ಕಾಲೇಜೊಂದರಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಈ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ್ ನಲ್ಲಿ ನಡೆದಿದೆ ಎನ್ನಲಾಗಿದೆ.
ಟ್ವಿಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಜಾಲತಾಣ ಬಳಕೆದಾರರಾದ ಅರುಣೇಶ್ ಯಾದವ್ ಅವರು “ಅತ್ಯಾಚಾರಿಗಳಿಗೆ ಮುಕ್ತ ಹಸ್ತ ನೀಡಿರುವುದು ನಮ್ಮ ರಾಜ್ಯದ ದುರದೃಷ್ಟಕರ ಘಟನೆ.
ಸರ್ಕಾರಿ ಕೈಗಾರಿಕಾ ಸಂಸ್ಥೆಯ ಐಟಿಐ ಕಾಲೇಜಿನ ಈ ವೀಡಿಯೊ ವೈರಲ್ ಆಗುತ್ತಿದೆ. ಶಿಕ್ಷಕರೊಬ್ಬರು ಬಲವಂತವಾಗಿ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದಾರೆ” ಎಂದು ವಿಡಿಯೋವನ್ನು ಉತ್ತರಪ್ರದೇಶ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದರು.
ವಿಡಿಯೋ ನೋಡಿದ ತಕ್ಷಣವೇ ಉತ್ತರ ಪ್ರದೇಶದ ಪೊಲೀಸರು ಆರೋಪಿತ ಶಿಕ್ಷಕನನ್ನ ಬಂಧಿಸಿದ್ದಾರೆ. ಬಂಧಿತ ಶಿಕ್ಷಕನ ವಿಡಿಯೋ ಹಂಚಿಕೊಂಡಿರುವ ಪೊಲೀಸರು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಶಿಕ್ಷಕನ ಹೆಸರು ವಿಜಯ್ ಸಿಂಗ್. ಅವರು ಕತ್ರಾದ ಐಟಿಐ ಕಾಲೇಜಿನಲ್ಲಿ ಶಿಕ್ಷಕರಾಗಿದ್ದಾರೆ. ದೂರು ಸ್ವೀಕರಿಸಿದ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಿರ್ಜಾಪುರದ ಎಸ್ಪಿ ಸಂತೋಷ್ ಮಿಶ್ರಾ ಹೇಳಿದ್ದಾರೆ. ಹೋಳಿ ಹಬ್ಬ ಆಚರಣೆ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
हमारे प्रदेश का दुर्भाग्य है बलात्कारियों को खुली छूट मिली हुई है!#मिर्जापुर :- राजकीय औद्योगिक संस्थान ITI कॉलेज का वीडियो काफी वायरल है !
— Dr. Arunesh Kumar Yadav (डॉ अरुणेश यादव) (@YadavArunesh) April 27, 2023
एक टीचर किस प्रकार से छात्रा के साथ जबरदस्ती छेड़छाड़ करता दिख रहा है।@Uppolice कृपया संज्ञान ले!! pic.twitter.com/HzqwLjV3Jb