Ad Widget .

ಹರಿಹರ ಪಲ್ಲತ್ತಡ್ಕ ಹೈಸ್ಕೂಲ್ ನಿಂದ ಕಳವು: ಠಾಣೆಗೆ ದೂರು

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಸರಕಾರಿ ಪ್ರೌಢ ಶಾಲೆಯಿಂದ ಕಂಪ್ಯೂಟರ್ ಗಳಿಗೆ ಅಳವಡಿಸುವ ಬ್ಯಾಟರಿಗಳನ್ನು ಕಳವುಗೈದಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .


ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ರಾಮಚಂದ್ರ ಕೆ. ಸುಬ್ ಠಾಣೆಗೆ ದೂರು ನೀಡಿದ್ದಾರೆ. ಎ. 15ರಂದು ಎಂದಿನಂತೆ ಹರಿಹರ ಪಲ್ಲತ್ತಡ್ಕ ಗ್ರಾಮದ ಪ್ರೌಢ ಶಾಲೆಯ ಕಛೇರಿಯ ಬಾಗಿಲು ಪೂರ್ವಾಹ್ನ ಸುಮಾರು 9:30ಕ್ಕೆ ಮುಚ್ಚಿ ಬೀಗ ಹಾಕಿದ್ದು ಬಳಿಕ ಎ.18ರ ಅಪರಾಹ್ನ ಸಂಬಳ ಬಿಲ್ಲು ತಯಾರಿಸುವ ಸಂಬಂದ ಹರಿಹರ ಪ್ಲಲತ್ತಡ್ಕ ಪ್ರೌಢ ಶಾಲೆಗೆ ಬಂದಾಗ ಬೀಗವನ್ನು ಗಮನಿಸಲಾಗಿ ಅಳವಡಿಸಿದ ಬೀಗವನ್ನು ಒಡೆದು ಬಾಗಿಲ ಅಳದಂಡವನ್ನು ಹಾಕಿ ಮುಚ್ಚಿದ್ದು ಕಂಡುಬಂದಿದೆ. ಬಾಗಿಲನ್ನು ತೆರದು ಒಳಗೆ ಹೋಗಿ ನೋಡಲಾಗಿ ಈ ಹಿಂದೆ ಇದ್ದ 16 ಕಂಪ್ಯೂಟರ್‌ಗಳ ಅಳವಡಿಸುವ ಬ್ಯಾಟರಿಗಳು ಕಳವು ಆಗಿರುವುದು ಪತ್ತೆಯಾಗಿದೆ.

Ad Widget . Ad Widget .

ಕಳುವಾದ ಬ್ಯಾಟರಿಗಳ ಅಂದಾಜು ಒಟ್ಟು ಮೌಲ್ಯ 16,000 ರೂ. ಆಗಬಹುದು ಅಂದಾಜಿಸಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *