ಸಮಗ್ರ ನ್ಯೂಸ್: ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಸರ್ಕಾರ ತಂದ ಒಟ್ಟು 20 ಚೀತಾಗಳ ಪೈಕಿ ಒಂದು ಚೀತಾ ಈಗಾಗಲೇ ಸಾವನ್ನಪ್ಪಿದ್ದು ಇದೀಗ ಮತ್ತೊಂದು ಚೀತಾ ಕೂಡಾ ಸಾವನ್ನಪ್ಪಿದೆ. ಮೃತ ಪಟ್ಟಿರುವ ಚಿರತೆ ‘ಉದಯ್’ಗೆ ಆರು ವರ್ಷ ವಯಸ್ಸಾಗಿತ್ತು.
ಇದಕ್ಕೂ ಮುನ್ನ ನಮೀಬಿಯಾದ ಚೀತಾ ಸಶಾ ಮಾರ್ಚ್ 27 ರಂದು ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿತ್ತು.
ಬೆಳಿಗ್ಗೆ ತಪಾಸಣೆಯ ಸಮಯದಲ್ಲಿ, ದಕ್ಷಿಣ ಆಫ್ರಿಕಾದಿಂದ ತರಲಾದ ಚೀತಾ ತಲೆ ತಗ್ಗಿಸಿ ಮಂಕಾಗಿರುವುದು ಕಂಡುಬಂದಿತು. ನಂತ್ರ ಹಾಜರಾದ ಪಶುವೈದ್ಯರು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ತಕ್ಷಣವೇ ಚೀತಾವನ್ನು ದೊಡ್ಡ ಆವರಣದಿಂದ ಹೊರ ತರಲಾಯಿತಾದರೂ ದುರದೃಷ್ಟವಶಾತ್ ಸಂಜೆ 4 ಗಂಟೆ ಸುಮಾರಿಗೆ ಚೀತಾ ಮೃತಪಟ್ಟಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (PCCF) ವನ್ಯಜೀವಿ ಜೆ.ಎಸ್.ಚೌಹಾಣ್ ತಿಳಿಸಿದ್ದಾರೆ.