Ad Widget .

ಕಾಂಗ್ರೆಸ್ ನ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ| ಮಂಗಳೂರು ಉತ್ತರ ಕ್ಷೇತ್ರಕ್ಕೆ ಹೊಸ ಮುಖ

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್’ನ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು, ನಿರೀಕ್ಷೆಯಂತೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಇನಾಯತ್ ಅಲಿ ಅವರಿಗೆ ಟಿಕೆಟ್ ನೀಡಲಾಗಿದೆ.‌ ಈ ಕ್ಷೇತ್ರದಲ್ಲಿ ಇನಾಯತ್ ಅಲಿ ಮತ್ತು ಮೊಯ್ದೀನ್ ಬಾವ ನಡುವೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು.

Ad Widget . Ad Widget .

ಕೊನೆಗೂ ಈ ಸ್ಪರ್ಧೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತ ಇನಾಯತ್ ಅಲಿ ಜಯಗಳಿಸಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಟಿಕೆಟ್ ವಂಚಿತ ಮೊಯ್ದೀನ್ ಬಾವ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ.

Ad Widget . Ad Widget .

ಉಳಿದಂತೆ ರಾಯಚೂರು – ಮುಹಮ್ಮದ್ ಷಾ ಆಲಂ, ಶಿಡ್ಲಘಟ್ಟ – ಜಿ.ವಿ. ರಾಜಿವ್ ಗೌಡ, ಸಿವಿ ರಾಮನ್‌ನಗರ ಎಸ್ಸಿ- ಎಸ್. ಆನಂದ್‌ ಕುಮಾರ್, ಅರಕಲಗೂಡು – ಎಚ್.ಪಿ.‌ ಶ್ರೀಧರ ಗೌಡ ಅವರ ಹೆಸರುಗಳನ್ನು ಹೈಕಮಾಂಡ್ ಅಂತಿಮಗೊಳಿಸಿದೆ.

Leave a Comment

Your email address will not be published. Required fields are marked *