Ad Widget .

ಬಂಟ್ವಾಳ: ಆತ್ಮಹತ್ಯೆಗೆ ಶರಣಾದ ನವವಿವಾಹಿತೆ

Samagra news: ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಯುವತಿಯೋರ್ವರು ತವರು ಮನೆಯಲ್ಲಿ ವಿಷ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕು ಕೆದಿಲ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಕೆದಿಲ ಗ್ರಾಮದ ಗುಡ್ಡಕೋಡಿ ಬಾಳಪ್ಪ ಎಂಬವರ ಪುತ್ರಿ ಹರ್ಷಿತಾ (28) ಮೃತಪಟ್ಟವರು. ಇವರು ಕೆಮ್ಮಿಂಜೆ ದೇಗುಲದ ಮ್ಯಾನೇಜರ್ ಪ್ರಶಾಂತ್ ಜತೆಗೆ ಫೆಬ್ರವರಿ 10ರಂದು ವಿವಾಹ ನಡೆದಿತ್ತು. ಮದುವೆಯ ನಂತರ ಹರ್ಷಿತಾ ತನ್ನ ಗಂಡನ ಮನೆಯಲ್ಲಿ ವಾಸಿಸುತ್ತಿದ್ದು, ಏಪ್ರಿಲ್ 23ರಂದು ತನ್ನ ಪೋಷಕರ ಮನೆಗೆ ಹೋಗಿದ್ದರು. ಅಲ್ಲಿ 24 ರಂದು ರಾತ್ರಿ 11 ಗಂಟೆಗೆ ತಾನು ಕೀಟನಾಶಕ ಸೇವಿಸಿರುವುದಾಗಿ ತಾಯಿಗೆ ತಿಳಿಸಿದ್ದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

Ad Widget . Ad Widget .

ಆಕೆ ಮಾನಸಿಕ ಖಿನ್ನತೆಯಿಂದ ಈ ಕೃತ್ಯ ಎಸಗಿರುವುದಾಗಿ ತಾಯಿ ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *