ಸಮಗ್ರ ನ್ಯೂಸ್: ಕಳೆದ ಒಂದು ತಿಂಗಳಿನಿಂದ ಆಚರಿಸಲಾಗುತ್ತಿದ್ದ ರಂಜಾನ್ ಉಪವಾಸವನ್ನು ಮುಸ್ಲಿಂ ಸಮುದಾಯದವರು ಇಂದು ಅಂತ್ಯಗೊಳಿಸಲಿದ್ದಾರೆ. ಅಲ್ಲದೇ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ನಾಳೆ (ಎ.22) ರಂಜಾನ್ ಹಬ್ಬವನ್ನು ಆಚರಿಸಲಿದ್ದಾರೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮಾಹಿತಿ ನೀಡಿದ್ದು, ಇಂದು ಚಂದ್ರನ ದರ್ಶನವಾದ ಕಾರಣ, ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಮುಸ್ಲಿಂ ಸಮುದಾಯದವರು ರಂಜಾನ್ ಉಪವಾಸವನ್ನು ಅಂತ್ಯಗೊಳಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ದಿನದಂದು ಪ್ರತೀ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಗುತ್ತದೆ. ಹೊಸ ಉಡುಪುಗಳನ್ನು ತೊಟ್ಟುಕೊಂಡು ಬೆಳಗ್ಗಿನ ಪ್ರಾರ್ಥನೆಗೆ, ವಿಶೇಷವಾಗಿ ಪುರುಷರು ಮಸೀದಿಗೆ ತೆರಳಿ ನಮಾಜ್ ಮಾಡುತ್ತಾರೆ
ರಂಜಾನ್ ತಿಂಗಳಲ್ಲಿ ಮುಸ್ಲಿಮರು ಒಂದು ತಿಂಗಳ ಕಾಲ ಉಪವಾಸ ವೃತ ಆಚರನೆ ನಡೆಸುತ್ತಾರೆ. ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್ನ ಒಂಬತ್ತನೇ ತಿಂಗಳಾಗಿದೆ. ಈ ತಿಂಗಳ ಚಂದ್ರ ದರ್ಶನವಾಗುತ್ತಲೇ ಮುಸ್ಲಿಮರು ರಂಜಾನ್ ತಿಂಗಳಿಡೀ ಹಗಲಿನಲ್ಲಿ ಅನ್ನ, ಪಾನೀಯ ತೊರೆದು ಕಟ್ಟು ನಿಟ್ಟಿನಲ್ಲಿ ಉಪವಾಸ ವೃತ ಆಚರಿಸುತ್ತಾರೆ. 30 ದಿನಗಳು ಅಂದರೆ ಒಂದು ತಿಂಗಳ ಕಾಲ ನಡೆಯುವ ಈ ಹಬ್ಬವನ್ನು ನಾಳೆ ಕೊನೆಯಾಗಿದ್ದು, ಕೊನೆಯ ದಿನದಂದೂ ಭರ್ಜರಿ ಸೆಲೆಬ್ರೇಷನ್‌ನಲ್ಲಿ ತೊಡಗುತ್ತಾರೆ.