Samagra news: ಸುಳ್ಯ ವಿಧಾನ ಸಭಾ ಕ್ಷೇತ್ರದ ಜೆ ಡಿ ಎಸ್ ಅಭ್ಯರ್ಥಿಯಾಗಿ ಹೆಚ್ ಎಲ್ ವೆಂಕಟೇಶ್ ನಾಮಪತ್ರವನ್ನು ಚುನಾವಣಾಧಿಕಾರಿ ಅರುಣ್ ಕುಮಾರ್ ಸಂಗಾವಿಯವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆ ಡಿ ಎಸ್ ರಾಜ್ಯ ಉಪಾಧ್ಯಕ್ಷ ಎಂ ಬಿ ಸದಾಶಿವ ,ತಾಲೋಕು ಅದ್ಯಕ್ಷ ಸುಕುಮಾರ್ ಕೊಡ್ತುಗಳಿ, ಮೀರಾ ಸಾಹೇಬ್ ಕಡಬ,ಅಗ್ರಹಾರ ದುಗ್ಗಪ್ಪ ಮೊದಲದವರಿದ್ದರು ಉಪ ಚುನಾವಣಾಧಿಕಾರಿ ಮಂಜುನಾಥ್, ರಮೇಶ್ ಬಾಬು ನಿಯಮವನ್ನು ತಿಳಿಸಿದರು.
ಇದಕ್ಕೂ ಮೊದಲು ರಥಬೀದಿಯಿಂದ ಕಾರ್ಯಕರ್ತರ ಜೊತೆ ಕಾಲ್ನಡಿಗೆ ಜಾಥಾ ನಡೆಸಿದರು. ಈ ಸಂದರ್ಭ ಜೆಡಿಎಸ್ ಸುಳ್ಯ ಮತ್ತು ಕಡಬ ಬ್ಲಾಕ್ ನ ಪ್ರಮುಖರು ಭಾಗವಹಿದ್ದರು.