ಸುಳ್ಯ: ಪತ್ರಕರ್ತ ದಿ.ರವಿರಾಜ್ ವಳಲಂಬೆ ಪುತ್ರಿಯರಿಬ್ಬರಿಗೆ ಡಿಸ್ಟಿಂಕ್ಷನ್

ಸಮಗ್ರ ನ್ಯೂಸ್: ಖ್ಯಾತ ಪತ್ರಕರ್ತ ಹಾಗೂ ಅಂಕಣಕಾರರಾಗಿ ಹೆಸರುವಾಸಿಯಾಗಿದ್ದ ಸುಳ್ಯ ತಾ. ಗುತ್ತಿಗಾರಿನ ದಿ.ರವಿರಾಜ್ ವಳಲಂಬೆಯವರ ಅವಳಿ ಹೆಣ್ಣು ಮಕ್ಕಳಿಬ್ಬರು ವಿಶೇಷ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Ad Widget ... ..

ಖ್ಯಾತ ಪತ್ರಕರ್ತ ದಿ.ರವಿರಾಜ್ ವಳಲಂಬೆ ಅವರ ಅವಳಿ ಪುತ್ರಿಯರು ಉತ್ತಮ ಅಂಕಗಳನ್ನು ಪಡೆದು ಕೀರ್ತಿ ತಂದಿದ್ದಾರೆ. ಉಡುಪಿಯ ವಿದ್ಯೋದಯ ಪಿ.ಯು.ಕಾಲೇಜಿನ ವಿದ್ಯಾರ್ಥಿನಿಯರಾದ ಸಂಜನಾ ಎಂ.ಆರ್. 568 ಅಂಕ ( ಶೇ.94 ) ಹಾಗೂ ಸಿಂಚನಾ ಎಂ.ಆರ್. 571 ಅಂಕ ( ಶೇ.95 ) ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.

Ad Widget

ದಿ.ರವಿರಾಜ್ ವಳಲಂಬೆ ಅವರು ರಾಜ್ಯಮಟ್ಟದ ಟಿ.ವಿ. ಚಾನೆಲ್ ಗಳಲ್ಲಿ ಹಾಗೂ ಉಡುಪಿಯಲ್ಲಿ ಹಲವು ವರ್ಷಗಳ ಕಾಲ ಪತ್ರಕರ್ತರಾಗಿ ಕೆಲಸ ನಿರ್ವಹಿಸಿ ಇತ್ತೀಚೆಗೆ ಅಗಲಿದ್ದರು. ಇದೀಗ ಇವರ ಅವಳಿ ಪುತ್ರಿಯರು ಈ ಸಾಧನೆ ಮಾಡಿದ್ದು, ಹೆಮ್ಮೆ ಪಡುವ ವಿಚಾರ.

Leave a Comment

Your email address will not be published. Required fields are marked *