ಬಂಟ್ವಾಳ: ಮಹಡಿ ಮೇಲಿಂದ ಬಿದ್ದು ಯುವಕ ಸಾವು

ಸಮಗ್ರ ನ್ಯೂಸ್: ಯುವಕನೋರ್ವ ಮಹಡಿ ಮೇಲಿನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ಮಾಡಮೆ ಎಂಬಲ್ಲಿ ನಡೆದಿದೆ. ಸಿದ್ದಕಟ್ಟೆ ದೇವಸ್ಯ ನಿವಾಸಿ ದುರ್ಗಾ ಪ್ರಸಾದ್ ಮೃತರು ಎಂದು ಗುರುತಿಸಲಾಗಿದೆ.

Ad Widget ... ..

ದುರ್ಗಾ ಪ್ರಸಾದ್ ಸಿದ್ಧಕಟ್ಟೆ ಸಮೀಪದ ಮಾಡಮೆ ಎಂಬಲ್ಲಿ ಮನೆಯೊಂದರಲ್ಲಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಮೇಲಿನಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ‌ದೂರು ದಾಖಲಾಗಿದೆ.

Ad Widget

Leave a Comment

Your email address will not be published. Required fields are marked *