Ad Widget .

ಓದಿನಲ್ಲಿ ಗೆಲುವು ಕಂಡ ಆಳ್ವಾಸ್‍ನ ಇಬ್ಬರು ಕುವರಿಯರು

ಸತತ ಪ್ರಯತ್ನ ಸನ್ಮಾರ್ಗಕ್ಕೆ ದಾರಿ ಎಂಬಂತೆ ಯಶಸ್ಸು ಕಂಡ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಣ್ಮಣಿಗಳಾದ ಅನನ್ಯ ಕೆ.ಎ. ಮತ್ತು ದಿಶಾ ರಾವ್ ಸಾಂಸ್ಕೃತಿಕ ಮತ್ತು ಕ್ರೀಡೆಗೆ ಹೆಸರುವಾಸಿಯಾಗಿರುವ ಆಳ್ವಾಸ್ ಕಾಲೇಜು ಇದೀಗ ಶಿಕ್ಷಣದಲ್ಲೂ ದಾಖಲೆ ಬರೆಯುವಂತೆ ಮಾಡಿದ್ದಾರೆ.

Ad Widget . Ad Widget .

ಹೆಣ್ಣು ಅಬಲೆ ಅಲ್ಲ ಸಬಲೆ ಎಂಬ ಮಾತು ಸುಳ್ಳಲ್ಲ , ಸಾಧಿಸುವೆನೆಂಬ ಛಲವಿದ್ದರೆ ಸಂಪೂರ್ಣ ಅಂಕ ಗಳಿಸುವುದಕ್ಕೂ ಸೈ ಎಂದು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲೆ ವಿಸ್ಮಯ ಸೃಷ್ಟಿ ಮಾಡಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ಕೊಡಗಿನ ಬೆಡಗಿ ಅನನ್ಯ ಕೆ.ಎ.. ಆಳ್ವಾಸ್ ಕಾಲೇಜಿಗೆ ಇತಿಹಾಸ ಬರೆದಿದ್ದಾರೆ.

Ad Widget . Ad Widget .

ಇವರು ಮೂಲತಃ ಕೊಡಗಿನ ಸೋಮವಾರಪೇಟೆ ತಾಲೂಕಿನ ತಲ್ತರೆಶೆಟ್ಟಳ್ಳಿಯ ನಿವೃತ್ತ ಯೋಧ ಅಶೋಕ್ ಕೆ.ಎ. ಮತ್ತು ಸರಕಾರಿ ಪ್ರಾಥಮಿಕ ಶಾಲೆ ಗುಮ್ಮನಕೊಲ್ಲಿಯ ಶಿಕ್ಷಕಿ ನಳಿನಿ ಇವರ ಪುತ್ರಿ.

ಓದಿನ ಜೊತೆಗೆ ಕ್ರೀಡೆಯಲ್ಲೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಇವರು ವಾಲಿಬಾಲ್ ಆಟಗಾರ್ತಿ. ಪ್ರಾಥಮಿಕ ಶಿಕ್ಷಣವನ್ನು ಫಾತಿಮ ಹೈಯರ್ ಪ್ರೈಮರಿ ಸ್ಕೂಲ್ ಕುಶಾಲನಗರ ಮತ್ತು ಪ್ರೌಢ ಶಿಕ್ಷಣವನ್ನು ಬಿ.ಜಿ.ಎಸ್. ಹಾಸನದಲ್ಲಿ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಆಳ್ವಾಸ್ ನಲ್ಲಿ ಪೂರೈಸಿ ಕಂಪೆನಿ ಸೆಕ್ರೆಟರಿ ಆಗುವ ತನ್ನ ಕನಸನ್ನು ಆಳ್ವಾಸ್‍ನಲ್ಲೇ ವಾಣಿಜ್ಯ ಪದವಿ ಪಡೆಯುವುದರ ಜೊತೆಗೆ ಸಿ.ಎಸ್. ತರಬೇತಿಯನ್ನು ಪಡೆಯಲಿದ್ದಾರೆ. ಇವರು ಎಸ್.ಎಸ್.ಎಲ್.ಸಿ. ಯಲ್ಲಿ ಶೇಕಡ97.4 ಅಂಕ ಪಡೆದು ಸ್ಪೂರ್ತಿಯಾದವರು.

ಬಿಡುವನ್ನು ವ್ಯರ್ಥ ಮಾಡದೆ ಹೆಚ್ಚಿನ ಸಮಯವನ್ನು ಓದಿನ ಕಡೆ ಗಮನ ಹರಿಸಿ ಪರೀಕ್ಷೆಗೆ ಪೂರ್ವ ತಯಾರಿ ಮಾಡಿದಾಗ ಒಳ್ಳೆಯ ಅಂಕ ಗಳಿಸುವುದು ಸಾಧ್ಯ. ಸಾಮಾಜಿಕ ಜಾಲತಾಣದ ಮೂಲೆಗುಂಪಾಗದೆ ಅಗತ್ಯಕ್ಕೆ ತಕ್ಕಷ್ಟು ಉಪಯೋಗಿಸಿಕೊಂಡು ಓದಿನಲ್ಲಿ ಹೆಚ್ಚು ಏಕಾಗ್ರತೆ ಮೂಡಿಸಿಕೊಳ್ಳಬೇಕು ಎಂದು ಅನನ್ಯಾ ಹೇಳುತ್ತಾರೆ.

ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಆಳ್ವಾಸ್‍ನ ಹೆಸರನ್ನು ಮತ್ತೆ ಎತ್ತಿ ಹಿಡಿದ ದಿಶಾ ರಾವ್, 596 ಅಂಕ ಪಡೆದ ಇವರು ಮೂಡಬಿದಿರೆಯ ಪೇಪರ್ ಮಿಲ್ ‍ನ ಕೆ. ಬಾಲಕೃಷ್ಣ ರಾವ್ ಮತ್ತು ಶಾರದ ದಂಪತಿಗಳ ಪುತ್ರಿ. ಇವರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ರೋಟರಿ ಸೆಂಟ್ರಲ್ ಸ್ಕೂಲ್‍ನಲ್ಲಿ ಪೂರೈಸಿದ್ದಾರೆ.

ಪದವಿ ಪೂರ್ವ ಶಿಕ್ಷಣದ ಜೊತೆಗೆ ಸಿ.ಎ. ತರಬೇತಿಯನ್ನು ಸಹ ಪಡೆಯುತ್ತಿದ್ದರು. ಚಾರ್ಟೆಡ್ ಅಕೌಂಟೆಂಟ್ ಆಗಬೇಕೆಂಬ ಕನಸು ಹೊತ್ತ ಇವರು ವಾಣಿಜ್ಯ ಪದವಿ ಪಡೆಯುವ ಮೂಲಕ ತನ್ನ ಕನಸು ನನಸು ಮಾಡುವ ಹಂಬಲ ಹೊತ್ತಿದ್ದಾರೆ. ಪ್ರಯತ್ನ ತನ್ನನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂಬುದನ್ನು ಸಾಭೀತು ಪಡಿಸಿದ್ದಾರೆ.

ಉನ್ನತ ಸ್ಥಾನಕೇರುವ ಕನಸು ಹೊತ್ತ ಇವರಿಬ್ಬರ ಶಿಕ್ಷಣದ ಹಾದಿ ಗುರಿಯತ್ತ ಗಮನ ಹರಿಸಿ ಮುಗಿಲೆತ್ತರಕ್ಕೆ ಏರಲಿ.

ಧನ್ಯಶ್ರೀ ಡಿ. ಅಮ್ಮುಂಜ
 ದ್ವಿತೀಯ ಪತ್ರಿಕೋದ್ಯಮ ವಿವೇಕಾನಂದ (ಸ್ವಾಯತ್ತ)ಕಾಲೇಜು ಪುತ್ತೂರು

Leave a Comment

Your email address will not be published. Required fields are marked *