ಸುಳ್ಯ: ಹಿರಿಯ ರಾಜಕೀಯ ಧುರೀಣ ಚಂದ್ರಶೇಖರ ಮೇಲ್ನಾಡು ಇನ್ನಿಲ್ಲ

ಸಮಗ್ರ‌ ನ್ಯೂಸ್: ಅವಿಭಜಿತ ಸುಳ್ಯ ತಾಲೂಕಿನ ಹಿರಿಯ ರಾಜಕೀಯ ಧುರೀಣ ಚಂದ್ರಶೇಖರ ಮೇಲ್ನಾಡುರವರು ಇಂದು(ಎ.26) ಬೆಳಿಗ್ಗೆ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.

Ad Widget ... ..

ಮುಂಜಾನೆ ಎಂದಿನಂತೆ ಚಹಾ ತಿಂಡಿ ಸೇವಿಸಿ, ಸ್ವಲ್ಪ ಹೊತ್ತಲ್ಲಿ ತೀವ್ರ ಹೃದಯಘಾತದಿಂದ ಕುಸಿದ ಅವರನ್ನು ಅವರ ಪುತ್ರ ಗುರುಪ್ರಸಾದ್ ಮೇಲ್ನಾಡುರವರು ಕಡಬ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಬಗ್ಗೆ ಅವರು ಕೊನೆಯುಸಿರೆಳೆದರು.

Ad Widget

ಚಂದ್ರಶೇಖರ ಮೇಲ್ನಾಡುರವರು ಏನೆಕಲ್ಲು ಪ್ರಾಥಮಿಕ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ, ಗುತ್ತಿಗಾರು ತಾಲೂಕು ಪಂಚಾಯಿತ್ ನ ಸದಸ್ಯರಾಗಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ದುಡಿದಿದ್ದು, ಇತ್ತೀಚೆಗೆ ‌ಸಾರ್ವಜನಿಕ ಜೀವನದಿಂದ ಅಂತರ ಕಾಯ್ದುಕೊಂಡಿದ್ದರು.

ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *