Ad Widget .

ಮಹತ್ವದ ಬೆಳವಣಿಗೆ; ಕನಕಪುರದಿಂದ ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಕೆ

ಸಮಗ್ರ ನ್ಯೂಸ್: ಮಹತ್ವದ ಬೆಳವಣಿಗೆಯೊಂದರಲ್ಲಿ ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.

Ad Widget . Ad Widget .

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಾಮಪತ್ರ ತಿರಸ್ಕೃತಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಚುನಾವಣಾ ಅಖಾಡದಿಂದ ಹಿಂದೆ ಸರಿಯಬಾರದು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಮುಂಜಾಗೃತಾ ಕ್ರಮವಾಗಿ ಇದೀಗ ಡಿ.ಕೆ.ಸುರೇಶ್ ಕನಕಪುರದಿಂದ ನಾಮಪತ್ರ ಸಲ್ಲಿಸಿದ್ದಾರೆ.

Ad Widget . Ad Widget .

ಬಳಿಕ ಮಾತನಾಡಿದ ಅವರು,ಬಿಜೆಪಿಯ ಕುತಂತ್ರಕ್ಕೆ ತಕ್ಕ ಉತ್ತರ ಕೊಡಬೇಕಿದೆ. ಹೀಗಾಗಿ ಕೆಲವೊಂದು ಮಾಹಿತಿ ಆಧಾರದ ಮೇಲೆ ನಾಮಪತ್ರ ಸಲ್ಲಿಸಿದ್ದೇನೆ. ಬಿಜೆಪಿಯಿಂದ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಚುನಾವಣಾಧಿಕಾರಿಗಳು ಸಹ ಸರ್ಕಾರದ ಅಧೀನದಲ್ಲೇ ಇದ್ದಾರೆ , ಈಗ ನಾನು ನಾಮಪತ್ರ ಸಲ್ಲಿಸಿದ್ದು,ಕೊನೆ ಕ್ಷಣದಲ್ಲಿ ನಾನು ಸ್ಪರ್ಧಿಸುತ್ತೇನೋ ಅಥವಾ ನನ್ನ ಅಣ್ಣ ಸ್ಪರ್ಧಿಸುತ್ತಾರೋ ಎಂದು ಕಾದುನೋಡಿ ಎಂದರು.

Leave a Comment

Your email address will not be published. Required fields are marked *