Ad Widget .

ಬ್ಯಾಟ್ ಹಿಡಿದು ಕ್ರೀಸ್ ಗಿಳಿದ ಅರುಣ್ ಕುಮಾರ್ ಪುತ್ತಿಲ| ಪುತ್ತೂರಲ್ಲಿ ಗೆಲುವಿನ ಸಿಕ್ಸರ್ ಬಾರಿಸ್ತಾರಾ ಬಂಡಾಯ ನಾಯಕ!?

ಸಮಗ್ರ ನ್ಯೂಸ್: ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರ ಒತ್ತಡದ ನಡುವೆಯೂ ಬಂಡಾಯ ಕಣಕ್ಕಿಳಿದ ಅರುಣ್ ಪುತ್ತಿಲ ತಮ್ಮ ನಾಮಪತ್ರ ಹಿಂಪಡೆಯದೆ ಕಣದಲ್ಲಿ ಗಟ್ಟಿಯಾಗಿ ನಿಂತುಬಿಟ್ಟಿದ್ದಾರೆ. ಅಲ್ಲದೆ, ತಮ್ಮ ಚುನಾವಣಾ ಚಿಹ್ನೆಯಾಗಿ ಕ್ರಿಕೆಟ್ ಬ್ಯಾಟ್ ಅನ್ನು ಆಯ್ಕೆ ಮಾಡಿಕೊಂಡಿದ್ದು, ಅರುಣ್ ಪುತ್ತಿಲ ಕ್ರೀಸಿಗಿಳಿದು ಬ್ಯಾಟಿಂಗ್ ಮಾಡುವ ಸೂಚನೆ ನೀಡಿದ್ದಾರೆ.

Ad Widget . Ad Widget .

ಪುತ್ತೂರು ಮತ್ತು ಸುಳ್ಯ ಕ್ಷೇತ್ರದಲ್ಲಿ ಅರುಣ್ ಪುತ್ತಿಲ ಪರವಾಗಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ ಫೇಸ್ಬುಕ್ ಜಾಲತಾಣದಲ್ಲಿ ಅರುಣ್ ಪುತ್ತಿಲ ಪರ ಅಭಿಯಾನ ಶುರುವಾಗಿದ್ದು, ಕೇಸರಿ ಕಾರ್ಯಕರ್ತರ ಆರ್ಭಟಕ್ಕೆ ಬಿಜೆಪಿ ನಾಯಕರು ಹಲ್ಲು ಕಚ್ಚಿಕೊಂಡು ಮೌನಕ್ಕೆ ಶರಣಾಗುತ್ತಿದ್ದಾರೆ. ಕಾರ್ಯಕರ್ತರ ಮಾತಿಗೆ ಬೆಲೆ ಸಿಕ್ಕಿಲ್ಲ.

Ad Widget . Ad Widget .

ಕ್ಷೇತ್ರದಲ್ಲಿ ಟ್ರೆಂಡಿಂಗ್ ನೋಡಿದರೆ, ಪಕ್ಷೇತರ ಅರುಣ್ ಪುತ್ತಿಲ ಮತ್ತು ಕಾಂಗ್ರೆಸ್ನ ಅಶೋಕ್ ರೈ ನಡುವೆ ನೇರ ಸೆಣಸಾಟ ನಿರೀಕ್ಷೆಯಿದ್ದು ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗಲಿದೆ. ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ ಬಿಜೆಪಿ ಪರ ಒಲವುಳ್ಳ ಜನರು ಅರುಣ್ ಪುತ್ತಿಲ ಪರ ನಿಂತಿದ್ದಾರೆ. ಬಿಜೆಪಿ ನಾಯಕರು ಪುತ್ತಿಲರಿಗೆ ಅವಮಾನಿಸಿದ್ದಾರೆ ಎಂದೇ ಜನರು ವ್ಯಾಖ್ಯಾನ ಮಾಡುತ್ತಿದ್ದಾರೆ. ಜನರ ಮನಸ್ಸಲ್ಲಿ ಪುತ್ತಿಲ ಪರ ಒಲವು ಇರುವುದನ್ನು ಹೊಡೆದೋಡಿಸಲು ಪುತ್ತೂರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕರೆಸಲು ಜಿಲ್ಲಾ ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ಆದರೆ ಬಿಜೆಪಿಯ ಒಳಗಡೆಯೇ ಪುತ್ತಿಲ ಪರ ಇರುವ ಕೇಸರಿ ಕಾರ್ಯಕರ್ತರು ಮತ್ತು ಪುತ್ತಿಲ ವಿರೋಧಿಗಳು ಎಂಬ ಎರಡು ಬಣಗಳು ಸೃಷ್ಟಿಯಾಗಿದ್ದು, ಪುತ್ತೂರಿನಲ್ಲಿ ಈ ಬಾರಿ ಬಿಜೆಪಿಗೆ ಪಕ್ಷದ ಕಾರ್ಯಕರ್ತರೇ ಸೆಣಸಾಟಕ್ಕಿಳಿದಂತಾಗಿದೆ.

Leave a Comment

Your email address will not be published. Required fields are marked *