ಸುಳ್ಯ: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ| ಲೀಟರ್ ಗಟ್ಟಲೆ ಸಾರಾಯಿ ವಶಕ್ಕೆ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆಯ ಕಂಜಿಪಿಲಿ ಮತ್ತು ನೂಜಾಲ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಎ.15ರಂದು ವರದಿಯಾಗಿದೆ.

Ad Widget ... ..

ಖಚಿತ ಮಾಹಿತಿಯ ಆಧಾರದ ಮೇಲೆ ಕಂಜಿಪಿಲಿ ಬಾಲಕೃಷ್ಣ ಎಂಬವರ ಮನೆಗೆ ದಾಳಿ ನಡೆಸಿದ ಅಬಕಾರಿ ಪೋಲೀಸರು ಮನೆಯಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿದ್ದ 27.720 ಲೀಟರ್ ಕಳ್ಳ ಬಟ್ಟಿ ಸಾರಾಯಿ ಹಾಗೂ 340 ಲೀಟರ್ ಗೇರು ಹಣ್ಣಿನ ಕೊಳೆರಸವನ್ನು ಹಾಗೂ ಕಳ್ಳಬಟ್ಟಿ ತಯಾರಿಕೆಗೆ ಉಪಯೋಗಿಸಿದ ಪರಿಕರಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ‌.

Ad Widget

ಇದೇ ಗ್ರಾಮದ ನೂಜಾಲ ವೀರಪ್ಪ ಗೌಡ ಎಂಬವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿದ್ದ 12.500 ಲೀಟರ್ ಕಳ್ಳ ಬಟ್ಟಿ ಸಾರಾಯಿ ಮತ್ತು 50 ಲೀ. ಗೇರು ಹಣ್ಣಿನ ಕೊಳೆರಸ ಹಾಗೂ 30 ಲೀ. ಬೆಲ್ಲದ ಕೊಳೆರಸವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *