ಸಮಗ್ರ ನ್ಯೂಸ್: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಕಾಸ್ಟಿಂಗ್ ನಿರ್ದೇಶಕಿ ಮತ್ತು ಕಿರುತೆರೆಯ ಖ್ಯಾತ ನಟಿ ಆರತಿ ಮಿತ್ತಲ್ ಅವರನ್ನು ಮುಂಬೈ ಪೊಲೀಸರು ಪೊಲೀಸರು ಬಂಧಿಸಿದ್ದಾರೆ. ವೇಶ್ಯಾವಾಟಿಕೆ ದಂಧೆ
ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಆಗ ಆರತಿ ಸೇರಿದಂತೆ 2 ಮಾಡೆಲ್ಸ್ ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಮಾಡೆಲ್ಗಳನ್ನು ಬಳಕೆ ಮಾಡಿಕೊಂಡು ಈ ದಂಧೆಯನ್ನು ನಡೆಸುತ್ತಿದ್ದರು ಎಂಬುದನ್ನು ಪೊಲೀಸರು ಹೇಳಿದ್ದಾರೆ. ಆರತಿ ಬಂಧನ ಬಾಲಿವುಡ್ ಬಣ್ಣದ ಲೋಕದಲ್ಲಿ ಸಂಚಲನ ಮೂಡಿಸಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ 27 ವರ್ಷದ ನಟಿ ಆರತಿ ಪ್ರಸಿದ್ಧ ಮಾಡೆಲ್ಗಳನ್ನು ದೊಡ್ಡ ದೊಡ್ಡ ಹೋಟೆಲ್ಗಳಿಗೆ ಸಪ್ಲೆ ಮಾಡುತ್ತಿದ್ದರು ಎಂದಿದ್ದಾರೆ. ಆರತಿ ಅವರನ್ನು ರೆಡ್ ಹ್ಯಾಂಗ್ ಆಗಿ ಹಿಡಿಯುವ ಉದ್ದೇಶದಿಂದ ಸಿನಿಮೀಯ ರೀತಿಯಲ್ಲಿ ಪ್ಲಾನ್ ಮಾಡಿ ಬಂಧಿಸಿದ್ದಾರೆ. ಆರತಿ ಜೊತೆ ಡೀಲ್ ಕುದುರಿಸಿದ ಪೊಲೀಸರು ಇಬ್ಬರೂ ಡಮ್ಮಿ ಗ್ರಾಹಕರನ್ನು ಹೋಟೆಲ್ಗೆ ಕಳುಹಿಸಿದ್ದಾರೆ. ಇದನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ. ತಕ್ಷಣ ಆರತಿಯನ್ನು ಬಂಧಿಸಿದ್ದಾರೆ. ಜೊತೆಗೆ ಎರಡು ಮಾಡೆಲ್ಗಳು ಸಹ ಸಿಕ್ಕಿ ಬಿದ್ದಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಮನೋಜ್ ಸುತಾರ್ ಆರತಿ ಜೊತೆ ಡೀಲ್ ಕುದುರಿಸಿದ್ದರು. ಆರತಿ ಮನೋಜ್ ಅವರಿಗೆ 60 ಸಾವಿರ ಬೇಡಿಕೆ ಇಟ್ಟಿದ್ದರು.