Ad Widget .

ಬೆತ್ತಲೆ ಮಹಿಳೆಯೊಂದಿಗೆ ನಡೆದಿತ್ತು‌ ಸ್ಮಶಾನದಲ್ಲಿ ವಿಚಿತ್ರ ಪೂಜೆ| ಹುಡುಗಿಯರ ಫೋಟೋ ಇಟ್ಕೊಂಡು ನಡೆದಿತ್ತು ವಾಮಾಚಾರ

ಸಮಗ್ರ ನ್ಯೂಸ್: ಸ್ಮಶಾನದಲ್ಲಿ ಮಧ್ಯರಾತ್ರಿ ಬೆತ್ತಲೆಯಾಗಿ ಮಹಿಳೆ ಸೇರಿದಂತೆ ನಾಲ್ವರು ಮಾಟ ಮಂತ್ರ ಮಾಡುತ್ತಿದ್ದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಚೋಗಚಿಕೊಪ್ಪ ತಾಂಡಾದಲ್ಲಿ ಕಂಡು ಬಂದಿದೆ.

Ad Widget . Ad Widget .

ಊರ ಹೊರಗಿನ ಸ್ಮಶಾನದಲ್ಲಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬೆತ್ತಲಾದ ಮಹಿಳೆ ಹಾಗೂ ಮೂವರು ಪುರುಷರು ಮೂವರು ಹುಡುಗಿಯರ ಫೋಟೋ ಇಟ್ಟು ಅದರ ಸುತ್ತಲೂ ನಿಂಬೆಹಣ್ಣುಗಳನ್ನು ಇಟ್ಟು ವಾಮಾಚಾರ ಮಾಡುತ್ತಿದ್ದರು.

Ad Widget . Ad Widget .

ಮನುಷ್ಯನ ತಲೆ ಬುರುಡೆಯ ಮೇಲೆ ವ್ಯಕ್ತಿ ಒಬ್ಬರ ಹೆಸರು ಬರೆದು ಕೋಳಿ ರಕ್ತದಲ್ಲಿ ಪೂಜೆ ಮಾಡಿದ್ದಾರೆ. ನಿಂಬೆ ಹಣ್ಣುಗಳಿಗೆ ಲವಂಗ ಚುಚ್ಚಿ ಸ್ಮಶಾನದ ಸುತ್ತಲೂ ಇಟ್ಟಿದ್ದಾರೆ.

ಇವರು ಅಮಾವಾಸ್ಯೆಯಿಂದಲೇ ಪೂಜೆ ನಡೆಸುತ್ತಿದ್ದರು. ಈ ಬಗ್ಗೆ ಮೊದಲ ದಿನ ಪ್ರಶ್ನಿಸಿದಾಗ ಮೀನು ಹಿಡಿಯಲು ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಸೋಮವಾರ ರಾತ್ರಿ ಸ್ಮಶಾನದಲ್ಲಿ ಪೂಜೆ ನಡೆಯುತ್ತಿರುವ ವೇಳೆ ಸ್ಥಳೀಯರು ತೆರಳಿದಾಗ ವಿಚಿತ್ರ ವಸ್ತುಗಳನ್ನು ಇಟ್ಟು ಪೂಜಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ಮೂವರು ಪರಾರಿಯಾಗಿದ್ದು, ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ವಾಮಾಚಾರ ಮಾಡುತ್ತಿದ್ದ ಶಂಕೆ ಇದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *