ಸಮಗ್ರ ನ್ಯೂಸ್: ಜಗದೀಶ್ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾಗಿದೆ. ಆದರೆ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡದಂತೆ ಶೆಟ್ಟರ್ ಅವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ರಾಜ್ಯ ನಾಯಕರು ಮಾತ್ರವಲ್ಲ, ಬಿಜೆಪಿಯ ಪವರ್ ಫುಲ್ ಮ್ಯಾನ್ ಅಮಿತ್ ಶಾ ಖುದ್ದು ಕರೆ ಮಾಡಿ ಶೆಟ್ಟರ್ ಜೊತೆ ಮಾತನಾಡಿದ್ದಾರಂತೆ.
ಜಗದೀಶ್ ಶೆಟ್ಟರ್ ರಾಜೀನಾಮೆ ಬಿಜೆಪಿಗೆ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಪೆಟ್ಟು ನೀಡುವುದು ಪಕ್ಕಾ ಎನ್ನಲಾಗುತ್ತಿದೆ. ಈ ನಡುವೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶೆಟ್ಟರ್ ಅವರನ್ನು ಹೇಗಾದರೂ ಮನವೊಲಿಸಿ, ಬಿಜೆಪಿಯಲ್ಲೇ ಉಳಿಸಿಕೊಳ್ಳುವ ಕಸರತ್ತು ಆರಂಭ ಆಗಿದೆ. ಈಗಾಗಲೇ ಶಾಸಕ ಸ್ಥಾನಕ್ಕೆ ರಿಸೈನ್ ಕೊಟ್ಟು ರೆಬೆಲ್ ಆಗಿರುವ ಮಾಜಿ ಸಿಎಂ ಶೆಟ್ಟರ್, ಪಕ್ಷದ ಸದಸ್ಯತ್ವಕ್ಕೂ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಆದರೆ ಈಗ ಖುದ್ದು ಅಮಿತ್ ಶಾ ಅವರೇ ಎಂಟ್ರಿಯಾಗಿ ಶೆಟ್ಟರ್ ಮನವೊಲಿಕೆಗೆ ಮುಂದಾಗಿದ್ದಾರೆ.
ಬಿಜೆಪಿಯ ಪವರ್ ಫುಲ್ ಮ್ಯಾನ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಖುದ್ದು ಜಗದೀಶ್ ಶೆಟ್ಟರ್ ಅವರ ಜೊತೆ ಮಾತನಾಡಿದ್ದಾರಂತೆ. ಈ ಮೂಲಕ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡದಂತೆ ಆದೇಶಿಸಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಬಂಡಾಯ ಶಮನಕ್ಕೆ ಖುದ್ದು ಬಿಜೆಪಿ ವರಿಷ್ಠರೇ ಎಂಟ್ರಿ ಕೊಟ್ಟಂತೆ ಕಾಣುತ್ತಿದೆ. ಆದರೂ ಟಿಕೆಟ್ ಸಿಗದ ಕೋಪಕ್ಕೆ ಬಿಜೆಪಿಯಲ್ಲಿ ಇನ್ನಷ್ಟು ನಾಯಕರು ಬಂಡೆದ್ದು ಪಕ್ಷಾಂತರ ಮಾಡುವ ಸಾಧ್ಯತೆ ದಟ್ಟವಾಗಿದೆ.ನಾಮಪತ್ರ ಸಲ್ಲಿಕೆಗೆ ಕೆಲದಿನ ಬಾಕಿ ಇರುವಂತೆ ಈ ಬೆಳವಣಿಗೆ ಕಮಲ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.