Ad Widget .

ಬೆಳ್ತಂಗಡಿ: ಗೆಳೆಯರೊಂದಿಗೆ ನದಿಗೆ ತೆರಳಿ ಕಣ್ಮರೆಯಾಗಿದ್ದಾತ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ಗೆಳೆಯನೊಂದಿಗೆ ಹೊಳೆಗೆ ಸ್ನಾನಕ್ಕೆಂದು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಪುದುವೆಟ್ಟು ಗ್ರಾಮದ ಶಾಂತಿ ಹೊಳೆಯಲ್ಲಿ ನಡೆದಿದೆ.

Ad Widget . Ad Widget .

ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಕಂಚೇರಿ ಕಂಡ ನಿವಾಸಿ ಜೈಸನ್‌ ಪಿ.ವಿ. (34) ತನ್ನ ಅಕ್ಕನ ಮನೆಗೆ ಬಂದಿದ್ದು ಗೆಳೆಯ ಸ್ಟ್ಯಾನ್ಲಿಯೊಂದಿಗೆ ರವಿವಾರ ಪುದುವೆಟ್ಟು ಗ್ರಾಮದ ಶಾಂತಿಯ ಹೊಳೆಗೆ ಸ್ನಾನಕ್ಕೆಂದು ಬೈಕ್‌ನಲ್ಲಿ ತೆರಳಿದ್ದರು.

Ad Widget . Ad Widget .

ಈ ವೇಳೆ ಸ್ನಾನಕ್ಕೆ ಇಳಿದ ಜೈಸನ್‌ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಸೋಮವಾರ ಬೆಳಗ್ಗೆ ಅವರ ಮೃತದೇಹವು ಪತ್ತೆಯಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *