ಸಮಗ್ರ ನ್ಯೂಸ್: ಎಂಭತ್ತು ವರ್ಷ ತುಂಬಿದ ನಾಗರಿಕರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶವನ್ನ ಚುನಾವಣೆ ಆಯೋಗ ಕಲ್ಪಿಸಿದೆ. ಇದರ ಅಡಿಯಲ್ಲಿ ಹಿರಿಯ ನಟಿ ಲೀಲಾವತಿ, ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ಮನೆಯಲ್ಲಿ ಮತದಾನ ಮಾಡಿದ್ದಾರೆ. ಮಗ ವಿನೋದ್ ರಾಜ್ ಸಹಾಯದಿಂದ ಅವರು ಮನೆಯಲ್ಲಿ ಮತದಾನ ಮಾಡಿದ್ದಾರೆ.
ಮತದಾನ ಮಾಡಿದ ಹಿರಿಯ ನಟಿ ಲೀಲಾವತಿ “ಚುನಾವಣೆ ಆಯೋಗ ಈ ಅವಕಾಶ ಕಲ್ಪಿಸಿದ್ದು ನನ್ನಂತಹ ಹಿರಿಯರಿಗೆ ಅನುಕೂಲವಾಗಿದೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಎಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಭಾಗಿಯಾಗಿ” ಅಂತ ಹೇಳಿದ್ದಾರೆ.
ಈ ಸಲ ಮತದಾನ ಮಾಡಿದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೇ 10ರಂದು ಮತದಾನ ದಿನಾಂಕ ಘೋಷಣೆ ಆಗಿದ್ದರೂ, ಚುನಾವಣೆ ಆಯೋಗ ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ ಕಲ್ಪಿಸಿರುವುದರಿಂದ ಇಂದು ಲೀಲಾವತಿ ಅವರು ಮತದಾನ ಮಾಡಿದ್ದಾರೆ.