ಸಮಗ್ರ ನ್ಯೂಸ್: ತಲೆ ಮೇಲೆ ಮರ ಬಿದ್ದು ಮಹಿಳೆ ಸಾವನಪ್ಪಿದ ಘಟನೆ ಕೊಕ್ಕಡದಲ್ಲಿ ಸಂಭವಿಸಿದೆ.
ಮೃತರನ್ನು ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿ ದಾಮೋದರ ಆಚಾರ್ಯ ಎಂಬವರ ಪತ್ನಿ ಗಾಯತ್ರಿ (೫೫ )ಎಂದು ಗುರುತಿಸಲಾಗಿದೆ.
ಇವರು ಹಳ್ಳಿಂಗೇರಿ ಕ್ವಾರ್ಟಸ್ ಬಳಿ ಮರವೊಂದರ ಗೆಲ್ಲುಗಳನ್ನು ತೆಗೆಯುವ ವೇಳೆ ತಲೆಗೆ ಆಕಸ್ಮಿಕವಾಗಿ ಮರ ಬಿದ್ದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.