Ad Widget .

Magical well| ಎಷ್ಟೇ ನೀರೆತ್ತಿದರೂ ಮತ್ತೆ ತುಂಬುವ ಮ್ಯಾಜಿಕಲ್ ಬಾವಿ! ಬಿರು ಬೇಸಿಗೆಯಲ್ಲೂ ತುಳುಕುತ್ತೆ ಇಲ್ಲಿ ಜಲ!!

ಸಮಗ್ರ ನ್ಯೂಸ್: ಬೇಸಿಗೆ ಕಾಲ ಬರುತ್ತಿದ್ದಂತೆ ನಿಧಾನವಾಗಿ ನೀರಿನ ಮಟ್ಟ ಕಡಿಮೆಯಾಗಿ ಕೆಲವೇ ವಾರಗಳಲ್ಲಿ ಬಾವಿಗಳ ನೀರು ಬತ್ತಿ ಹೋಗುತ್ತವೆ. ಪರಿಣಾಮ ಆ ಬಾವಿಯ ನೀರಿಗೆ ಆಸರೆಯಾಗಿದ್ದವರು ಬರ ಅನುಭವಿಸುತ್ತಾರೆ. ಆದರೆ ಇಲ್ಲೊಂದು ಬಾವಿ ಮಾತ್ರ ಇದೆಲ್ಲಕ್ಕಿಂತಲೂ ಭಿನ್ನವಾಗಿದ್ದು, ಎಲ್ಲರಿಂದಲೂ ಮ್ಯಾಜಿಕಲ್ ಬಾವಿ ಎಂದು ಕರೆಸಿಕೊಂಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಹೌದು.. ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿರುವ ಈ ಬಾವಿ ನಿಗೂಢತೆಗೆ ಸಾಕ್ಷಿಯಾಗಿದ್ದು, ಎಲ್ಲರೂ ಹುಬ್ಬೇರುವಂತೆ ಮಾಡಿದೆ. ಅಂದ ಹಾಗೆ ಈ ಬಾವಿಯಲ್ಲಿ ಯಾವ ಕಾಲಕ್ಕೂ ನೀರು ತಪ್ಪೋದಿಲ್ಲ. ಮಳೆಗಾಲ ಇರಲಿ, ಬೇಸಿಗೆ ಕಾಲ ಇರಲಿ ಬಾವಿ ತುಂಬಾ ನೀರು ಇರುತ್ತದೆ. ಇಡೀ ಊರಿಗೆ ಊರೇ ಬೇಸಿಗೆ ಕಾಲದಲ್ಲಿ ನೀರಿಲ್ಲದೆ ಪರಿತಪಿಸುತ್ತಿದ್ದರೂ ಕೂಡ ಈ ಬಾವಿಯಲ್ಲಿ ಇಡೀ ಊರಿಗೆ ಬೇಕಾಗುವಷ್ಟು ನೀರು ಇರುತ್ತದೆ. ಇದಕ್ಕಾಗಿಯೇ ಈ ಬಾವಿಗೆ ಎಲ್ಲರೂ ಮ್ಯಾಜಿಕಲ್ ಬಾವಿ ಅಂತಾನೂ ಕರೆಯುತ್ತಾರೆ. ಆದರೆ ಈ ಬಾವಿಯ ಮೂಲ ಹೆಸರು ಕಮಲ ನೀರಜಿ.

Ad Widget . Ad Widget . Ad Widget .

ಇತಿಹಾಸವನ್ನು ಕೆದಕಿದರೆ, ಸುಮಾರು 500 ವರ್ಷಗಳ ಹಿಂದೆ ಥೆಕ್ಕುಂಕುರ್​ ರಾಜ ಮನೆತನದಲ್ಲಿ ಕಮಲ ನೀರಜಿ ಹೆಸರಿನ ಈ ಮ್ಯಾಜಿಕಲ್​ ಬಾವಿಯನ್ನು ನಿರ್ಮಾಣ ಮಾಡಲಾಗಿತ್ತಂತೆ. ಅಂದಿನಿಂದ ಇಂದಿನತನಕ ಈ ಬಾವಿಯಲ್ಲಿ ನೀರು ತಪ್ಪಿಲ್ಲ. ಆ ಗ್ರಾಮದಲ್ಲಿ ಇರುವ ಮನೆಗಳಿಗೆ ಸರಿಯಾದ ನೀರು ಸಂಪರ್ಕ ಇಲ್ಲದೇ ಇರೋದ್ರಿಂದ ಸುಮಾರು 300 ಕುಟುಂಬಗಳಿಗೆ ಇದೇ ಬಾವಿಯಿಂದ ನೀರು ಸರಬರಾಜು ಆಗುತ್ತಿದೆ. ಪ್ರತಿನಿತ್ಯ ಅಷ್ಟೊಂದು ಕುಟುಂಬಗಳಿಗೆ ನೀರು ಕೊಡುತ್ತಿದ್ದರೂ ಕೂಡ ಜನರಿಗೆ ಯಾವುದೇ ಮೀಟರ್ ಗೇಜ್ ಇಲ್ಲ, ನೀರಿನ ತೆರಿಗೆಯೂ ಇಲ್ಲ. ಆ ಪ್ರದೇಶದ ವಾರ್ಡ್‌ ಸಮಿತಿಯು ತಂಕಮ್ಮ ಅವರನ್ನು ಬಾವಿ ನೋಡಿಕೊಳ್ಳಲು ನಿಯೋಜಿಸಿದ್ದು, ವಾರ್ಡಿನ ಪ್ರತಿ ಮನೆಯು ತಂಕಮ್ಮಗೆ ತಿಂಗಳಿಗೆ ಇಂತಿಷ್ಟು ಹಣವನ್ನು ನೀಡುತ್ತದೆ.

ಇನ್ನು ಈ ಬೃಹತ್ ಬಾವಿಯು ಕೊಟ್ಟಾಯಂ ಕಾರ್ಪೊರೇಶನ್‌ನ ನಿಯಂತ್ರಣದಲ್ಲಿ ಇದ್ದು, ಆ ಭಾಗದ ವಾರ್ಡ್ ನಂ 40ರ ಗ್ರಾಮಸ್ಥರು ನಿಯಂತ್ರಿಣ ಮಾಡುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ 6.30ಕ್ಕೆ ತಂಕಮ್ಮ ನೀರು ಬಿಡುತ್ತಾರೆ. ಕುನ್ನುಂಪುರಂ ಸೇರಿದಂತೆ ಆ ಭಾಗದ ವಿವಿಧ ಮನೆಗಳಿಗೆ ಬಾವಿಯ ನೀರು ಹರಿಯುತ್ತದೆ. ಒಂದು ಪ್ರದೇಶಕ್ಕೆ ನೀರು ಹರಿಸಿದ ನಂತರ ಮಧ್ಯಾಹ್ನದ ವೇಳೆಗೆ ಇತರೆ ಪ್ರದೇಶಗಳಿಗೆ ನೀರು ಹರಿಸುತ್ತಾರೆ. ಬಾವಿಯ ನೀರಿನ ಸೇವೆಯು ವಾರ್ಡ್ ವ್ಯಾಪ್ತಿಯಲ್ಲಿ ಮೂರು ಕಿಲೋಮೀಟರ್ ತನಕ ವಿಸ್ತರಿಸಿದೆ. ಈ ವಾರ್ಡ್‌ನ ಬಹುತೇಕ ಎಲ್ಲ ಮನೆಗಳು ಬಾವಿಯ ನೀರೇ ಪ್ರತಿನಿತ್ಯ ಉಪಯೋಗಿಸುತ್ತಾರೆ.

ಕೆಲ ವರ್ಷಗಳ ಹಿಂದೆ ಈ ಬಾವಿಯು ಪರಪನ್ನತ್ ಅರಮನೆಗೆ ಸೇರಿತ್ತು. 90ರ ದಶಕದಲ್ಲಿ ಅರಮನೆಯು ಬಾವಿಯಿಂದ ನೀರನ್ನು ಹರಿಸುವ ಅಧಿಕಾರವನ್ನು ನಟ್ಟಕೊಂ ಪಂಚಾಯತ್‌ಗೆ ಬಿಟ್ಟು ಕೊಟ್ಟಿತು. ಬಳಿಕ ಪಂಚಾಯಿತಿಯು ನಿಗಮದೊಂದಿಗೆ ವಿಲೀನಗೊಂಡಾಗ, ನಿಯಂತ್ರಣ ಅದರ ಸುಪರ್ದಿಗೆ ಬಂದಿತು. ಇನ್ನು ವಿಶೇಷ ಅಂದ್ರೆ ಈ ಬಾವಿಯ ಒಳಭಾಗವನ್ನು ತಾವರೆಯ 13 ದಳಗಳನ್ನು ಹೋಲುವಂತೆ ಕೆತ್ತಲಾಗಿದೆ. ನಿರ್ಮಾಣದ ಮೇಲೆ ಕೆಂಪು ಕಲ್ಲುಗಳಲ್ಲಿ ನಿರ್ಮಿಸಲಾಗಿದ್ದು, ಅದು ಬಹಳ ಬಾಳಿಕೆ ನೀಡುತ್ತದೆ.

Leave a Comment

Your email address will not be published. Required fields are marked *