ಸಮಗ್ರ ನ್ಯೂಸ್: ಸುಳ್ಯ ನಗರದ ಕುಡಿಯುವ ನೀರು ಸರಬರಾಜಿಗೆ ಮೂಲಧಾರವಾಗಿರುವ ಪಯಸ್ವಿನಿ ನದಿಯ ಹರಿವು ಸಂಪೂರ್ಣ ನಿಂತು ಹೋಗಿದ್ದು, ಮಳೆ ಬಾರದೆ ಬಿಸಿಲಿನ ಝಳ ಮುಂದುವರಿದಲ್ಲಿ ಕೇವಲ ಮೂರ್ನಾಲ್ಕು ದಿನಗಳಷ್ಟು ಸಮಯಕ್ಕೆ ಮಾತ್ರ ನಗರಕ್ಕೆ ನೀರು ಸರಬರಾಜು ಸಾಧ್ಯವಿರುವುದು ಕಂಡುಬರುತ್ತಿದೆ.
ಈ ಹಿನ್ನಲೆಯಲ್ಲಿ ನಗರಕ್ಕೆ ನೀರು ಸರಬರಾಜು ಕುರಿತಂತೆ ಅನೇಕ ತುರ್ತು ಕ್ರಮಗಳನ್ನು ಕೈಗೊಳ್ಳುವುದು ತೀರಾ ಅಗತ್ಯವಿರುತ್ತದೆ. ಆದರೆ ಚುನಾವಣೆ ನೀತಿ ಸಂಹಿತೆಯ ಹಿನ್ನಲೆಯಲ್ಲಿ ಪ್ರತಿನಿಧಿಗಳ ಸಭೆ ನಡೆಸಿ, ಪಂಚಾಯತ್ ಪರಿಹಾರೋಪಾಯಗಳ ಕುರಿತು ಚರ್ಚಿಸಿ ನಿರ್ಧಾರಕೈಗೊಳ್ಳಲು ಅಸಾಧ್ಯವಾಗಿರುತ್ತದೆ.
ಆದ್ದರಿಂದ ತುರ್ತು ಗಮನ ಹರಿಸಿ ಕುಡಿಯುವ ನೀರಿನ ಸರಬರಾಜಿನ ಕುರಿತಂತೆ ಸುಳ್ಯದಲ್ಲಿ ತುರ್ತಾಗಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ಕರೆದು ಕ್ರಮಕೈಗೊಳ್ಳುವರೆ ಈ ಮೂಲಕ ಕೋರುತ್ತೇವೆ ಎಂದು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅವರು ದ.ಕ. ಜಿಲ್ಲಾಧಿಕಾರಿ ಹಾಗೂ ಸುಳ್ಯ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.