ಸಮಗ್ರ ನ್ಯೂಸ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಭೇಟಿ ನೀಡಿದಾಗ ಕೆಲ ಹೊತ್ತು ಗೊಂದಲಕ್ಕೆ ಒಳಗಾದರು. ಇಲ್ಲಿಗೆ ಬರುವುದಕ್ಕೂ ಮೊದಲು ಮೀನು ಮುಟ್ಟಿದ್ದೇನೆ ದೇವಸ್ಥಾನದ ಒಳಗೆ ಹೋಗಬೇಕೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕಿದ್ದರು.
ರಾಹುಲ್ ಗಾಂಧಿಗೆ ಮಹಿಳೆಯೊಬ್ಬರು ದೊಡ್ಡ ಗಾತ್ರದ ಅಂಜಲ್ ಮೀನು ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಈ ಮೀನನ್ನು ಎತ್ತಿ ಖುಷಿ ಪಟ್ಟ ರಾಹುಲ್, ಮೀನುಗಾರ ಮಹಿಳೆಯ ಜೊತೆ ಆತ್ಮೀಯವಾಗಿ ನಿಂತು ಫೋಟೋಗೆ ಪೋಸ್ ಕೊಟ್ಟರು.
ಅಲ್ಲಿಂದ ನೇರವಾಗಿ ಮಹಾಲಕ್ಷ್ಮಿ ದೇಗುಲಕ್ಕೆ ರಾಹುಲ್ ಗಾಂಧಿ ಬಂದಿದ್ದರು. ಮೀನನ್ನು ಕೈಯಲ್ಲಿ ಹಿಡಿದಿದ್ದ ರಾಹುಲ್ ನಾನಿನ್ನು ಕೈತೊಳೆದಿಲ್ಲ ದೇವಸ್ಥಾನದ ಒಳಗೆ ಬರಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಕೊನೆಗೆ ಅಲ್ಲಿದ್ದ ಕಾಂಗ್ರೆಸ್ ನಾಯಕರು ಯಾವುದೇ ಅಭ್ಯಂತರ ಇಲ್ಲ, ತಾವು ಒಳಗೆ ಬರಬಹುದು ಎಂದಿದ್ದಾರೆ.
ಆದರೂ ರಾಹುಲ್ ಗಾಂಧಿ ಗುಡಿಯ ಹೊಸ್ತಿಲ ಹೊರಗೆ ನಿಂತು ಆಲೋಚನೆ ಮಾಡಿದ್ದಾರೆ. ನಂತರ ಜೊತೆಗಿದ್ದವರು ದೇಗುಲದ ಒಳಗೆ ಕರೆದುಕೊಂಡು ಹೋದರು. ಆದ್ರೆ ರಾಹುಲ್ ಗಾಂಧಿ ದೇವಾಲಯದ ಗರ್ಭಗುಡಿ ಬಳಿ ಹೋಗದೇ ಬಾಗಿಲಿನಿಂದ ಎರಡೆಜ್ಜೆ ಮುಂದೆ ನಿಂತು ಅರ್ಚಕರಿಗೆ ಮೀನು ಮುಟ್ಟಿರುವುದಾಗಿ ಕೈಸನ್ನೆ ಮಾಡಿದರು. ಬಳಿಕ ನಿಂತಲ್ಲಿಂದ ದೇವರಿಗೆ ಕೈಮುಗಿದು ನಮಸ್ಕರಿಸಿದರು.
ನಂತರ ಅರ್ಚಕರು ದೇವರಿಗೆ ಪೂಜೆ ಮಾಡಿ ಆರತಿ ತಂದು ರಾಹುಲ್ ಗಾಂಧಿಗೆ ನೀಡಿದರು. ಶಾಲು ಹೊದಿಸಿ, ಹಣ್ಣು ನೀಡಿ ದೇವರ ಫೋಟೋ ನೀಡಿ ಗೌರವಿಸಿದರು.
What a great person with humbleness .
Well Educated and ideal Candidate for Prime Ministerial Position .