ಸಮಗ್ರ ನ್ಯೂಸ್: ಟ್ವಿಟರ್ ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ಭಾರತದ ಅತಿದೊಡ್ಡ ಸುದ್ದಿ ಸಂಸ್ಥೆಗಳಲ್ಲಿ ಒಂದಾದ ಎಎನ್ಐನ ಅಧಿಕೃತ ಖಾತೆಯನ್ನು ಟ್ವಿಟರ್ ಅಮಾನತುಗೊಳಿಸಿದೆ.
ಸುದ್ದಿ ಸಂಸ್ಥೆ ತನ್ನ ಹ್ಯಾಂಡಲ್ನಲ್ಲಿ ಸುಮಾರು 7.6 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ ಮತ್ತು ಈ ಹಿಂದೆ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ನಲ್ಲಿ ಅಧಿಕೃತ ಸಂಸ್ಥೆಯಾಗಿ ಗುರುತಿಸಲ್ಪಟ್ಟಿತ್ತು.
ಟ್ವಿಟರ್’ನ ಈ ಕ್ರಮವು ಎಎನ್ಐ ಮತ್ತು ಅದರ ಅನುಯಾಯಿಗಳಿಗೆ ಹತಾಶೆ ಮತ್ತು ಗೊಂದಲವನ್ನು ಉಂಟುಮಾಡಿದೆ. ಭಾರತದ ಅತಿದೊಡ್ಡ ಸುದ್ದಿ ಸಂಸ್ಥೆಯನ್ನ ಟ್ವಿಟರ್ ಲಾಕ್ ಮಾಡಿದೆ ಎಂದು ಸಂಪಾದಕಿ ಸ್ಮಿತಾ ಪ್ರಕಾಶ್ ಟ್ವೀಟ್’ನಲ್ಲಿ ತಮ್ಮ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ.