ಸಮಗ್ರ ನ್ಯೂಸ್: ಈಚೆಗೆ ಸುಳ್ಯದ ಎಲ್ಲಾ ಅಭ್ಯರ್ಥಿಗಳ ಬಗ್ಗೆ ಗಮನಿಸುತ್ತಿದ್ದೆ. ಅದರಲ್ಲಿ ಬಿಜೆಪಿ ಅಭ್ಯರ್ಥಿಯ ಬಗೆಗಿನ ವಿಡಿಯೋ ಗಮನಿಸುತ್ತಿದ್ದೆ ಅವರು ಭಾವನಾತ್ಮಕವಾಗಿ ಮಾತನಾಡಿದರು.ಅವರ ಹಿನ್ನೆಲೆ ಗಮನಿಸಿ ಅಚ್ಚರಿ ಆಯ್ತ.
ಸಮಾಜದ ಅತ್ಯಂತ ಹಿಂದುಳಿದ ವರ್ಗ ಎಂದು ಕರೆಯಿಸಿಕೊಳ್ಳುವ ಸಮುದಾಯಕ್ಕೆ ನೀಡಿದ ಗೌರವ , ಇದರಲ್ಲಿ ಎರಡು ಮಾತಿಲ್ಲ. ಆದರೆ ಸುಳ್ಯದಂತಹ ಪ್ರದೇಶದಲ್ಲಿ ಮೀಸಲಾತಿ ಬಂದು ಇನ್ನೂ ಆ ಸಮುದಾಯಗಳ ಪರಿಸ್ಥಿತಿ ಬದಲಾಗಿಲ್ಲ ಎನ್ನುವ ಸ್ಥಿತಿ ತಿಳಿದು ಅಚ್ಚರಿಯೂ ಆಯಿತು.
ಆ ವಿಡಿಯೋ ನಡುವೆ ಓಣಿಯಡ್ಕ ಚಂದ್ರಣ್ಣ ಅವರ ಹೆಸರು ಬಂದಿತ್ತು. ಅವರು ಬ್ರಾಹ್ಮಣರು ಅವರ ಮನೆಯೊಳಗೆ ಊಟ ಮಾಡಿದೆ ಎನ್ನುತ್ತಾರೆ. ಹಾಗಿದ್ದರೂ ಸಮಾಜದಲ್ಲಿ ಬದಲಾವಣೆ ಸಾಧ್ಯ ಆಗಲಿಲ್ಲ ಎನ್ನುವುದು ಸ್ಪಷ್ಟವಾಯಿತು.
ಅವರು ಒಮ್ಮೆ ಜಿಪಂ ಸದಸ್ಯರಾಗಿದ್ದರು, ಸಂಘದ ಕಾರ್ಯಕರ್ತೆ ಬೇರೆ. ಹಾಗಿದ್ದರೂ ಆ ಸಮುದಾಯದ ಮುಖಂಡೆಯೇ ನೋವಿನಿಂದ ಈಗಲೂ ಮಾತನಾಡುತ್ತಾರೆ..!.
ಅಂದರೆ ಮೀಸಲಾತಿ ಯಾವ ಪ್ರಯೋಜನವೂ ಆಗಿಲ್ಲ ಎನ್ನುವುದರ ಕೈಗನ್ನಡಿಯೇ ಅದು. ಹಾಗಿದ್ದರೂ ನಾವು ಹಿಂದುಳಿದ ಸಮುದಾಯಕ್ಕೆ ನೀಡಿದ ಗೌರವ ಎಂದೆಲ್ಲಾ ಹೇಳಿಸಿಕೊಳ್ಳುವುದರಿಂದ ಪ್ರಯೋಜನ ಇಲ್ಲ ಅಂತ ಆಯ್ತು.
ಏಕೆಂದರೆ ಒಮ್ಮೆ ಜಿಪಂ ಸದಸ್ಯೆ ಆಗಿ, ಸಂಘದ ಕಾರ್ಯಕರ್ತೆ ಆಗಿಯೂ ಬದಲಾವಣೆ ಸಾಧ್ಯ ಆಗಿಲ್ಲ, ಸಮುದಾಯದ ಅಭಿವೃದ್ಧಿ ಸಾಧ್ಯ ಆಗಿಲ್ಲ.ಆ ಸಮುದಾಯದ ಬಗೆಗಿನ ಸಮಾಜದ ಭಾವನೆಯನ್ನು ಅವರು ಸ್ಫಷ್ಟವಾಗಿ ಹೇಳಿದರು.
ಅಂದರೆ ಮೀಸಲಾತಿಯಿಂದಲೂ ಸಮಾಜ ಬದಲಾಗಲಿಲ್ಲ, ಬ್ರಾಹ್ಮಣ ಮನೆಯಲ್ಲಿ ಊಟ ಮಾಡಿಯೂ ಸಮುದಾಯದ ಸ್ಥಿತಿ ಬದಲಾಗಲಿಲ್ಲ.
ಹಾಗಿದ್ದರೆ ನಾವು ಈಗ ಯೋಚಿಸಬೇಕಾದ್ದು ಸಮುದಾಯದ ಅಭಿವೃದ್ಧಿ ಕಡೆಗೋ ? ಕ್ಷೇತ್ರದ ಅಭಿವೃದ್ಧಿ ಕಡೆಗೋ ? ಹಿಂದುತ್ವದ ಕಡೆಗೋ?
ಸಮುದಾಯದ ಅಭಿವೃದ್ಧಿಗೆ ಸೀಟು ನೀಡಿ ಪ್ರಯೋಜನ ಇಲ್ಲ ಎನ್ನುವುದು ಈಗಾಗಲೇ ಪಡೆದ ಸ್ಥಾನದಿಂದ ತಿಳಿಯಿತು. ಹಾಗಿದ್ದರೆ ಕ್ಷೇತ್ರದ ಅಭಿವೃದ್ಧಿಗೆ ವಿಭಿನ್ನ ಯೋಚನೆ ಬೇಕಾಗಿದೆ ಅಂತಲೇ ಆಯ್ತು. ಮೀಸಲಾತಿ ಪರಿಣಾಮಕಾರಿ ಹೇಗೆ? ಕ್ಷೇತ್ರದ ಅಭಿವೃದ್ಧಿ ಹೇಗೆ ?ಯೋಚಿಸಬೇಕು. ಬರೀ ಸೀಟು ಬಂದು ನಮಗೇನು ಪ್ರಯೋಜನ? ಸಮಾಜಕ್ಕೂ ಸಮುದಾಯಕ್ಕೂ ಲಾಭ ಆಗಬೇಕಲ್ಲ…!.
ಬರಹ: ಮಹೇಶ್ ಪುಚ್ಚಪ್ಪಾಡಿ, ಪತ್ರಕರ್ತರು
ಜಾತಿ ಆಧಾರಿತ ಮೀಸಲಾತಿ ಅನ್ನೋದು ವಿಫಲ ನೀತಿ. ಅದನ್ನು ಪುನರ್ ಪರಿಶೀಲಿಸಬೇಕಾಗಿದೆ.
ಪರಿಶಿಷ್ಟರಿಗೆ ಮೀಸಲಾತಿ ನೀಡಿ, ಬಿಜೆಪಿ ಅದನ್ನು ಕಟ್ಟಕಡೆಯ ವ್ಯಕ್ತಿಗಳಿಗೆ ಕೊಟ್ಟರೂ ಆ ಸಮುದಾಯದಲ್ಲಿ ಹೇಳಿಕೊಳ್ಳುವಂತಹ ಬದಲಾವಣೆ ಆಗಿಲ್ಲ ಅಂದ್ರೆ ಜಾತಿ ಮೀಸಲಾತಿ ಎಂಬ ಪರಿಕಲ್ಪನೆಯೇ ಸರಿ ಇಲ್ಲ ಎನ್ನಬಹುದು