Ad Widget .

‘ನೀವು ನಮ್ಮ ಮನ್ ಕಿ ಬಾತ್ ಯಾಕೆ ಕೇಳ್ತಿಲ್ಲ?’ | ಬಿಜೆಪಿ ಸಂಸದನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳಾ ಕುಸ್ತಿಪಟುಗಳಿಂದ ಪ್ರಧಾನಿ ಮೋದಿಗೆ ಪ್ರಶ್ನೆ

ಸಮಗ್ರ ನ್ಯೂಸ್: ಮಹಿಳಾ ಕುಸ್ತಿಪಟುಗಳಿಗೆ ಬಿಜೆಪಿ ಸಂಸದ ನೀಡಿದ ಲೈಂಗಿಕ ಕಿರುಕುಳದ ವಿರುದ್ಧ ದಿಲ್ಲಿಯಲ್ಲಿ ಬೀಡು ಬಿಟ್ಟಿರುವ ದೇಶದ ಖ್ಯಾತ ಕುಸ್ತಿಪಟುಗಳು ಪ್ರಧಾನಿ ನರೇಂದ್ರ ಮೋದಿಗೆ ಪ್ರಶ್ನೆಗಳನ್ನು ಕೇಳಿದ್ದು, ನೀವು ನಮ್ಮ ‘ಮನ್ ಕಿ ಬಾತ್’ ಅನ್ನು ಏಕೆ ಕೇಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

Ad Widget . Ad Widget .

ಬಿಜೆಪಿ ಸಂಸದ ಮತ್ತು ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಬಳಿ ಸಮಯಾವಕಾಶವನ್ನು ಕೇಳಿರುವ ಕುಸ್ತಿಪಟುಗಳು ತಮಗೆ ನ್ಯಾಯ ಸಿಗುವವರೆಗೆ ಧರಣಿಯನ್ನು ಕೈ ಬಿಡಲ್ಲ ಎಂದು ಹೇಳಿದ್ದಾರೆ.

Ad Widget . Ad Widget .

ತಾವು ಪದಕಗಳನ್ನು ಗೆದ್ದಾಗ ಪ್ರಧಾನಿ ಮೋದಿ ನಮ್ಮನ್ನು ಅಭಿನಂದಿಸಿ ಚಿತ್ರಗಳನ್ನು ಕ್ಲಿಕ್ಕಿಸುತ್ತಾರೆ, ಆದರೆ ನಮ್ಮ ಕಷ್ಟದ ಸಂದರ್ಭದಲ್ಲಿ ರಸ್ತೆಯಲ್ಲಿ ಕುಳಿತಿರುವುದನ್ನು ಕಂಡೂ ಕಣ್ಣು ಮುಚ್ಚಿರುವುದು ಅಚ್ಚರಿ ತಂದಿದೆ ಎಂದು ಕುಸ್ತಿಪಟುಗಳು ಹೇಳಿದ್ದಾರೆ.

ಪ್ರತಿಯೊಬ್ಬರ ‘ಮನ್ ಕಿ ಬಾತ್’ ಅನ್ನು ಕೇಳುತ್ತಾರೆ. ನಮ್ಮ ‘ಮನ್ ಕಿ ಬಾತ್’ ಕೇಳಲು ಆಗುವುದಿಲ್ಲವೇ? ನಾವು ಪದಕಗಳನ್ನು ಗೆದ್ದಾಗ ನಮ್ಮನ್ನು ಅವರ ಮನೆಗೆ ಆಹ್ವಾನಿಸುತ್ತಾರೆ, ನಮಗೆ ಗೌರವವನ್ನು ನೀಡುತ್ತಾರೆ ಮತ್ತು ನಮ್ಮನ್ನು ಅವರ ಹೆಣ್ಣುಮಕ್ಕಳು ಎಂದು ಕರೆಯುತ್ತಾರೆ. ಆದರೆ, ಇಂದು, ಅವರು ನಮ್ಮ ‘ಮನ್ ಕಿ ಬಾತ್’ ಅನ್ನು ಕೇಳಬೇಕೆಂದು ನಾವು ಅವರಿಗೆ ಮನವಿ ಮಾಡುತ್ತೇವೆ” ಎಂದು ರಿಯೊ ಗೇಮ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಹೇಳಿದ್ದಾರೆ.

Leave a Comment

Your email address will not be published. Required fields are marked *