುವಿನ ದೃಶ್ಯಗಳು ತುಂಬಾ ಅದ್ಬುತವಾಗಿ ಮೂಡಿಬಂದಿದೆ. 


          ನವೀನ್ನ ನಿನ್ನ ಸ್ಟ್ರೆಂತ್ ಏನು ಎಂದು ಆಕೆ ಕೇಳಿದಾಗ ಅವಕಾಶ ಸಿಕ್ಕಾಗಲೆಲ್ಲಾ ಕಾಮಿಡಿ ಮಾಡ್ತೀನಿ ಅಂತಾನೆ. ವೀಕ್ನೆಸ್ ಏನು ಅಂದ್ರೆ ಸಿಚ್ಯುವೇಷನ್ಗೆ ಸಂಬಂಧ ಇಲ್ಲದೇ ಕಾಮಿಡಿ ಮಾಡ್ತಿರ್ತೀನಿ ಅಂತಾ ಉತ್ತರ ಕೊಡುತ್ತಾನೆ. ಇನ್ನು ಕೊನೆಗೆ ನಿನ್ನ ಟೈಮಿಂಗ್ ಯಾವಾಗಲೂ ಹೀಗೇನಾ? ಎನ್ನುವ ಪ್ರಶ್ನೆಗೆ ಕಾಮಿಡಿ ಟೈಮಿಂಗ್ ಮಾತ್ರ ಪರ್ಫೆಕ್ಟ್ ಆಗಿ ಇರುತ್ತೆ ಎನ್ನುತ್ತಾನೆ. ಟೀಸರ್ ನೋಡಿದ್ಮೇಲೆ ಇದು ಪಕ್ಕಾ ಕಾಮಿಡಿ ಎಂಟಟೈನರ್ ಸಿನಿಮಾ ಅನ್ನೋದು ಅರ್ಥವಾಗ್ತಿದೆ. ಟೀಸರ್ ಹೊಸ ಫೀಲ್ ಕೊಡುವಂತಿದೆ. ಯುವಿ ಕ್ರಿಯೇಷನ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಮಹೇಶ್ ಬಾಬು ಪಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ.



  ಡಿಫರೆಂಟ್ ಲುಕ್‍ನ ಹೊಸ ಕಥೆ ಜೊತೆ ಬರುತ್ತಿರುವ ಅನುಷ್ಕಾಳನ್ನ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ನವೀನ್ ಪೋಲಿ ಶೆಟ್ಟಿ- ಅನುಷ್ಕಾ ನಟನೆಯ ಈ ಚಿತ್ರ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದೆ. ಈ ಚಿತ್ರವು ಸದ್ಯದಲ್ಲೇ ಸಿನಿಮಾ ತೆರೆಯಲ್ಲಿ ಕಾಣಿಸಿಕೊಳ್ಳಲಿದೆ.

Leave a Comment

Your email address will not be published. Required fields are marked *