ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿ ಉಪನ್ಯಾಸಕ ಮನೋಜ್ ಕುಮಾರ್ ನೇಮಕ

ಸಮಗ್ರ ನ್ಯೂಸ್: ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ಸಿದ್ಧಗಂಗಾ ಪಾಲಿಟೆಕ್ನಿಕ್​ನಲ್ಲಿ ಉಪನ್ಯಾಸಕನಾಗಿರುವ ಮನೋಜ್ ಕುಮಾರ್​ ಅವರನ್ನು ನೇಮಕ ಮಾಡಿ ಸಿದ್ದಲಿಂಗ ಸ್ವಾಮೀಜಿ ಆದೇಶ ಹೊರಡಿಸಿದ್ದಾರೆ. ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮೈಲನಹಳ್ಳಿ ನಿವಾಸಿ ಷಡಕ್ಷರಿ, ವಿರೂಪಾಕ್ಷಮ್ಮ ದಂಪತಿಯ ಪುತ್ರ.

Ad Widget ... ..

ತ್ರಿವಿಧ ದಾಸೋಹಿ ಮಠ ಎಂದು ವಿಶ್ವಖ್ಯಾತಿ ಪಡೆದಿರುವ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ಉತ್ತರಾಧಿಕಾರಿಯಾಗಿ ಸಿದ್ಧಲಿಂಗ ಸ್ವಾಮೀಜಿ ಆಡಳಿತ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಈಗ ನಡೆದಿದೆ.

Ad Widget

Leave a Comment

Your email address will not be published. Required fields are marked *