Ad Widget .

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಕಿರಣ್ ಕೆ ವಿ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ

ಸಮಗ್ರ ನ್ಯೂಸ್: ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಆಯೋಜಿಸಿದ್ದ ಕರೋಕೆ ಸಂಗೀತ ಕಾರ್ಯಕ್ರಮವು ಇತ್ತೀಚಿಗೆ ನೆರವೇರಿತು .

Ad Widget . Ad Widget .

ಗಾಯಕರು ಹಾಗೂ ಪೊಲೀಸ್ ಅಧಿಕಾರಿಯಾದ ಕೃಷ್ಣ ಸೀತಂಗೋಳಿ ಅವರ ಸುಪುತ್ರ ದಿವಂಗತ ಕಿರಣ್ ಕೆ ವಿ ಅವರ 3 ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಕರೋಕೆ ಗಾಯನ ಕಾರ್ಯಕ್ರಮವು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷರಾದ ಎಚ್ .ಭೀಮರಾವ್ ವಾಷ್ಠರ್ ಅವರ ಅದ್ಯಕ್ಷತೆಯಲ್ಲಿ ಮೂಡಿಬಂತು .

Ad Widget . Ad Widget .

ಸಂಗೀತ ಗಾಯನ ಕಾರ್ಯಕ್ರಮದಲ್ಲಿ ವಿಶೇಷವಾಗಿ ಚಲನಚಿತ್ರದ ಶೋಕಗೀತೆಗಳನ್ನೇ ಹಾಡಿ ಅಗಲಿದ ಕಿರಣ್ ಕೆ ವಿ ಅವರಿಗೆ ಹಾಡುನಮನ ಸಲ್ಲಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿಶ್ವನಾಥ್ ಸೀತಂಗೋಳಿ ಪುತ್ತಿಗೆ , ಕಾವ್ಯಾ ಕೆ ವಿ ಸೀತಂಗೋಳಿ , ದಿ | ವಿಶ್ವದೀಪ್ ಕುಂದಲ್ಪಾಡಿ , ಶಿವಪ್ರಸಾದ್ ಶೆಟ್ಟಿ ಪುತ್ತಿಗೆ , ರಾಧಾ ಉಪ್ಪಳ , ತನ್ಮಯ್ ಸೋಮಯಾಗಿ ಸುಳ್ಯ , ಸಂಗೀತಾ ಶೆಟ್ಟಿ ಕಾಸರಗೋಡು , ಮುರಳಿ ಕೃಷ್ಣ ಯಾದವ್ ನೀರ್ಚಾಲು , ಪೂಜಾಶ್ರೀ ಬಳ್ಳಡ್ಕ ಸುಳ್ಯ , ಪುಷ್ಪಾ ಎಡಮಂಗಲ ಸುಳ್ಯ , ಮಮತಾ ಮಡಿಕೇರಿ , ಜಯಂತ್ ಮೆತ್ತಡ್ಕ , ಮಹೇಶ್ ಮಂಜೆಶ್ವರ ಹಾಡುಗಳನ್ನು ಹಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು .

ಎಚ್ .ಭೀಮರಾವ್ ವಾಷ್ಠರ್ ಸುಳ್ಯರವರು ಕಾರ್ಯಕ್ರಮ ನಿರೂಪಿಸಿದರು . ಕೃಷ್ಣಾ ಪೊಲೀಸ್ ಸರ್ವರನ್ನೂ ಸ್ವಾಗತಿಸಿದರು . ಶ್ರೀಮತಿ ವಿಜಯಲಕ್ಷ್ಮಿ ಸೀತಂಗೋಳಿ ಅವರು ವಂದಿಸಿದರು . ಚುನಾವಣಾ ನೀತಿಸಂಹಿತೆ ಇದ್ದ ಕಾರಣ ಈ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಆಯೋಜಿಸಲಾಗಿತ್ತು .

Leave a Comment

Your email address will not be published. Required fields are marked *