Ad Widget .

ಹೊತ್ತಿ ಉರಿಯಲಿದ್ದಾನೆ ಸೂರ್ಯ| ಆದಷ್ಟೂ ಮನೆಯೊಳಗೆ ಇರಲು ನಾಸಾ ಸೂಚನೆ

ಸಮಗ್ರ ನ್ಯೂಸ್: ಸೂರ್ಯ‌ ಮುಂದಿನ ಒಂದೆರಡು ದಿನಗಳಲ್ಲಿ ಇನ್ನಷ್ಟು ಪ್ರಖರಗೊಳ್ಳಲಿದ್ದು ಹೆಚ್ಚು ಬಿಸಿಲಿನ ತಾಪಮಾನ ಅಂತೆಯೇ ಬಿಸಿಗಾಳಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಬಾಹ್ಯಾಕಾಶ ಸಂಸ್ಥೆ ನಾಸಾ ಎಚ್ಚರಿಸಿದೆ. ಸೂರ್ಯನು 11 ವರ್ಷಗಳ ಆವರ್ತನೆಯ ಉತ್ತುಂಗ ಮಟ್ಟವನ್ನು ತಲುಪುವ ಸಮಯದಲ್ಲಿ ಇನ್ನಷ್ಟು ಪ್ರಖರಗೊಳ್ಳುತ್ತದೆ ಎಂದು ಸಂಸ್ಥೆ ತಿಳಿಸಿದೆ.‌‌ ಆದ್ದರಿಂದ ಮುಂದಿನ ಎರಡ್ಮೂರು ದಿ‌ನ ಮನೆಯಿಂದ ಹೊರಗೆ ಬರೋದನ್ನು ಆದಷ್ಟು ತಪ್ಪಿಸುವುದು ಒಳಿತು ಎಂದು ನಾಸಾ ತಿಳಿಸಿದೆ.

Ad Widget . Ad Widget .

ಸೌರ ಬಿರುಗಾಳಿಯ ಆರಂಭದ ಹೊಡೆತವು ಏಪ್ರಿಲ್ 24 ರಂದು ಭೂಮಿಯನ್ನು ಅಪ್ಪಳಿಸಲಿದ್ದು ಏಪ್ರಿಲ್ 25 ರಂದು ಇನ್ನಷ್ಟು ಪ್ರಖರ ಬಿರುಗಾಳಿ ಭೂಮಿಯನ್ನು ಸೋಕಲಿದೆ ಎಂದು ನಾಸಾ ಪ್ರಕಟಣೆಯಲ್ಲಿ ಸೂಚಿಸಿದೆ.

Ad Widget . Ad Widget .

ಈ ಸಮಯದಲ್ಲಿ ಆದಷ್ಟು ಪ್ರಖರವಾದ ಬಿಸಿಲಿಗೆ ಜನರು ಹೊರಗೆ ಓಡಾಡದಂತೆ ಸಂಸ್ಥೆ ತಿಳಿಸಿದ್ದು, ಸಾಕಷ್ಟು ನೀರು ಸೇವಿಸುವ ಮೂಲಕ ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳುವಂತೆ ತಿಳಿಸಿದೆ.

ನಾವು 2025 ರಲ್ಲಿ ಸೌರ ಗರಿಷ್ಠವನ್ನು ಸಮೀಪಿಸುತ್ತಿರುವಾಗ ಸೌರ ಘಟನೆಗಳು ಹೆಚ್ಚಾಗುತ್ತಲೇ ಇರುತ್ತವೆ ಮತ್ತು ಇದು ಭೂಮಿಯ ಮೇಲಿನ ನಮ್ಮ ಜೀವನ ಮತ್ತು ತಂತ್ರಜ್ಞಾನ, ಹಾಗೆಯೇ ಬಾಹ್ಯಾಕಾಶದಲ್ಲಿ ಉಪಗ್ರಹಗಳು ಮತ್ತು ಗಗನಯಾತ್ರಿಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ನಾಸಾ ಇತ್ತೀಚಿನ ತನ್ನ ಬ್ಲಾಗ್‌ನಲ್ಲಿ ಎಚ್ಚರಿಕೆ ನೀಡಿದೆ.

Leave a Comment

Your email address will not be published. Required fields are marked *