Ad Widget .

ಬೆಳ್ತಂಗಡಿ: ಮಾಜಿ‌ ಶಾಸಕ,‌ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡರ ಬಳಿ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನು? ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡರ ಮನೆ ಮೇಲೆ‌ ಏ.24 ರಂದು ಬೆಳಗ್ಗೆ 6:30 ಕ್ಕೆ ಆದಾಯ‌ ಇಲಾಖೆ ಅಧಿಕಾರಿಗಳು (ಐಟಿ) ದಾಳಿ ನಡೆಸಿದ್ದು, ಹಲವು ಸೊತ್ತು‌ ಹಾಗೂ ದಾಖಲೆಗಳು ವಶವಾಗಿವೆ.

Ad Widget . Ad Widget .

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬಂಗಾಡಿ ಫಾರ್ಮ್ ಹೌಸ್ , ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಪಕ್ಕದಲ್ಲಿರುವ ಮನೆ, ಲಾಯಿಲ ಪ್ರಸನ್ನ ಎಜುಕೇಶನ್ ಟ್ರಸ್ಟ್ ಮೇಲೆ ಏಕಕಾಲದಲ್ಲಿ ಏ.24 ರ ಬೆಳಗ್ಗೆ 6:30 ಕ್ಕೆ ದಾಳಿ ಮಾಡಿದ್ದರು. ಈ ವೇಳೆ ಲಕ್ಷಾಂತರ ನಗದು ಹಣ , ಚಿನ್ನಾಭರಣ , ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Ad Widget . Ad Widget .

ಇಂದಬೆಟ್ಟು ಗ್ರಾಮದ ಬಂಗಾಡಿ ಫಾರ್ಮ್ ಹೌಸ್ ನಲ್ಲಿ ಮಧ್ಯಾಹ್ನ 2:30 ರವರೆಗೆ ಶೋಧ ಕಾರ್ಯ ನಡೆಸಿ ಕಾರ್ಯಾಚರಣೆ ಅಂತ್ಯ ಮಾಡಿದ್ದರು. ಬೆಳ್ತಂಗಡಿ ಮತ್ತು ಪ್ರಸನ್ನ ಎಜುಕೇಶನ್ ಟ್ರಸ್ಟ್ ಮೇಲೆ ರಾತ್ರಿ 10:15 ರ ವರೆಗೆ ಶೋಧ ಕಾರ್ಯಾಚರಣೆ ಅಂತ್ಯಗೊಳಿಸಿದ್ದರು.

ಐಟಿ ಅಧಿಕಾರಿಗಳಿಗೆ ದಾಖಲೆಗಳು ಇಲ್ಲದ ಹಣ ಬೆಳ್ತಂಗಡಿ ಮನೆಯಲ್ಲಿ ಗಂಗಾಧರ ಗೌಡರ ಪತ್ನಿ ಪ್ರಸನ್ನ ಗಂಗಾಧರ ಗೌಡರ ಲಾಕರಿನಲ್ಲಿ 50 ಲಕ್ಷ ನಗದು , ರಂಜನ್ ಗೌಡ ಲಾಕರಿನಲ್ಲಿ 10 ಲಕ್ಷ , ಗಂಗಾಧರ ಗೌಡ ಮಗಳು ರೇಷ್ಮ.ಜಿ.ಗೌಡ ಅವರ 8 ವರ್ಷದ ಮಗಳ ಲಾಕರಿನಲ್ಲಿ‌ 3.90 ಲಕ್ಷ ಹಣ ಸೇರಿದಂತೆ ಸುಮಾರು 63 ಲಕ್ಷ ರೂಪಾಯಿಗೂ ಮಿಕ್ಕಿ ಹಣ ಪತ್ತೆಯಾಗಿದೆ ಎನ್ನಲಾಗಿದೆ. ಅದಲ್ಲದೆ ಚಿನ್ನಾಭರಣ , ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡು ಮಂಗಳೂರು ಕಚೇರಿಗೆ ತೆಗೆದುಕೊಂಡು ಹೋಗಿದ್ದಾರೆ.

ಮಂಗಳೂರು , ಬೆಂಗಳೂರು ,ದೆಹಲಿ ಕಚೇರಿಯ 20 ಕ್ಕೂ ಅಧಿಕ ಐಟಿ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆಯ 4 ಜನ ಪೊಲೀಸರು ಹಾಗೂ ಬೆಳ್ತಂಗಡಿ ಚುನಾವಣಾಧಿಕಾರಿ ಚಂದ್ರಕಾಂತ್ ಕೂಡ ಸಾಥ್ ನೀಡಿದ್ದರು.

Leave a Comment

Your email address will not be published. Required fields are marked *