Ad Widget .

ಕಾಂಗ್ರೆಸ್ ನಿಂದ ಅಭ್ಯರ್ಥಿಗಳ 4ನೇ ಪಟ್ಟಿ ಪ್ರಕಟ| ಸಸ್ಪೆನ್ಸ್ ನಲ್ಲಿ ಮಂಗಳೂರು ಉತ್ತರ ಕ್ಷೇತ್ರ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ 4ನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, 7 ಮಂದಿ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಸಿ.ಟಿ ರವಿ ಅವರ ಆಪ್ತ ಹೆಚ್.ಡಿ ತಮ್ಮಯ್ಯ ಅವರಿಗೆ ಕಾಂಗ್ರೆಸ್ರ ಟಿಕೆಟ್ ಘೋಷಿಸಿದೆ.

Ad Widget . Ad Widget .

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಬಸರಾಜು ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಮೊಹಮ್ಮದ್ ಯೂಸುಫ್ ಸವಣೂರು ಅವರಿಗೆ ಟಿಕೆಟ್ ನೀಡಿದೆ.

Ad Widget . Ad Widget .

ಈವರೆಗೆ ಒಟ್ಟು 216 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್, 8 ಕ್ಷೇತ್ರಗಳ ಅಭ್ಯರ್ಥಿಗಳನ್ನು ಇನ್ನೂ ಬಾಕಿಯುಳಿಸಿದೆ. ಬಹುನಿರೀಕ್ಷೆಯ ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯನ್ನು 4ನೇ ಪಟ್ಟಿಯಲ್ಲೂ ಘೋಷಿಸಿಲ್ಲ.

ಕಾಂಗ್ರೆಸ್ 4ನೇ ಅಭ್ಯರ್ಥಿಗಳ ಪಟ್ಟಿ:
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ – ಜಗದೀಶ್ ಶೆಟ್ಟರ್
ಚಿಕ್ಕಮಗಳೂರು ಕ್ಷೇತ್ರ – ಹೆಚ್ ಡಿ ತಮ್ಮಯ್ಯ
ಲಿಂಗಸಗೂರು – ದುರ್ಗಪ್ಪ ಹೂಲಗೇರಿಗೆ ಟಿಕೆಟ್
ಹರಿಹರ ಕ್ಷೇತ್ರ – ನಂದಗಾವಿ ಶ್ರೀನಿವಾಸ
ಶಿಗ್ಗಾಂವಿ ಕ್ಷೇತ್ರ – ಮೊಹಮ್ಮದ್ ಯೂಸುಫ್ ಸವಣೂರು
ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರ – ದೀಪಕ್ ಚಿಂಚೋರೆ
ಶ್ರವಣಬೆಳಗೊಳ ಕ್ಷೇತ್ರ – ಎಂಎ ಗೋಪಾಲಸ್ವಾಮಿ

Leave a Comment

Your email address will not be published. Required fields are marked *