ಪುಟ್ಟ ಬಾಲಕಿಯ ಪಿಯಾನೋ ನುಡಿಸುವಿಕೆಗೆ ಮನಸೋತ ಮೋದಿ

ಸಮಗ್ರ ನ್ಯೂಸ್: ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ, ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತಾ ಎಂಬ ಕನ್ನಡ ಹಾಡಿಗೆ ಪಿಯಾನೋ ನುಡಿಸಿದ ಪುಟ್ಟ ಬಾಲಕಿಯ ಪ್ರತಿಭೆಗೆ ಪ್ರಧಾನಿ ನರೇಂದ್ರ ಮೋದಿ ಮನಸೋತಿದ್ದಾರೆ.

Ad Widget ... ..

ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಈ ವಿಡಿಯೋ ಪ್ರತಿಯೊಬ್ಬರ ಮುಖದ ಮೇಲೆ ಮುಗುಳುನಗೆ ತರಿಸಬಹುದು. ಅನನ್ಯ ಪ್ರತಿಭೆ ಹಾಗೂ ಸೃಜನಶೀಲತೆ. ಶಾಲ್ಮಲಿಗೆ ಶುಭಹಾರೈಕೆಗಳು ಎಂದು ಬರೆದಿದ್ದಾರೆ.

Ad Widget

ಆಕೆಯ ತಾಯಿ ಹಾಡಿನ ಸಾಲುಗಳನ್ನು ಹೇಳುತ್ತಿದ್ದಂತೆ ಬಾಲಕಿ ಕೂಡ ಪಿಯಾನೋದಲ್ಲಿ ಅದೇ ಹಾಡನ್ನು ನುಡಿಸುವ ಮೂಲಕ ಲಕ್ಷಾಂತರ ಮಂದಿಯ ಶ್ಲಾಘನೆಗೆ ಪಾತ್ರವಾಗಿದ್ದಾಳೆ. ಈ ಹಾಡನ್ನು ಕವಿ ಕೆಎಸ್​ ನರಸಿಂಹಸ್ವಾಮಿಯವರು ಬರೆದಿದ್ದಾರೆ.

ಈ ವಿಡಿಯೋದಲ್ಲಿರುವ ಬಾಲಕಿಯ ಹೆಸರು ಶಾಲ್ಮಲಿ. ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಅನಂತ್​ ಕುಮಾರ್ ಎಂಬುವವರು ಹಂಚಿಕೊಂಡಿದ್ದರು. ಇದನ್ನು ಪ್ರಧಾನಿ ನರೇಂದ್ರ ಮೋದಿಯವರು ಗಮನಿಸಿ ಮಗುವ ಪ್ರತಿಭೆಯನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.

Leave a Comment

Your email address will not be published. Required fields are marked *