Ad Widget .

ಬೆಂಗಳೂರು: ಉದ್ಯೋಗ ಅರಸಿ ಬಂದ ಯುವಕ ಲಿಪ್ಟ್ ನಲ್ಲಿ ಸಿಲುಕಿ ಸಾವು

ಸಮಗ್ರ ನ್ಯೂಸ್: ಉದ್ಯೋಗ ಅರಸಿಕೊಂಡು ಉತ್ತರಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ಯುವಕ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟ ದಾರುಣ ಘಟನೆ ನಗರದ ಜೆ.ಸಿ.ರಸ್ತೆ ಭರತ್ ಸರ್ಕಲ್​ ಬಳಿಯ ಕಮರ್ಷಿಯಲ್​ ಬಿಲ್ಡಿಂಗ್​ನಲ್ಲಿ ನಡೆದಿದೆ.

Ad Widget . Ad Widget .

ಲಿಫ್ಟ್​​ನಲ್ಲಿ ಸಿಲುಕಿ ಮೃತಪಟ್ಟ ಯುವಕನನ್ನು ಉತ್ತರಪ್ರದೇಶ ಮೂಲದ ವಿಕಾಸ್​(26) ಎಂದು ಗುರುತಿಸಲಾಗಿದೆ.

Ad Widget . Ad Widget .

ಸಂಜಯ್ ಆಟೋಮೊಬೈಲ್​​ ಶಾಪ್​ನಲ್ಲಿ ಕೆಲಸ ಮಾಡ್ತಿದ್ದ ವಿಕಾಸ್​​, ಆರು ತಿಂಗಳ ಹಿಂದೆ ಬೆಂಗಳೂರಿಗೆ ಕೆಲಸಕ್ಕೆ ಬಂದಿದ್ದ. ಸಂಜೆ ಏಳು ಗಂಟೆ ಸುಮಾರಿಗೆ ಕಮರ್ಷಿಯಲ್​ ಬಿಲ್ಡಿಂಗ್​ನ ಲಿಫ್ಟ್​​ನಲ್ಲಿ ಸಿಲುಕಿ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪೊಲೀಸರು ಮಗನ ಸಾವಿನ ವಿಚಾರ ಪೋಷಕರಿಗೆ ತಿಳಿಸಿದ್ದು, ವಿಕಾಸ್ ಪೋಷಕರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಪೋಷಕರಿಗೆ ಹಸ್ತಾಂತರಿಸಲಾಗುವುದು.

Leave a Comment

Your email address will not be published. Required fields are marked *