ಸಮಗ್ರ ನ್ಯೂಸ್: ತನ್ನ ಸ್ವಂತ ಕ್ಷೇತ್ರ ಗೋವಿಂದರಾಜನಗರ ಬಿಟ್ಟು ವರುಣಾ ಹಾಗೂ ಚಾಮರಾಜನಗರದ ವಿಧಾನಸಭಾ ಕ್ಷೇತ್ರಗಳೆರಡಲ್ಲೂ ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಸ್ಪರ್ಧೆ ಮಾಡುತ್ತಿರುವ ಸಚಿವ ವಿ ಸೋಮಣ್ಣ ಅವರಿಗೆ ಎರಡೂ ಕ್ಷೇತ್ರಗಳಲ್ಲಿ ಸೋಲುವ ಆತಂಕ ಹೆಚ್ಚಾಗಿದೆ.
ವರುಣಾ ವಿಧಾನಸಭಾ ಕ್ಷೇತ್ರದ ಎರಡು ಹಳ್ಳಿಗಳಲ್ಲಿ ಮತಯಾಚನೆ ಮಾಡುವ ವೇಳೆ ಗ್ರಾಮಸ್ಥರಿಂದ ತರಾಟೆಗೆ ಒಳಗಾಗಿದ್ದ ಸೋಮಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಇಲ್ಲಿ ಸಚಿವ ವಿ ಸೋಮಣ್ಣ ಅವರು ಚಾಮರಾಜನಗರ ಜೆಡಿಎಸ್ ಅಭ್ಯರ್ಥಿಗೆ ನಿನ್ನ ಕೈಮುಗಿತಿನಿ ನಾಮಪತ್ರ ವಾಪಸ್ ತಗೋ ಎಂದಿದ್ದಾರೆ. ಮಾತ್ರವಲ್ಲದೆ ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಗೂಟದ ಕಾರು ಕೊಡಿಸಿ ಪದವಿ ನೀಡುವ ಆಮಿಷವನ್ನು ಒಡಿದ್ದರು.
ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಅವರ ನಂತರ ತನ್ನದೆ ಆದ ಇಮೇಜ್ ಹೊಂದಿರುವ ಲಿಂಗಾಯತ ಸಮುದಾಯದ ನಾಯಕನಿಗೆ ಇಷ್ಟವಿಲ್ಲದಿದ್ದರೂ ಬಿಜೆಪಿ ಹೈಕಮಾಂಡ್ ಸಿದ್ದರಾಮಯ್ಯಗೆ ಪ್ರಬಲ ಸ್ಪರ್ಧೆಯೊಡ್ಡುವ ಅಭ್ಯರ್ಥಿಯಾಗಿ ವಿ ಸೋಮಣ್ಣ ಅವರನ್ನು ನಿಲ್ಲಿಸಿದೆ. ಆದರೆ ಕ್ಷೇತ್ರದಲ್ಲಿ ಸೋಮಣ್ಣ ಅವರಿಗೆ ಇಲ್ಲಿ ಸೋಮಣ್ಣ ಅವರಿಗೆ ಅಷ್ಟೋಂದು ಹೋಲ್ಡ್ ಇಲ್ಲ ಎನ್ನವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಬಹಿರಂಗವಾಗಿರುವ ಆಡಿಯೋದಲ್ಲಿ ವಿ ಸೋಮಣ್ಣ ಅವರು ಜೆಡಿಎಸ್ ಅಭ್ಯರ್ಥಿಯಾದ ಮಲ್ಲಿಕಾರ್ಜುನ (ಆಲೂರು ಮಲ್ಲು) ಎಂಬುವವರ ಬಳಿ ನಿನ್ನ ಕೈಮುಗಿತಿನಿ ಕಣಯ್ಯ ನಾಮಪತ್ರ ವಾಪಸ್ ತಗೋ. ಜಿಟಿಜಿ ಅವರೊಂದಿಗೆ ನಾನು ಮಾತನಾಡುತ್ತೇನೆ. ನಾವಿಬ್ಬರು ಬಾಲ್ಯ ಸ್ನೇಹಿತರು ಎಂದು ಬೇಡಿಕೊಳ್ಳುವಂತೆ ಕಂಡು ಬರುತ್ತದೆ. ಅಧಿಕಾರವಿದ್ದಾಗ ವಿ ಸೋಮಣ್ಣ ಅವರು ತಮ್ಮದೇ ಬಿಜೆಪಿಯಲ್ಲಿ ಆಲೂರು ಮಲ್ಲು ತರಹದ ನಾಯಕರನ್ನು ತನ್ನ ಬಳಿ ಬೆಂಬಲಿಗರಾಗಿ ಹೊಂದಿದ್ದರು, ಆದರೆ ಈಗ ಅಂತಹವರ ಬಳಿ ಹಿರಿಯ ನಾಯಕ ವಿ ಸೋಮಣ್ಣ ಅವರು ಕೇಳಿಕೊಳ್ಳುವುದು ಹೈಕಮಾಂಡ್ ಹಿರಿಯನ್ನು ಯಾವ ಮಟ್ಟದಲ್ಲಿ ನೋಡುತ್ತದೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ.