ಸಮಗ್ರ ನ್ಯೂಸ್: ಕಡಬ ತಾಲೂಕಿನ ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷಗೊಂಡಿದ್ದು, ಅಸ್ವಸ್ಥಗೊಂಡಿರುವ ಶಂಕೆ ಸ್ಥಳೀಯವಾಗಿ ವ್ಯಕ್ತವಾಗಿದೆ.

ರವಿವಾರ ಸಂಜೆಯಿಂದ ರಾತ್ರಿವರೆಗೆ ಚೇರು ಭಾಗದಲ್ಲಿ ಸಂಚರಿಸಿರುವ ಕಾಡಾನೆ ಸೋಮವಾರ ಬೆಳಗ್ಗೆ ಎರ್ಮಾಯಿಲ್ ಭಾಗದಲ್ಲಿ ಕಾಣಸಿಕ್ಕಿದೆ. ಆನೆ ನೋಡಲು ತೀರಾ ಅಸ್ವಸ್ಥಗೊಂಡಿರುವಂತೆ ಕಂಡಿದ್ದು, ನಡೆದಾಡಲು ಕಷ್ಟಪಡುತ್ತಿದ್ದು, ಎಡಗಾಲಿಗೆ ಬಲವಾದ ಗಾಯವಾಗಿದ್ದು, ತಿಂದ ಆಹಾರ ಜಗಿದು ಅಲ್ಲಲ್ಲೇ ಉಗುಲಿ ಹೋಗುತ್ತಿದೆ ಎನ್ನಲಾಗಿದ್ದು, ಅರಣ್ಯ ಇಲಾಖೆ ಗಮನ ಹರಿಸುವಂತೆ ಸ್ಥಳೀಯರು ತಿಳಿಸಿದ್ದಾರೆ.

ಈ ಬಗೆಗಿನ ಬರಹವೂ ವೈರಲ್ ಆಗಿದೆ. ಪ್ರತ್ಯಕ್ಷದರ್ಶಿಗಳು ಇದೇ ಮಾತನ್ನು ಹೇಳುತ್ತಿದ್ದಾರೆ. ಕಾಡಾನೆ ಹೆದ್ದಾರಿ ದಾಟುವ ವಿಡಿಯೋ ವೈರಲ್ ಆಗಿದೆ.