ವಿರಾಜಪೇಟೆ: ವರ್ತಕನಿಗೆ ಗುಂಡು ಹೊಡೆದ ನಿವೃತ ಎಸ್ಪಿ ಮಗ

Samagra news: ನಿವೃತ ಎಸ್ಪಿ ಮಗನೋರ್ವ ವರ್ತಕನಿಗೆ ಗುಂಡು ಹೊಡೆದ ಘಟನೆ ವಿರಾಜಪೇಟೆ ತಾಲೂಕು ಅಮ್ಮತ್ತಿಯಲ್ಲಿ ನಡೆದಿದೆ.

Ad Widget ... ..

ನಿವೃತ ಎಸ್ಪಿ ನೆಲ್ಲಮಕ್ಕಡ ಚಿನ್ನಪ್ಪ ಎಂಬುವವರ ಪುತ್ರ ರಂಜಿತ್ ಎಂಬಾತ ಪ್ರಕರಣ ಅರೋಪಿ. ಈತ ಬೋಪಣ್ಣ ಎಂಬ ವರ್ತಕ ಮೇಲೆ ಸರ್ವಿಸ್ ರಿವಾಲ್ವರ್ ನಿಂದ ಮೂರು ಸುತ್ತಿನ ಗುಂಡು ಹಾರಿಸಿದ್ದಾನೆ.

Ad Widget

ಈ ವೇಳೆ ಕೂದುಲೆಳೆಯಲ್ಲಿ ಪ್ರಾಣಾಪಾಯದಿಂದ ವರ್ತಕ ಬೋಪಣ್ಣ ಪಾರಾಗಿದ್ದಾರೆ. ಆರೋಪಿ ರಂಜಿತ್ ಸಣ್ಣಪುಟ್ಟ ಗಾಯಗೊಂಡಿದ್ದು ಅಮ್ಮತ್ತಿ ಆಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಆಸ್ಪತ್ರೆಯಲ್ಲೇ ಪೊಲೀಸರು ಬೀಡುಬಿಟ್ಟಿದ್ದಾರೆ .

ಸ್ಥಳಕ್ಕೆ ಎಸ್‌.ಪಿ ರಾಮ್‌ರಾಜನ್‌ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ಈ ಹಿಂದೆಯೂ ಹಲವು ಬಾರಿ ಸಾರ್ವಜನಿಕರಿಗೆ ಗುಂಡು ಹಾರಿಸಿದ ಆರೋಪ ಆರೋಪಿ ರಂಜಿತ್ ಮೇಲೆ ಕೇಳಿ ಬಂದಿದೆ.

Leave a Comment

Your email address will not be published. Required fields are marked *